ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ ದ.ಕ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆ ಮತ್ತು ಹವಾಮಾನ ಇಲಾಖೆ ‘ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳು ಜುಲೈ 25ರಂದು (ಶುಕ್ರವಾರ) ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಿಂದ ಮಳೆ ತನ್ನ ಆರ್ಭಟವನ್ನು ಮುಂದುವರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.

ಆದೇಶದ ಅನ್ವಯ, ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು, ಪದವಿಪೂರ್ವ ಕಾಲೇಜುಗಳು ಹಾಗೂ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ಅನ್ವಯವಾಗಲಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Spread the love
  • Related Posts

    “ಭಜನೆಯಿಂದ ಸಂಸ್ಕಾರ ವೃದ್ಧಿಯಾಗಿ, ಸಮಾಜಸೇವೆಯ ಮನೋಭಾವ ಬೆಳೆಯಲಿ; ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಲಿ” : ಶಾಸಕ ಹರೀಶ್ ಪೂಂಜಾ

    ಕಡಿರುದ್ಯಾವರ ಗ್ರಾಮದ ಬೆಳ್ಳೂರುಬೈಲಿನಲ್ಲಿ ಶ್ರೀ ಮಾರಿಯಮ್ಮ ದೇವಿ ಭಜನಾ ಮಂದಿರದ ನೂತನ ಕಟ್ಟಡ ಉದ್ಘಾಟನೆ ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಬೆಳ್ಳೂರುಬೈಲಿನಲ್ಲಿ ಶ್ರೀ ಮಾರಿಯಮ್ಮ ದೇವಿ ಭಜನಾ ಮಂದಿರದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಇಂದು ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ನೆರವೇರಿತು.…

    Spread the love

    ಎಕ್ಸೆಲ್ ಕಾಲೇಜಿಗೆ ಮತ್ತೊಂದು ಗರಿ: ಸಿಇಟಿಯಲ್ಲಿ ಮಿಂಚಿದ ಎಕ್ಸೆಲ್ ವಿದ್ಯಾರ್ಥಿಗಳು; ರಾಜ್ಯ ಮಟ್ಟದಲ್ಲಿ ಗಮನಾರ್ಹ ರ‍್ಯಾಂಕ್

    ಸಿಇಟಿ ಫಲಿತಾಂಶದಲ್ಲಿ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳ ಅದ್ಭುತ ಸಾಧನೆ ಗುರುವಾಯನಕೆರೆ, ಜೂನ್ 7: ಇತ್ತೀಚೆಗೆ ಪ್ರಕಟಗೊಂಡ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶದಲ್ಲಿ ಗುರುವಾಯನಕೆರೆಯ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತೊಮ್ಮೆ ಗಮನಾರ್ಹ ಸಾಧನೆ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಮೇಲುಗೈಯನ್ನು…

    Spread the love

    You Missed

    “ಭಜನೆಯಿಂದ ಸಂಸ್ಕಾರ ವೃದ್ಧಿಯಾಗಿ, ಸಮಾಜಸೇವೆಯ ಮನೋಭಾವ ಬೆಳೆಯಲಿ; ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಲಿ” : ಶಾಸಕ ಹರೀಶ್ ಪೂಂಜಾ

    • By admin
    • June 7, 2026
    • 161 views

    ಎಕ್ಸೆಲ್ ಕಾಲೇಜಿಗೆ ಮತ್ತೊಂದು ಗರಿ: ಸಿಇಟಿಯಲ್ಲಿ ಮಿಂಚಿದ ಎಕ್ಸೆಲ್ ವಿದ್ಯಾರ್ಥಿಗಳು; ರಾಜ್ಯ ಮಟ್ಟದಲ್ಲಿ ಗಮನಾರ್ಹ ರ‍್ಯಾಂಕ್

    • By admin
    • June 6, 2026
    • 231 views
    ಎಕ್ಸೆಲ್ ಕಾಲೇಜಿಗೆ ಮತ್ತೊಂದು ಗರಿ: ಸಿಇಟಿಯಲ್ಲಿ ಮಿಂಚಿದ ಎಕ್ಸೆಲ್ ವಿದ್ಯಾರ್ಥಿಗಳು; ರಾಜ್ಯ ಮಟ್ಟದಲ್ಲಿ ಗಮನಾರ್ಹ ರ‍್ಯಾಂಕ್

    ಮನೆ ಮೇಲೆ ತೆಂಗಿನಮರ ಬಿದ್ದು ಹಾನಿ: ಧರ್ಮಸ್ಥಳ ಶೌರ್ಯ ಘಟಕದಿಂದ ನೆರವು

    • By admin
    • June 5, 2026
    • 98 views
    ಮನೆ ಮೇಲೆ ತೆಂಗಿನಮರ ಬಿದ್ದು ಹಾನಿ: ಧರ್ಮಸ್ಥಳ ಶೌರ್ಯ ಘಟಕದಿಂದ ನೆರವು

    “ಗಡಾಯಿಕಲ್ಲಿನಲ್ಲಿ ಚಾರಣಕ್ಕೆ ಬಂದ ಯುವಕನ ಕಾಲು ಟ್ವಿಸ್ಟ್: ಮೂರು ಗಂಟೆಗಳ ಸಾಹಸಮಯ ರಕ್ಷಣಾ ಕಾರ್ಯಾಚರಣೆ”

    • By admin
    • June 4, 2026
    • 86 views
    “ಗಡಾಯಿಕಲ್ಲಿನಲ್ಲಿ  ಚಾರಣಕ್ಕೆ ಬಂದ ಯುವಕನ ಕಾಲು ಟ್ವಿಸ್ಟ್: ಮೂರು ಗಂಟೆಗಳ ಸಾಹಸಮಯ ರಕ್ಷಣಾ ಕಾರ್ಯಾಚರಣೆ”

    “ಮಳೆಯ ಸವಿಯಲ್ಲಿ ಶಿರಾಡಿಯ ಕೆ.ಟಿ.: ರುಚಿ ಮತ್ತು ಸ್ನೇಹದ ಅಪೂರ್ವ ಸಂಗಮ”

    • By admin
    • June 2, 2026
    • 40 views
    “ಮಳೆಯ ಸವಿಯಲ್ಲಿ ಶಿರಾಡಿಯ ಕೆ.ಟಿ.: ರುಚಿ ಮತ್ತು ಸ್ನೇಹದ ಅಪೂರ್ವ ಸಂಗಮ”

    ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅವರಿಗೆ ಗೌರವ ಸಮರ್ಪಣೆ

    • By admin
    • June 2, 2026
    • 36 views
    ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅವರಿಗೆ ಗೌರವ ಸಮರ್ಪಣೆ