ಟ್ರ್ಯಾಕ್ಟರ್ ಪಲ್ಟಿಯಾಗಿ 6 ಮಂದಿ ದುರ್ಮರಣ! 8ಜನರಿಗೆ ಗಂಭೀರ ಗಾಯ

ಕನಕಪುರ: ಟ್ರ್ಯಾಕ್ಟರ್ ಪಲ್ಟಿಯಾಗಿ 6 ಮಂದಿ ಸಾವನ್ನಪ್ಪಿರುವ ಘಟನೆ ಕನಕಪುರದ ಗಡಿ ಭಾಗದಲ್ಲಿ ನಡೆದಿದೆ. ಮೃತರೆಲ್ಲಾ ಕನಕಪುರ ತಾಲೂಕಿನ ಕೆರಳಾಳುಸಂದ್ರದ ಗ್ರಾಮಸ್ಥರು ಎನ್ನಲಾಗಿದೆ.

ದುರ್ಘಟನೆಯಲ್ಲಿ 8 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ ಅಂತಾ ವರದಿಯಾಗಿದೆ.

READ ALSO

ಗಂಭೀರವಾಗಿ ಗಾಯಗೊಂಡಿರುವವರನ್ನ ಹುಣಸನಹಳ್ಳಿ ಸರ್ಕಾರಿ ಆಸ್ಪತ್ರೆ ಹಾಗೂ ತಮಿಳುನಾಡು ಗಡಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ..

ಕೆರಳಾಳುಸಂದ್ರದ ಗ್ರಾಮದ 15 ಮಂದಿ ಟ್ರ್ಯಾಕ್ಟರ್ ಮೂಲಕ ತಮಿಳುನಾಡಿನ ದಬ್ಬಾಗುಳೇಶ್ವರ (ದಬ್ಬಗುಳಿಯ ಬಸವೇಶ್ವರ ) ದೇವಾಲಯ ನೋಡಲು ಬಂದಿದ್ದರು. ವೇಳೆ ಕನಕಪುರದ ಗಡಿ ಭಾಗದಲ್ಲಿ ಟ್ರ್ಯಾಕ್ಟರ್​ನ ಬ್ರೇಕ್ ಕಟ್ ಆಗಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.