
ಬೆಳ್ತಂಗಡಿ: ಶಾಲಾ ಮಕ್ಕಳಿಗೆ ಭತ್ತದ ನಾಟಿ ಪ್ರಾತ್ಯಕ್ಷಿಕೆ ಕನ್ಯಾಡಿಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಭತ್ತದ ನಾಟಿ ಪ್ರಾತ್ಯಕ್ಷಿಕೆ ಗಂಗ್ಯೆತ್ಯಾರ್ ಗದ್ದೆಯಲ್ಲಿ ನಡೆಯಿತು. ಕನ್ಯಾಡಿ ಗಂಗೆತ್ಯಾರ್ ನ ಪಡ್ವೆಟ್ನಾಯರ ಕುಟುಂಬದ ಗದ್ದೆಯಲ್ಲಿ ಕನ್ಯಾಡಿ ಸರ್ಕಾರಿ ಶಾಲೆಯ ಏಳು ಮತ್ತು ಎಂಟನೇ ತರಗತಿಯ ಮಕ್ಕಳಿಗೆ ಭತ್ತದ ನಾಟಿ ಮಾಡುವ ಪ್ರಾತ್ಯಕ್ಷಿಕೆಯು ಮುಖ್ಯೋಪಾಧ್ಯಾಯರಾದ ಮರಿಯಪ್ಪ ಗೌಡ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನಂದ ಭಟ್ ಕೆ ಇವರ ನೇತೃತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ನಡೆಯಿತು. ಈ ಸಂದರ್ಭದಲ್ಲಿ ಮಾಧವ ಪಡ್ವೆಟ್ನಾಯರ ಶ್ರೀಮತಿ ಶಾಂತಾ ಅವರು ಮಕ್ಕಳಿಗೆ ಹಲವು ಮಾಹಿತಿಗಳನ್ನು ನೀಡಿದರು ಹಾಗೂ ಶಾಲಾ ಸಹ ಶಿಕ್ಷಕ, ಶಿಕ್ಷಕಿಯರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಪಡ್ವೆಟ್ನಾಯರ ಮನೆಯಿಂದ ಭೋಜನ ವ್ಯವಸ್ಥೆ ಯನ್ನು ಮಾಡಿ ಸಹಕರಿಸಿದರು.