ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್! ನಾಳೆ ನಡೆಯುತ್ತೇ ಪ್ರಮಾಣವಚನ ಕಾರ್ಯಕ್ರಮ! ಎರಡು ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ! ನಾಳೆ ಬೆಳಗ್ಗೆ ಶುಭ ಸೂಚನೆ ಸಿಗಲಿದೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವ ಸಂಪುಟ ರಚನೆ ಸಂಬಂಧ ವರಿಷ್ಠರ ಭೇಟಿಗೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಬೆಳಗ್ಗೆ ಬೆಂಗಳೂರಿಗೆ ತಲುಪಲಿದ್ದಾರೆ.

ನಿನ್ನೆಯಿಂದ ವರಿಷ್ಠರ ಭೇಟಿಯಲ್ಲಿ ನಿರತರಾಗಿರುವ ಬೊಮ್ಮಾಯಿ, ಸಚಿವರ ಪಟ್ಟಿಗೆ ಗ್ರೀನ್​ಸಿಗ್ನಲ್​ ಪಡೆಯಲು ಹೈಕಮಾಂಡ್‌ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಕೇಂದ್ರ ಬಿಜೆಪಿ ನಾಯಕರ ಭೇಟಿ ಬಳಿಕ ದೆಹಲಿಯಲ್ಲಿ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಸಂಜೆ ಅಂತಿಮವಾಗಿ ಸಂಪೂರ್ಣ ಮಾತುಕತೆ ನಡೆಸಿದ್ದೇವೆ. ನಾಳೆ ಬೆಳಗ್ಗೆ ಅಂತಿಮ ತೀರ್ಮಾನ ಹೇಳುವುದಾಗಿ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಅದರಂತೆ, ನಾಳೆ ಬೆಳಗ್ಗೆ ಶುಭ ಸೂಚನೆ ಸಿಗಲಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಹೈಕಮಾಂಡ್‌ ಅಂತಿಮ ತೀರ್ಮಾನ ಹೇಳಿದ ಬಳಿಕ ಪಟ್ಟಿ ಪ್ರಕಟ ಮಾಡುತ್ತೇವೆ. ನಾಳೆ ಮಧ್ಯಾಹ್ನ ಅಥವಾ ಸಂಜೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಡಿಸಿಎಂಗಳ ಬಗ್ಗೆ ಹೈಕಮಾಂಡ್‌ ತೀರ್ಮಾನವೇ ಅಂತಿಮವಾಗುತ್ತೆ. ವಿಜಯೇಂದ್ರಗೆ ಸ್ಥಾನಮಾನ ಬಗ್ಗೆ ಹೈಕಮಾಂಡ್‌ ನಿರ್ಧರಿಸುತ್ತೆ. ಯಡಿಯೂರಪ್ಪ ಜೊತೆ ಚರ್ಚಿಸಿ ಹೈಕಮಾಂಡ್‌ ನಿರ್ಧರಿಸುತ್ತೆ. ಹಿರಿಯರಿಗೆ ಕೊಕ್‌ ನೀಡುವ ಬಗ್ಗೆಯೂ ವರಿಷ್ಠರೇ ನಿರ್ಧರಿಸ್ತಾರೆ. ನಾಯಕರು 2-3 ವಿಚಾರಗಳ ಬಗ್ಗೆ ನಾಳೆ ಬೆಳಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ನಾಳೆ ಪಕ್ಷದ ಯಾವುದೇ ವರಿಷ್ಠರನ್ನು ಭೇಟಿಯಾಗಲ್ಲ. ಪಕ್ಷದ ಹೈಕಮಾಂಡ್ ಫೋನ್ ಮೂಲಕವೇ ಮಾಹಿತಿ ನೀಡುತ್ತೆ. 2 ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

Spread the love
  • Related Posts

    ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕ ರಚನೆ: ನಿಶಾನ್ ಬಂಗೇರ ನಾರ್ಯ ಅಧ್ಯಕ್ಷರಾಗಿ ಆಯ್ಕೆ

    ಬೆಳ್ತಂಗಡಿ, ಜೂನ್ 13: ಸ್ಥಳೀಯ ಪತ್ರಿಕೋದ್ಯಮವನ್ನು ಮತ್ತಷ್ಟು ಬಲಪಡಿಸುವ ಹಾಗೂ ಪತ್ರಕರ್ತರ ಹಿತರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಬೆಳ್ತಂಗಡಿ ತಾಲೂಕು ಘಟಕದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು. ಸಂಘದ ಮುಂದಿನ ಅವಧಿಗೆ…

    Spread the love

    ಓರಿಯಂಟೇಶನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸಿನ ಮಂತ್ರ, ಶ್ರದ್ಧೆ ಮತ್ತು ಪರಿಶ್ರಮದಿಂದ ಉಜ್ವಲ ಭವಿಷ್ಯ ಸಾಧ್ಯ: ಸ್ಮಿತೇಶ್ ಬಾರ್ಯ

    ಗುರುವಾಯನಕೆರೆ: ಹತ್ತನೇ ತರಗತಿಯ ಬಳಿಕ ಒಳ್ಳೆಯ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಬುದ್ಧಿವಂತಿಕೆ ಇದೆ. ಎಕ್ಸೆಲ್ ನ್ನು ಆಯ್ಕೆ ಮಾಡಿಕೊಂಡ ನೀವು ಬುದ್ಧಿವಂತರು. ಯಾಕೆಂದರೆ ಕಡಿಮೆ ಅವಧಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಏಮ್ಸ್, ಜಿಪ್ಯಾರ್,ಐಐಟಿ, ಎನ್ ಐ ಐ ಟಿ ಸೇರಿ ಭಾರತದ ಪ್ರತಿಷ್ಠಿತ…

    Spread the love

    You Missed

    ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕ ರಚನೆ: ನಿಶಾನ್ ಬಂಗೇರ ನಾರ್ಯ ಅಧ್ಯಕ್ಷರಾಗಿ ಆಯ್ಕೆ

    • By admin
    • June 13, 2026
    • 44 views
    ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕ ರಚನೆ: ನಿಶಾನ್ ಬಂಗೇರ ನಾರ್ಯ ಅಧ್ಯಕ್ಷರಾಗಿ ಆಯ್ಕೆ

    ಓರಿಯಂಟೇಶನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸಿನ ಮಂತ್ರ, ಶ್ರದ್ಧೆ ಮತ್ತು ಪರಿಶ್ರಮದಿಂದ ಉಜ್ವಲ ಭವಿಷ್ಯ ಸಾಧ್ಯ: ಸ್ಮಿತೇಶ್ ಬಾರ್ಯ

    • By admin
    • June 13, 2026
    • 19 views
    ಓರಿಯಂಟೇಶನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸಿನ ಮಂತ್ರ, ಶ್ರದ್ಧೆ ಮತ್ತು ಪರಿಶ್ರಮದಿಂದ ಉಜ್ವಲ ಭವಿಷ್ಯ ಸಾಧ್ಯ: ಸ್ಮಿತೇಶ್ ಬಾರ್ಯ

    ಸ್ಪರ್ಧಾತ್ಮಕ ಪರೀಕ್ಷೆಗಳತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಒಲಿಂಪಿಯಾಡ್ ಕಾರ್ಯಕ್ರಮ,ಸಾಧಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ

    • By admin
    • June 13, 2026
    • 58 views
    ಸ್ಪರ್ಧಾತ್ಮಕ ಪರೀಕ್ಷೆಗಳತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಒಲಿಂಪಿಯಾಡ್ ಕಾರ್ಯಕ್ರಮ,ಸಾಧಕ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ

    ಬೆಳ್ತಂಗಡಿ ನರಸಿಂಹಗಡ (ಗಡಾಯಿಕಲ್ಲು) ಚಾರಣಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಿದ ಅರಣ್ಯ ಇಲಾಖೆ!!!

    • By admin
    • June 13, 2026
    • 21 views
    ಬೆಳ್ತಂಗಡಿ ನರಸಿಂಹಗಡ (ಗಡಾಯಿಕಲ್ಲು) ಚಾರಣಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಿದ ಅರಣ್ಯ ಇಲಾಖೆ!!!

    ಲ್ಯಾಂಡಿಂಗ್ ವೇಳೆ ದುರಂತ: ಬೆಂಕಿಗಾಹುತಿಯಾದ ವಾಯುಪಡೆಯ AN-32 ವಿಮಾನ

    • By admin
    • June 13, 2026
    • 186 views
    ಲ್ಯಾಂಡಿಂಗ್ ವೇಳೆ ದುರಂತ: ಬೆಂಕಿಗಾಹುತಿಯಾದ ವಾಯುಪಡೆಯ AN-32 ವಿಮಾನ

    ಎಕ್ಸೆಲ್ ಕಾಲೇಜಿನ ಮಾನ್ಯತೆ ರದ್ದು ಸುದ್ದಿ ಸುಳ್ಳು: ಆಡಳಿತ ಮಂಡಳಿ ಸ್ಪಷ್ಟನೆ

    • By admin
    • June 12, 2026
    • 2180 views
    ಎಕ್ಸೆಲ್ ಕಾಲೇಜಿನ ಮಾನ್ಯತೆ ರದ್ದು ಸುದ್ದಿ ಸುಳ್ಳು: ಆಡಳಿತ ಮಂಡಳಿ ಸ್ಪಷ್ಟನೆ