ಕೇರಳ : ಕೇರಳದ ಅನೇಕ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಅಕ್ಷರಶಃ ಮಳುಗಡೆಯಾಗುವ ಸ್ಥಿತಿಗೆ ಬಂದಿದೆ. ಐದು ಜಿಲ್ಲೆಗಳಲ್ಲಿ ರೆಡ್ ಆಲರ್ಟ್ ಹಾಗೂ ಏಳು ಜಿಲ್ಲೆಗಳಲ್ಲಿ ಆರೆಂಜ್ ಆಲರ್ಟ್ ಘೋಷಿಸಲಾಗಿದೆ.
ಕೇರಳದ ದಕ್ಷಿಣ ಹಾಗೂ ಮಧ್ಯಭಾಗದ ಜಿಲ್ಲೆಗಳಲ್ಲಿ ಶನಿವಾರ ಭಾರಿ ಮಳೆಯಾದ ಕಾರಣ, ನದಿಗಳು ಉಕ್ಕಿ ಹರಿಯುತ್ತಿವೆ. ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯಿರುವ ಕಾರಣ ಹವಾಮಾನ ತಜ್ಞರು ರಾಜ್ಯದ ಐದು ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಿದ್ದಾರೆ.
ಬಸ್ ವೊಂದು ಜಲಾವೃತಗೊಂಡಿದ್ದರಿಂದ ಹೊರಗೆ ಬರಲು ಪ್ರಯಾಣಿಕರು ಹರಸಾಹಸಪಡುವಂತಾಯಿತು. ಮತ್ತೊಂದೆಡೆ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ . ಈ ವಿಡಿಯೋಗಳು ಇದೀಗ ವೈರಲ್ ಆಗಿವೆ.