ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ದೂಂಬೆಟ್ಟು ಕಜೆ ಪ್ರದೇಶದಲ್ಲಿ ಗುರುವಾರ ಕೃಷಿ ತೋಟಗಳಿಗೆ ಕಾಡಾನೆ ದಾಳಿ ನಡೆಸಿ ಹಾನಿ ಮಾಡಿದೆ. ಒಂಟಿ ಸಲಗವೊಂದು ದಾಳಿ ನಡೆಸಿ ಬಾಳೆ, ಅಡಿಕೆ ಸಸಿ ಸಹಿತ ಇತರ ಕೃಷಿಯನ್ನು ಹಾಳು ಮಾಡಿದೆ.
ರತ್ನಾ, ಬಾಬು ಗೌಡ, ಜಿನ್ನಮ್ಮ ಮೊದಲಾದವರ ಅಡಿಕೆ, ತೆಂಗು ಹಾಗೂ ಬಾಳೆ ಕೃಷಿಗೆ ಹಾನಿಯಾಗಿದೆ.ಆನೆ ದಾಳಿ ನಡೆಸಿರುವುದು ಗಮನಕ್ಕೆ ಬಂದಂತೆ ಅಕ್ಕಪಕ್ಕದ ಮನೆಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳೀಯರು ದೊಂದಿ ಹಿಡಿದು, ಪಟಾಕಿ ಸಿಡಿಸಿ ಆನೆಯನ್ನು ಕಾಡಿನತ್ತ ಓಡಿಸಿದ್ದಾರೆ. ಘಟನೆ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಮುಂಡಾಜೆ ಕಡಿರುದ್ಯಾವರ ಪರಿಸರದಲ್ಲಿ ಮತ್ತೆ ಮತ್ತೆ ಕಾಡಾನೆ ಕಾಣಿಸಿಕೊಳ್ಳುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ.