ಪುತ್ತೂರು: ಕೋಟಿ-ಚೆನ್ನಯರು ಜನ್ಮಸ್ಥಳವಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಎ.10ರಂದು ವಿಸ್ಮಯವೊಂದು ನಡೆದಿದೆ. ಅದರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋಟಿ-ಚೆನ್ನಯರು ತಮ್ಮ ಬದುಕಿನುದ್ದಕ್ಕೂ ಅರಾಧಿಸಿಕೊಂಡು ಬರುತ್ತಿದ್ದ ನಾಗ ಬಿರ್ಮೆರ್, ನಾಗ ಕನ್ನಿಕೆ, ರಕ್ತೇಶ್ವರಿ ಗುಡಿಗಳು ತೀರ್ಥಬಾವಿ ಹಾಗೂ ಕೋಟಿ ಚೆನ್ನಯರ ಮಾತೆ ದೇಯಿಬೈದಿತಿ (ಸ್ವರ್ಣ ಕೇದಗೆ) ಸಮಾಧಿ ಜೀರ್ಣೋದ್ಧಾರಗೊಂಡಿದ್ದು ಅದರ ಪ್ರತಿಷ್ಠಾ ಬ್ರಹ್ಮಕಲಶಾಭೀಷೆಕ ಎ.21 ರಿಂದ ಎ.24 ರವರೆಗೆ ನಡೆಯಲಿದೆ. ಅದರ ಚಪ್ಪರ ಮುಹೂರ್ತ ಶನಿವಾರ ನಡೆಯಿತು.
ಇನ್ನು ಚಪ್ಪರ ಮೂಹೂರ್ತದ ಬಳಿಕ ಎರುಕೊಟ್ಯದಲ್ಲಿ ಜೀರ್ಣೋದ್ಧಾರಗೊಂಡಿರುವ ತೀರ್ಥ ಬಾವಿಯಲ್ಲಿ ನೀರಿನಲ್ಲಿ ಸಂಚಲನ ಸೃಷ್ಟಿಯಾಗಿ ನಾಗದೇವರ ಹೆಡೆರೂಪ ಕಾಣಿಸಿಕೊಂಡಿದೆ. ಈ ಸಂದರ್ಭ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಮಾಡುತ್ತಿರುವ ಕೋಟಿ ಚೆನ್ನಯ ಜನ್ಮಸ್ಥಾನ ಮತ್ತು ಮೂಲಸ್ಥಾನ ಸಂಚಲನ ಟ್ರಸ್ಟ್ ಇದರ ಹಲವು ಪಧಾದಿಕಾರಿಗಳು ಹಾಗೂ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಹಲವು ಭಕ್ತರು ಈ ಪವಾಡ ಸದೃಶ್ಯ ಘಟನೆಯನ್ನು ವೀಕ್ಷಿಸಿದ್ದಾರೆ. ಅಲ್ಲದೇ ಕೌತುಕಕಾರಿ ಘಟನೆಯ ಫೋಟೋ ಗಳನ್ನು ತಮ್ಮ ಮೊಬೈಲ್ ಪೋನ್ ನಲ್ಲಿ ಸೆರೆ ಹಿಡಿದಿದ್ದಾರೆ.