ಬೆಂಗಳೂರು: ಬೆಂಗಳೂರು ನಗರದ ಲಗ್ಗೆರೆ ಯಲ್ಲಿರುವ ಬ್ಲೆಸ್ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆ “ಅನಾಥ ಅಂದರ ಬುದ್ಧಿಮಾಂದ್ಯ ಮಕ್ಕಳ ಆಶ್ರಮದ ನಿರ್ವಹಣೆ”ಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 3ಲಕ್ಷ ಅನುದಾನ ಮಂಜೂರು
ಧರ್ಮಸ್ಥಳದ ಧರ್ಮಾಧಿಕಾರಿಯವರು ಮಂಜೂರುಗೊಳಿಸಿದ 3 ಲಕ್ಷ ಮೊತ್ತದ ಮಂಜೂರಾತಿ ಪತ್ರವನ್ನು ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ M ರವರು ಬ್ಲೆಸ್ ಸಂಸ್ಥೆಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಯೋಜನಾಧಿಕಾರಿಗಳಾದ ಅಮರ ಪ್ರಸಾದ ಹಾಗೂ ಜನಜಾಗೃತಿ ಯೋಜನಾಧಿಕಾರಿ ಗಳಾದ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು.