ಪುತ್ತೂರಿನಲ್ಲಿ ಲಕ್ಷ್ಯ ಡೇ ಕೇರ್ ಸೆಂಟರ್ ಹಾಗೂ ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಲೋಕಾರ್ಪಣೆ

ಪುತ್ತೂರು: ಬೈಪಾಸ್ ರಸ್ತೆ ಇಲ್ಲಿನ ರವಿಂದ ಕಾಂಪ್ಲೆಕ್ಸ್ ನಲ್ಲಿ ಪ್ರಥಮ ಬಾರಿಗೆ ಸೈಕಾಲಜಿಸ್ಟ್ ಹಾಗೂ ಶಿಕ್ಷಣ ತಜ್ಞರಿಂದಲೇ ನಡೆಸಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಲಕ್ಷ್ಯ ಡೇ ಕೇರ್ ಸೆಂಟರ್ ಹಾಗೂ ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಲೋಕಾರ್ಪಣೆಗೊಂಡಿತು.

ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಜಿತಕಾಮನಂದಜಿ ಲಕ್ಷ್ಯ ಡೇ ಕೇರ್ ಸೆಂಟರ್ ಉದ್ಘಾಟಿಸಿ, ಲಕ್ಷ್ಯ ಡೇ ಕೇರ್ ಒಂದು ವಿನೂತನ ಹೆಜ್ಜೆಯನ್ನು ಇಡುತ್ತಿದೆ. ಮನಃ ಶಾಸ್ತ್ರದ ಹಾಗೂ ಆತ್ಯಾತ್ಮಿಕ ಹಿನ್ನೆಯಲ್ಲಿ ಮಕ್ಕಳಿಗೆ ಅನೇಕ ಚಟುವಟಿಕೆಗಳನ್ನು ಜೋಡಿಸಿಕೊಂಡಿರುವುದು ಶ್ಲಾಘನೀಯ ಸಂಗತಿ. ಒಂದು ಎಳೆ ಮಗುವಿಗೆ ಕೇವಲ ಉತ್ತಮ ಆಹಾರಕ್ರಮ ಮಾತ್ರವೇ ಪರಿಣಾಮವನ್ನು ಬೀರುವುದಿಲ್ಲ. ಮಗುವಿನ ಮಿದುಳಿಗೆ ಸರಿಯಾದ ಪ್ರಮಾಣದಲ್ಲಿ ಜ್ಞಾನಾರ್ಜನೆಯಾಗಬೇಕು. ಆಗ ಮಾತ್ರವೇ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ಇದರೊಂದಿಗೆ ಪಾಲಕರು ಕೂಡಾ ಇತ್ತೀಚಿನ ದಿನಗಳಲ್ಲಿ ಮಾರ್ಗದರ್ಶನವನ್ನು ಪಡೆಯಬೇಕಿರುವ ಅಗತ್ಯತೆ ಕಾಣುತ್ತಿದೆ. ಗರ್ಭಾವಸ್ಥೆಯಲ್ಲೇ ಮಗುವಿಗೆ ಸಂಸ್ಕಾರವನ್ನು ಕೊಡಲು ಅವಕಾಶವಿದ್ದು ಅದನ್ನು ಪುತ್ತೂರಿನಲ್ಲೇ ಪಡೆಯಲು ಸಾಧ್ಯವಾಗುವಂತೆ ಲಕ್ಷ್ಯ ತಂಡವು ಮಾಡುತ್ತಿದೆ. ಮಗುವಿನ ಹುಟ್ಟು ಸಂಸ್ಕಾರ ಅದರ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು.

ತದನಂತರ ಕಲ್ಲಡ್ಕ ಡಾ.ಪ್ರಭಾಕರ ಭಟ್ ಇವರು ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಉದ್ಘಾಟಿಸಿ, ಮನಸ್ಸು ಒಂದಿದ್ದರೆ ಏನನ್ನು ಬೇಕಿದ್ದರೂ ಸಾಧಿಸಬಹುದು. ಮನಸ್ಸೇ ಎಲ್ಲದಕ್ಕೂ ಕಾರಣವಾಗಿರುವಾಗ ನೆಮ್ಮದಿಯ ಮನಸ್ಸಿಲ್ಲದಿದ್ದರೆ ಜೀವನದಲ್ಲಿ ಯಾವುದೂ ಇಲ್ಲವಾದಂತೆ. ಲಕ್ಷ್ಯ ತಂಡವು ಈ ಮೊದಲು ಅನೇಕ ಸಂಶೋಧನೆಯನ್ನು ಮಾಡುತ್ತಾ ಒಂದು ಬಾರಿ ನಮ್ಮ ಬಳಿಗೂ ಬಂದಿದ್ದರು. ಶ್ರೀ ದುರ್ಗಾಪರಮೇಶ್ವರ ಭಟ್ಟರಲ್ಲಿ ಶಿಕ್ಷಣದ ಬಗ್ಗೆ ವಿಶೇಷವಾದ ಚಾಕಚಕ್ಯತೆ ಇದೆ. ಶಿಕ್ಷಣ ಕ್ಷೇತ್ರದ ಹಲವಾರು ಸಂಸ್ಯೆಗಳಿಗೆ ಇದೊಂದು ಉತ್ತರವಾಗಬಲ್ಲದು. ತಮ್ಮ ತಾರುಣ್ಯಾವಸ್ಥೆಯಲ್ಲೇ ಬಹುದೊಡ್ಡ ಆಲೋಚನೆಗಳನ್ನು ಹೊಂದಿರುವ ಸಂಸ್ಥೆಯೊಂದನ್ನು ಸಮಾಜಕ್ಕೆ ನೀಡುತ್ತಿದ್ದಾರೆ. ಇದು ಅತ್ಯಂತ ಶ್ಲಾಘನೀಯ ಎಂದರು. ಸಂಸ್ಥೆಯ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಬೆಳಗ್ಗೆ. ಸರಸ್ವತಿ ಪೂಜಾ ಕಾರ್ಯವು ವೇದ ಮೂರ್ತಿ ಶ್ರೀ ಕೃಷ್ಣ ಕುಮಾರ ಉಪಾಧ್ಯಾಯ ಇವರಿಂದ ನಡೆಯಿತು. ಲಕ್ಷ್ಯ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ದುರ್ಗಾಪರಮೇಶ್ವರ ಭಟ್ ಇವರು ಸಂಪೂರ್ಣ ಕಾರ್ಯಕ್ರಮದ ನಿರ್ವಹಣೆ ನಡೆಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸನಾತನ ಸಂಸ್ಕೃತಿ ಬಲವರ್ಧನೆ ಹಿನ್ನಲೆಯಲ್ಲಿ “ ಸಮಾಜ ನಿಧಿ” ಕಾಣಿಕೆಯನ್ನು ಶ್ರೀ ಸುಬ್ರಹ್ಮಣ್ಯ ಭಟ್ ಮಜ್ಜಾರಡ್ಕ ಇವರು ಡಾ. ಪ್ರಭಾಕರ ಭಟ್ ಇವರಿಗೆ ಹಸ್ತಾಂತರ ಮಾಡಿದರು. ಡೇ ಕೇರ್ ಸೆಂಟರ್ ಮುಖ್ಯ ನಿರ್ವಾಹಕಿ ಅರ್ಪಿತಾ ಎಂ, ನೇತ್ರಪ್ರಭಾ ಮೊದಲಾದ ಗಣ್ಯರು ಉಪಸ್ಥಿತರಿದ್ದರು

Spread the love
  • Related Posts

    ಸಕಲೇಶಪುರ ಕುಂಬ್ರಹಳ್ಳಿ ಲೋಲಾಕ್ಷಮ್ಮರಿಗೆ ವಾತ್ಸಲ್ಯ ಯೋಜನೆಡಿಯಲ್ಲಿ ವಾತ್ಸಲ್ಯ ಸೂರು ನಿರ್ಮಾಣ

    ಸಕಲೇಶಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ, ಸಮಾಜದಲ್ಲಿನ ಅತ್ಯಂತ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುತ್ತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ಯವರು ತಾಲೂಕಿನ ಮಾಗಲು ಕುಂಬ್ರಹಳ್ಳಿಯ ಮಾಸಾಶನ…

    Spread the love

    ಬೈಕ್ ಸ್ಕೀಡ್ ಆಗಿ ಡಿವೈಡರ್ ಗೆ ಡಿಕ್ಕಿ ಹೊಡೆದು ಸಹಸವಾರ ವಿದ್ಯಾರ್ಥಿ ಸಾವು: ಸವಾರ ಗಂಭೀರ ಗಾಯ

    ಬೆಳ್ತಂಗಡಿ : ಬೈಕ್ ಸ್ಕೀಡ್ ಆಗಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮತ್ತು ಸಹಸವಾರ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಸಹಸವಾರ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಉಜಿರೆ -ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಾಲೇಜ್ ರಸ್ತೆಯಲ್ಲಿರುವ ಪಂಚಮಿ…

    Spread the love

    You Missed

    ಸಕಲೇಶಪುರ ಕುಂಬ್ರಹಳ್ಳಿ ಲೋಲಾಕ್ಷಮ್ಮರಿಗೆ ವಾತ್ಸಲ್ಯ ಯೋಜನೆಡಿಯಲ್ಲಿ ವಾತ್ಸಲ್ಯ ಸೂರು ನಿರ್ಮಾಣ

    • By admin
    • March 30, 2026
    • 56 views
    ಸಕಲೇಶಪುರ ಕುಂಬ್ರಹಳ್ಳಿ ಲೋಲಾಕ್ಷಮ್ಮರಿಗೆ ವಾತ್ಸಲ್ಯ ಯೋಜನೆಡಿಯಲ್ಲಿ ವಾತ್ಸಲ್ಯ ಸೂರು ನಿರ್ಮಾಣ

    ಬೈಕ್ ಸ್ಕೀಡ್ ಆಗಿ ಡಿವೈಡರ್ ಗೆ ಡಿಕ್ಕಿ ಹೊಡೆದು ಸಹಸವಾರ ವಿದ್ಯಾರ್ಥಿ ಸಾವು: ಸವಾರ ಗಂಭೀರ ಗಾಯ

    • By admin
    • March 29, 2026
    • 273 views
    ಬೈಕ್ ಸ್ಕೀಡ್ ಆಗಿ ಡಿವೈಡರ್ ಗೆ ಡಿಕ್ಕಿ ಹೊಡೆದು ಸಹಸವಾರ ವಿದ್ಯಾರ್ಥಿ ಸಾವು: ಸವಾರ ಗಂಭೀರ ಗಾಯ

    ಭಾರಿ ಗಾಳಿ ಮಳೆಗೆ ಆಟೋ ರಿಕ್ಷಾ ನಿಲ್ದಾಣದ ಮೇಲ್ಛಾವಣಿ ಕುಸಿತ

    • By admin
    • March 28, 2026
    • 119 views
    ಭಾರಿ ಗಾಳಿ ಮಳೆಗೆ ಆಟೋ ರಿಕ್ಷಾ ನಿಲ್ದಾಣದ ಮೇಲ್ಛಾವಣಿ ಕುಸಿತ

    ಎಕ್ಸೆಲ್ ಬೆಳಕು ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದ ಶಿಕ್ಷಣದ ಜೊತೆಗೆ ಮದ್ಯಾಹ್ನದ ಊಟ ಹಾಗೂ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು: ಸುಮಂತ್ ಕುಮಾರ್ ಜೈನ್

    • By admin
    • March 27, 2026
    • 81 views
    ಎಕ್ಸೆಲ್ ಬೆಳಕು ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದ ಶಿಕ್ಷಣದ ಜೊತೆಗೆ ಮದ್ಯಾಹ್ನದ ಊಟ ಹಾಗೂ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು: ಸುಮಂತ್ ಕುಮಾರ್ ಜೈನ್

    ದೇಶದಲ್ಲಿ ‘ಎನರ್ಜಿ ಲಾಕ್‌ಡೌನ್’ ಸುಳ್ಳು ಸುದ್ದಿಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

    • By admin
    • March 27, 2026
    • 32 views
    ದೇಶದಲ್ಲಿ ‘ಎನರ್ಜಿ ಲಾಕ್‌ಡೌನ್’ ಸುಳ್ಳು ಸುದ್ದಿಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

    ಧರ್ಮಸ್ಥಳ -ಸುಬ್ರಹ್ಮಣ್ಯ ಹೆದ್ದಾರಿಯ ಮರ್ದಾಳ ಬ್ರಾಂತಿಕಟ್ಟೆ ಬಳಿ ಕಾರು ಪಲ್ಟಿ ಹಲವರಿಗೆ ಗಂಭೀರ ಗಾಯ

    • By admin
    • March 23, 2026
    • 85 views
    ಧರ್ಮಸ್ಥಳ -ಸುಬ್ರಹ್ಮಣ್ಯ ಹೆದ್ದಾರಿಯ ಮರ್ದಾಳ ಬ್ರಾಂತಿಕಟ್ಟೆ ಬಳಿ ಕಾರು ಪಲ್ಟಿ ಹಲವರಿಗೆ ಗಂಭೀರ ಗಾಯ