ಭೂ ಸರ್ವೆ ಮಾಡಿ ಗಡಿಯನ್ನ ನಿಗದಿಪಡಿಸುವ ಅಧಿಕಾರ ತಹಶಿಲ್ದಾರ್‌ಗಿದೆ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು : ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 140(2)ರಡಿಯಲ್ಲಿ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯೊಳಗೆ(Municipal Corporation Coverage) ಬರುವ ಭೂಮಿಯ ಸರ್ವೆ(land Survey) ಮಾಡಿ ಗಡಿಯನ್ನ ನಿಗದಿಪಡಿಸುವ ಅಧಿಕಾರ ತಹಶಿಲ್ದಾರ್‌(Tehsildar)ಗಿದೆ ಎಂದು ರಾಜ್ಯ ಹೈಕೋರ್ಟ್ ಹೇಳಿದೆ.

ಬೆಂಗಳೂರು ಬಸವನಗುಡಿಯ ನಿವಾಸಿ ಸುನಿಲ್ ಚಜೆಡ್ ಅನ್ನೋರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದ್ದು, ‘ಭೂಮಿಯ ಸರ್ವೆ ಮಾಡಿ ಗಡಿಯನ್ನ ನಿಗದಿಪಡಿಸುವ ಅಧಿಕಾರ ತಹಶಿಲ್ದಾರ್‌ಗಿದೆ’ ಎಂದಿದೆ.

READ ALSO

‘ಕಾಯಿದೆಯ ಸೆಕ್ಷನ್ 140(2)ರ ಅಡಿಯಲ್ಲಿ ಸರ್ವೆ ನಂಬರ್‌ನ ಗಡಿಯನ್ನ ನಿರ್ಧರಿಸುವ ಅಧಿಕಾರ ತಹಶೀಲ್ದಾರ್‌ಗಿದೆ. ಈ ಅಧಿಕಾರವನ್ನ ಪುರಸಭೆಯ ವ್ಯಾಪ್ತಿಯಲ್ಲಿ ಅಥವಾ ಪುರಸಭೆಯ ಮಿತಿಯ ಹೊರಗಿದ್ಯಾ ಅನ್ನೋ ಅಂಶವನ್ನ ಲೆಕ್ಕಿಸದೆಯೇ ಸರ್ವೆ ಸಂಖ್ಯೆ ಅಥವಾ ಹಿಡುವಳಿಗಳಿಗೆ ಸಂಬಂಧಿಸಿದಂತೆ ನಡೆಸಬಹುದು’ ಎಂದು ನ್ಯಾಯಾಲಯ ಹೇಳಿದೆ.

ಇನ್ನು ಸರ್ವೆ ನಂಬರಿನ ಗಡಿಗೆ ಸಂಬಂಧಿಸಿದಂತೆ ಯಾವುದೇ ವಿವಾದ ಉಂಟಾದ್ರೆ, ಭೂ ದಾಖಲೆಗಳನ್ನ ಪರಿಗಣಿಸಿ ವಿವಾದವನ್ನ ತಹಶೀಲ್ದಾರ್ ನಿರ್ಧರಿಸುತ್ತಾರೆ’ ಎಂದು ಹೈಕೋರ್ಟ್ ಆದೇಶ ತಿಳಿಸಿದೆ.