ಬೆಳ್ತಂಗಡಿ: ಗೃಹರಕ್ಷಕ ಇಲಾಖೆಯ ಬೆಳ್ತಂಗಡಿ ಗೃಹರಕ್ಷಕ ದಳದಲ್ಲಿ ಘಟಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಜಯಾನಂದ ಲಾಯಿಲ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕ’ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬೆಳ್ತಂಗಡಿ ಗೃಹರಕ್ಷಕ ದಳದಲ್ಲಿ ಕಳೆದ 33 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜಯಾನಂದ ಅವರು 1989ರಲ್ಲಿ ಗೃಹರಕ್ಷಕ ಇಲಾಖೆಯಲ್ಲಿ ಹೋಮ್‌ಗಾರ್ಡ್ ಆಗಿ ಸೇವೆಗೆ ಸೇರಿದ್ದರು. ನಂತರ ಸಹಾಯಕ ಸೆಕ್ಷನ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ಕಳೆದ 15 ವರ್ಷಗಳಿಂದ ಘಟಕಾಧಿಕಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಇವರು ಕಳೆದ 31 ವರ್ಷಗಳಿಂದ ಬೆಳ್ತಂಗಡಿ ತಾಲೂಕು ಪಂಚಾಯತದಲ್ಲಿ ತಾಲೂಕು ಸಂಯೋಜಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಅತ್ಯಂತ ಚುರುಕಿನ ಸ್ವಭಾವದವರಾದ ಇವರು ಹಲವಾರು ಕಾರ್ಯಕ್ರಮಗಳ ನಿರೂಪಣೆ, ತರಬೇತಿಗಳಲ್ಲಿ ತರಬೇತಿದಾರರಾಗಿಯೂ ಕಾರ್ಯ ನಿರ್ವಹಿಸುವ ಇವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಗೃಹರಕ್ಷಕ ಇಲಾಖೆ ‘ಮುಖ್ಯಮಂತ್ರಿ ಚಿನ್ನದ ಪದಕ ಗೌರವ ಪ್ರಶಸ್ತಿ’ ಜೊತೆ ರೂ 5 ಸಾವಿರ ನಗದು ಬಹುಮಾನ ಸಿಗಲಿದೆ.