ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ, ಹಿಜಾಬ್ ವಿವಾದಕ್ಕೆ ಮಹತ್ತರದ ತೀರ್ಪು ನೀಡಿದ ಹೈಕೋರ್ಟ್!

ಬೆಂಗಳೂರು: ರಾಜ್ಯಾದ್ಯಂತ ಭಾರಿ ವಿವಾದ ಸೃಷ್ಟಿಸಿದ ಹಿಜಾಬ್ ಪ್ರಕರಣಕ್ಕೆ ಇಂದು ಮಹತ್ತರದ ತೀರ್ಪು ಪ್ರಕಟ ವಾಗಿದೆ. ಪ್ರತಿಭಟನೆಗಳು, ಆರೋಪ, ಪ್ರತ್ಯಾರೋಪಗಳು ಮತ್ತು ಒಂದರ ಹಿಂದೊಂದು ವಿಚಾರಣೆಗಳ ನಂತರ, ಕರ್ನಾಟಕ ಹೈಕೋರ್ಟ್ ಇಂದು ಹಿಜಾಬ್ ಪ್ರಕರಣದ ತೀರ್ಪು ಪ್ರಕಟಿಸಿದೆ.

ಹಿಜಾಬ್ ಧರಿಸಿವುದು ಇಸ್ಲಾಂ ನ ಅತ್ಯಗತ್ಯ ಭಾಗವಲ್ಲ. ಸಮವಸ್ತ್ರ ಸಂಹಿತೆ ಕುರಿತಾಗಿ ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ. ಇದನ್ನು ಪ್ರಶ್ನಿಸುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಉಡುಪಿ ಕಾಲೇಜಿಗೆ ನಿರ್ದೇಶನ ಹೇರುವ ಅಗತ್ಯವಿಲ್ಲ ಎಂದ ಕೋರ್ಟ್, ಹಿಜಾಬ್ ಗೆ ಅವಕಾಶ ಕೋರಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯನ್ನು ವಜಾ ಮಾಡಿದೆ.

ಉಡುಪಿಯ ಕಾಲೇಜಿನಲ್ಲಿ ಆರಂಭವಾದ ಹಿಜಾಬ್- ಕೇಸರಿ ಶಾಲು ವಿವಾದ ನಂತರ ರಾಜ್ಯದ ಹಲವು ಜಿಲ್ಲೆಗಳಿಗೆ ಹಬ್ಬಿತ್ತು. ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ನಂತರ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ವಸ್ತ್ರಸಂಹಿತೆ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಕೋರ್ಟ್ ಮೆಟ್ಟಿಲೇರಿದ್ದರು.

ಕಾಲೇಜುಗಳಲ್ಲಿ ಹಿಜಾಬ್‌ ನಿರ್ಬಂಧಿಸಿರುವ ಕ್ರಮ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರಸಂಹಿತೆ ಜಾರಿ ಸಂಬಂಧ ಕಳೆದ ಫೆ.5ರಂದು ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರೂ ಸೇರಿ 10ಕ್ಕೂ ಅಧಿಕ ಅರ್ಜಿಗಳು ಹಾಗೂ ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಎಲ್ಲ ಅರ್ಜಿಗಳ ಕುರಿತು ಸತತ 11 ದಿನಗಳ ಕಾಲ ಸುದೀರ್ಘ‌ ವಾದ-ಪ್ರತಿವಾದ ಆಲಿಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌, ನ್ಯಾ. ಖಾಜಿ ಜೈಬುನ್ನಿಸಾ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ಪೂರ್ಣಗೊಳಿಸಿ ಫೆ.25ರಂದು ತೀರ್ಪು ಕಾಯ್ದಿರಿಸಿತ್ತು.

Spread the love
  • Related Posts

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ವೈಭವ,106ಜೋಡಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

    ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಸಂಜೆ ಗಂಟೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 106 ಜೊತೆ ವಧೂ-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಬುಧವಾರ ಬೆಳಿಗ್ಗೆ ಧರ್ಮಾಧಿಕಾರಿ…

    Spread the love

    ಬೆಂಗಳೂರಿನಲ್ಲಿ ಘನಘೋರ ದುರಂತ ಬೌರಿಂಗ್ ಆಸ್ಪತ್ರೆಯ ಕೌಂಪೌಂಡು ಕುಸಿದು ಮೂವರು ಮಕ್ಕಳ ಸಹಿತ 8ಮಂದಿಯ ದುರ್ಮರಣ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಸಂಜೆ ಆರ್ಭಟಿಸಿದ ವರುಣನ ಅಬ್ಬರಕ್ಕೆ ಭೀಕರ ದುರಂತವೊಂದು ಸಂಭವಿಸಿದೆ. ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗದ ಬಳಿಯ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ, ಮೂವರು ಮಕ್ಕಳು ಸೇರಿದಂತೆ ಒಟ್ಟು 8 ಜನರು ಮೃತಪಟ್ಟಿದ್ದಾರೆ. ಬುಧವಾರ…

    Spread the love

    You Missed

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ವೈಭವ,106ಜೋಡಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

    • By admin
    • April 29, 2026
    • 7 views
    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ವೈಭವ,106ಜೋಡಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

    ಬೆಂಗಳೂರಿನಲ್ಲಿ ಘನಘೋರ ದುರಂತ ಬೌರಿಂಗ್ ಆಸ್ಪತ್ರೆಯ ಕೌಂಪೌಂಡು ಕುಸಿದು ಮೂವರು ಮಕ್ಕಳ ಸಹಿತ 8ಮಂದಿಯ ದುರ್ಮರಣ

    • By admin
    • April 29, 2026
    • 44 views
    ಬೆಂಗಳೂರಿನಲ್ಲಿ ಘನಘೋರ ದುರಂತ ಬೌರಿಂಗ್ ಆಸ್ಪತ್ರೆಯ ಕೌಂಪೌಂಡು ಕುಸಿದು ಮೂವರು ಮಕ್ಕಳ ಸಹಿತ 8ಮಂದಿಯ   ದುರ್ಮರಣ

    ಕುಂಟುತ್ತಿರುವ ಕಾಮಗಾರಿಯಿಂದ ಬಿಸಿಲ ಬೇಗೆಗೆ ಬೆಂಡಾದ ಜನ: ಟ್ರಾಫಿಕ್ ಜಾಮ್ ನಿಂದ ಹೈರಾಣಾದ ಜನ

    • By admin
    • April 29, 2026
    • 88 views
    ಕುಂಟುತ್ತಿರುವ ಕಾಮಗಾರಿಯಿಂದ ಬಿಸಿಲ ಬೇಗೆಗೆ ಬೆಂಡಾದ ಜನ: ಟ್ರಾಫಿಕ್ ಜಾಮ್ ನಿಂದ ಹೈರಾಣಾದ ಜನ

    ಬಿರು ಬಿಸಿಲಿನಲ್ಲಿ ಪ್ರಾಣಿ–ಪಕ್ಷಿಗಳಿಗೆ ನೀರುಣಿಸುವ ಮಹತ್ವದ ಕಾರ್ಯಕ್ಕೆ ಮುಂದಾಗೋಣ

    • By admin
    • April 29, 2026
    • 44 views
    ಬಿರು ಬಿಸಿಲಿನಲ್ಲಿ ಪ್ರಾಣಿ–ಪಕ್ಷಿಗಳಿಗೆ ನೀರುಣಿಸುವ ಮಹತ್ವದ ಕಾರ್ಯಕ್ಕೆ ಮುಂದಾಗೋಣ

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ ಇದರ ವತಿಯಿಂದ ಕು.ಪ್ರಾಪ್ತಿ ಎಂ ಗೌಡರಿಗೆ ಗೌರವ ಸನ್ಮಾನ

    • By admin
    • April 28, 2026
    • 84 views
    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ ಇದರ ವತಿಯಿಂದ ಕು.ಪ್ರಾಪ್ತಿ ಎಂ ಗೌಡರಿಗೆ ಗೌರವ ಸನ್ಮಾನ

    SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ 6ಸ್ಥಾನ ಪಡೆದ ಪ್ರಾಪ್ತಿ.ಎಂ ಗೌಡ, ಪ್ರಗತಿ ಸಂಘದಿಂದ ವಿದ್ಯಾರ್ಥಿನಿಗೆ ಸನ್ಮಾನ

    • By admin
    • April 28, 2026
    • 80 views
    SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ 6ಸ್ಥಾನ ಪಡೆದ ಪ್ರಾಪ್ತಿ.ಎಂ ಗೌಡ, ಪ್ರಗತಿ ಸಂಘದಿಂದ ವಿದ್ಯಾರ್ಥಿನಿಗೆ ಸನ್ಮಾನ