ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕ್ಯಾಮೆರಾ ಟ್ಯಾಪಿಂಗ್ ನಲ್ಲಿ ಕಾಣಿಸಿಕೊಂಡ ಕರಡಿ, ಚಿರತೆ!

ಬೆಳ್ತಂಗಡಿ: ಹುಲಿ ಗಣತಿ ಯೋಜನೆಯ ಆಂಗ ವಾಗಿ ನಡೆಯುತ್ತಿರುವ ಕ್ಯಾಮೆರಾ ಟ್ಯಾಪಿಂಗ್‌ನಲ್ಲಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕುರುಬರ ಗುಡ್ಡದ ಕಾಡು ಮನೆ ಪ್ರದೇಶದಲ್ಲಿ ಇರಿಸಲಾಗಿರುವ ಕ್ಯಾಮೆರಾದಲ್ಲಿ ಚಿರತೆ, ಕರಡಿ ಚಲನವಲನದ ದೃಶ್ಯ ಸೆರೆಯಾಗಿವೆ.

READ ALSO

ಈ ಪ್ರದೇಶದಲ್ಲಿ ಚಿರತೆ, ಕರಡಿ ಓಡಾಟ ನಿರಂತರವಾಗಿರುವುದು ದೃಢಪಟ್ಟಿದೆ. ಇಲ್ಲಿ ಚಿರತೆ, ಕರಡಿ ಆಗಾಗ ಕಂಡು ಬರುತ್ತಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಹೆಚ್ಚಿನ ಅಪಾಯ ಉಂಟು ಮಾಡಿಲ್ಲ. ಅಲ್ಲದೆ ಕಾಡುಹಂದಿ, ಮುಳ್ಳುಹಂದಿ, ಜಿಂಕೆ ಮೊದಲಾದ ಪ್ರಾಣಿಗಳು ಕೂಡ ಕ್ಯಾಮೆರಾ ಎದುರು ಅನೇಕ ಬಾರಿ ಓಡಾಟ ನಡೆಸಿವೆ. ತೋಟತ್ತಾಡಿಯಲ್ಲಿ ಇರಿಸಲಾಗಿರುವ ಕ್ಯಾಮೆರಾದಲ್ಲೂ ಮಾ.7ರಂದು ಚಿರತೆ ಸೆರೆಯಾಗಿತ್ತು.

ಇದರಿಂದ ಸದ್ಯ ತಾಲೂಕಿನ ಕೆಲವು ಗ್ರಾಮಗಳಲ್ಲಿ ಚಿರತೆ,ಕರಡಿ ಇರುವುದು ದೃಢಪಟ್ಟಿದೆ. ತಾಲೂಕಿನಲ್ಲಿ ಹಲವು ಕಡೆ ಕ್ಯಾಮೆರಾ ಟ್ಯಾಪಿಂಗ್ ನಡೆಸುತ್ತಿರುವ ಪ್ರದೇಶಗಳ ಸುತ್ತಮುತ್ತ ಕಾಡಾನೆಗಳ ಸಂಚಾರವಿದ್ದರೂ, ಅವು ಕ್ಯಾಮೆರಾ ಎದುರು ಕಂಡುಬಂದಿಲ್ಲ.