ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಜುಲೈ 31ರವರೆಗೂ ಲಾಕ್‌ಡೌನ್ ವಿಸ್ತರಿಸಲು ಮಹಾರಾಷ್ಟ್ರ, ತಮಿಳುನಾಡು ಸರ್ಕಾರ ಮುಂದಾಗಿದೆ.
ಸರ್ಕಾರದ ಹೊಸ ಮಾರ್ಗಸೂಚಿಗಳ ಅನ್ವಯ ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಅನಗತ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದೆ. ಕ್ಷುಲ್ಲಕ ಕಾರಣಕ್ಕಾಗಿ ಹೊರಗಡೆ ಓಡಾಡುವುದು ಸಹ ನಿರ್ಬಂಧಿಸಲಾಗಿದೆ.
ಜುಲೈ ಅಂತ್ಯದವರೆಗೂ ಲಾಕ್‌ಡೌನ್ ವಿಸ್ತರಿಸಿರುವ ಹಿನ್ನೆಲೆ ಸಂಬಂಧಪಟ್ಟ ಜಿಲ್ಲಾಧಿಕಾರಿ ಮತ್ತು ರಾಜ್ಯದ ಮಹಾನಗರ ಪಾಲಿಕೆಗಳ ಆಯುಕ್ತರು, ಅನಗತ್ಯ ಚಟುವಟಿಕೆಗಳು ಮತ್ತು ವ್ಯಕ್ತಿಗಳ ಚಲನೆಯನ್ನು ನಿಯಂತ್ರಿಸಲು ನಿರ್ದಿಷ್ಟ ಕ್ರಮಗಳು ಮತ್ತು ಅಗತ್ಯ ನಿರ್ಬಂಧಗಳನ್ನು ಜಾರಿಗೊಳಿಸಬಹುದು.
ಕೊರೋನಾ ಮಹಾಮಾರಿ ಮಿತಿ ಮೀರಿ ಹೋಗುತ್ತಿರುವ ಹಿನ್ನೆಲೆ ಮಹಾರಾಷ್ಟ್ರ ಹಾಗೂ ತಮಿಳುನಾಡು ಸರಕಾರ ಜುಲೈ31ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿದೆ.
ಕರ್ನಾಟಕದಲ್ಲೂ ಮತ್ತೆ ಲಾಕ್ ಡೌನ್ ಪಕ್ಕಾನಾ?
SSLC ಪರೀಕ್ಷೆ ಮುಗಿದ ಬಳಿಕ ಜುಲೈ 06ರ ಬಳಿಕ 12 ದಿನಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೆ ತರುವ ನಿಟ್ಟಿನಲ್ಲಿ ಇಂದಿನ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಇನ್ನು ಲಾಕ್ ಡೌನ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಕಂದಾಯ ಸಚಿವ ಆರ್ .ಅಶೋಕ್ ಅವರು ಜುಲೈ 7 ನಂತರ ಸಿಎಂ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಜಾರಿಗೆ ತರಲಿದ್ದಾರೆ. ಹಾಗಾಗಿ ಅಲ್ಲಿವರೆಗೆ ಕಾದು ನೋಡಿ ಎಂಬ ಕಂದಾಯ ಸಚಿವರ ಈ ಹೇಳಿಕೆ ಲಾಕ್ ಡೌನ್ ನ ಸೂಚನೆ ಕೊಟ್ಟಂತೆ ಕಾಣಿಸುತ್ತಿದೆ