ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ ನೂತನ ಕಮಿಷನರ್ ಆಗಿ 2017 ನೇ ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿ ಅಕ್ಷಿ ಶ್ರೀಧರ್ ನೇಮಕವಾಗಿದ್ದಾರೆ.
ಬೀದರ್ ಉಪವಿಭಾಗದ ಸಹಾಯಕ ಕಮಿಷನರ್ ಆಗಿದ್ದ ಅಕ್ಷಿ ಶ್ರೀಧರ್ ರನ್ನು ಮಂಗಳೂರು ಮಹಾನಗರ ಪಾಲಿಕೆಯ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ.
ತಮಿಳುನಾಡಿನ ತಿರುಪುರದ ನಿವಾಸಿಯಾದ ಅಕ್ಷಿ ಶ್ರೀಧರ್, ಇಂಜಿನಿಯರಿಂಗ್ ಶಿಕ್ಷಣವನ್ನು ತಮಿಳುನಾಡಿನ ಗುಂಡಿಯಲ್ಲಿ ಪೂರೈಸಿ, ಐಎಎಸ್ ಅಧಿಕಾರಿಯಾಗಿ ಕರ್ನಾಟಕ ಕೇಡರ್ ಗೆ ಆಯ್ಕೆಗೊಂಡಿದ್ದರು.
ಮುಂಬೈನಲ್ಲಿ ನಡೆದ ಮ್ಯಾರಥಾನ್ ಓಟದಲ್ಲಿ 3 ಗಂಟೆ 54 ನಿಮಿಷದಲ್ಲಿ 42.2 ಕಿಮೀ ಪೂರ್ತಿಗೊಳಿಸಿದರು.
ಕ್ರಿಕೆಟ್ ಅಭಿಮಾನಿಯಾದ ಈ ಯುವ ಐಎಎಸ್ ಅಧಿಕಾರಿ ರಾಹುಲ್ ದ್ರಾವಿಡ್ ಅಭಿಮಾನಿಯಾಗಿದ್ದು. ಚಲನಚಿತ್ರದಲ್ಲಿ ಕಮಲಹಾಸನ್ ಅಭಿಮಾನಿಯಾಗಿದ್ದಾರೆ.
2018ರಲ್ಲಿ ಜಮ್ಮುನಿಂದ ದೆಹಲಿ ಮುಂಬೈ ,ಊಟಿ, ಮೈಸೂರು, ಕೊಪ್ಪಳ ಮೂಲಕ 1000ಕಿಮೀ ಮ್ಯಾರಥಾನ್ ಓಟವನ್ನು ಪೂರ್ತಿಗೊಳಿಸಿದ ಕೀರ್ತಿ ಅಕ್ಷಿ ಶ್ರೀಧರ ಅವರಿಗಿದೆ.