ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಮೂಲದ ನಜೀರ್ ಮುಹಮ್ಮದ್ ನ ಬಂಧನ!

ಮಂಗಳೂರು : ಕೆಲವು ದಿನಗಳ ಹಿಂದೆ ಮಂಗಳೂರಿನ ಬಿಜೈ ಮತ್ತು ಕೋರ್ಟ್ ಸಮೀಪ ಗೋಡೆ ಮೇಲೆ ಉಗ್ರರ ಪರವಾಗಿ ಗೋಡೆ ಬರಹ  ಬರೆದ  ಪ್ರಕರಣ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಅಲ್ಲದೇ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿನ ದೃಶ್ಯಾವಳಿಗಳು ಅಸ್ಪಷ್ಟವಾಗಿದ್ದರಿಂದ ಪೊಲೀಸರಿಗೆ ಆರೋಪಿಗಳನ್ನು ಬಂಧಿಸೋದು ಕೂಡ ಬಹು ದೊಡ್ಡ ಸವಾಲಾಗಿತ್ತು. ಆದ್ರೆ ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕದ್ರಿ ಪೊಲೀಸರು ಯುವಕನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತೀರ್ಥಹಳ್ಳಿಯ ನಜೀರ್ ಮುಹಮ್ಮದ್‌ (26)ಬಂಧಿತ ಆರೋಪಿ . ಇಂದು ಮುಂಜಾನೆ ಕದ್ರಿ ಪೊಲೀಸರು ಆತನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದು , ಈತ ನಗರದಲ್ಲಿ ಆನ್ ಲೈನ್ ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದ.   ಮೊಬೈಲ್  ಲೊಕೇಶನ್  ಆಧಾರದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನು ಈತನ ಜೊತೆಗೆ ಬೈಕ್ ನಲ್ಲಿ ಬಂದು ಗೋಡೆ ಬರಹಕ್ಕೆ ಸಹಕರಿಸಿದ ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

READ ALSO

ಸಂಘಿಗಳನ್ನು ಹಾಗೂ ಮನುವಾದಿಗಳನ್ನು ನಿಯಂತ್ರಿಸಲು ಲಷ್ಕರ್ ಇ ತೊಯಿಬಾ ಮತ್ತು ತಾಲಿಬಾನ್ ಗಳನ್ನೂ ಕರೆಯುವಂತೆ ಪ್ರೆರೆಪಿಸಬೇಡಿ ಎಂದು ಬರೆದಿರುವ ಗೋಡೆ ಬರಹ ನ.27ರಂದು ಕದ್ರಿ‌ ಪೊಲೀಸ್ ಠಾಣೆ ಸಮೀಪದ ಬಿಜೈ ಬಳಿಯ ರಸ್ತೆಯ ಗೋಡೆಯೊಂದರಲ್ಲಿ ಬರೆಯಲಾಗಿತ್ತು. .” ಅಲ್ಲದೆ ‘ಲಷ್ಕರ್ ಝಿಂದಾಬಾದ್’ ಎಂದು ಬರೆಯಲಾಗಿತ್ತು.

 ನ.29ರಂದು ನಗರದ ಪಿವಿಎಸ್ ಸಮೀಪದ ನ್ಯಾಯಾಲಯದ ಆವರಣದ ಹಳೆ ಕಟ್ಟಡದ ಗೋಡೆಯ ಮೇಲೆ “Gustak e rasool ek hi saza tan say juda” ಎಂದು ಬರಹ ಪ್ರತ್ಯಕ್ಷವಾಗಿತ್ತು. ಪ್ರವಾದಿಯದ್ದು ಒಂದೇ ಶಿಕ್ಷೆ ದೇಹದಿಂದ ರುಂಡ ಬೇರ್ಪಡಿಸುವುದು ಎಂದು ಬರೆಯಲಾಗಿತ್ತು.