ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ಮೇಲೆ ಐಟಿ ದಾಳಿ!

ಮಂಗಳೂರು : ಮಂಗಳೂರಿನಲ್ಲಿ ಉದ್ಯಮಿಗಳಿಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದು ಎಜೆ ಶೆಟ್ಟಿ ಆಸ್ಪತ್ರೆ ಹಾಗೂ ಯೆನಪೋಯಾ ಆಸ್ಪತ್ರೆಯ ಮಾಲೀಕರ ಮನೆಯ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಮಂಗಳೂರು ನಗರದ ಬೆಂದೂರು ವೆಲ್ ನಲ್ಲಿರುವ ಎ.ಜೆ.ಆಸ್ಪತ್ರೆಯ ಮಾಲೀಕ ಎ.ಜೆ.ಶೆಟ್ಟಿ ಅವರ ಮನೆ ಹಾಗೂ ಯೆನಪೋಯಾ ಆಸ್ಪತ್ರೆಯ ಮಾಲೀಕ ವೈ.ಅಬ್ದುಲ್ಲಾ ಕುಂಜ್ಞಿ ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ.ಇದೀಗ ಮನೆಯ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಕಚೇರಿ ಹಾಗು ಆಸ್ಪತ್ರೆಯ ಮೇಲೆಯೂ ದಾಳಿ ನಡೆಸುವ ಸಾಧ್ಯತೆಯಿದೆ.

READ ALSO