ಮಂಗಳೂರಿನಲ್ಲಿ ಮುಂದುವರಿದ ಐಟಿ ದಾಳಿ! ಎಜೆ, ಯನಪೋಯ, ಬಳಿಕ ಕಣಚೂರು, ಶ್ರೀನಿವಾಸ ಮೆಡಿಕಲ್ ಕಾಲೇಜು ಮಾಲೀಕರ ಮನೆ ಮೇಲೂ ಐಟಿ ದಾಳಿ

ಮಂಗಳೂರು: ಮಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಮಾಲೀಕರ ಮನೆ ಮತ್ತು ಕಚೇರಿಗಳಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಗಳೂರಿನ ಶ್ರೀನಿವಾಸ ಮೆಡಿಕಲ್ ಕಾಲೇಜು ಮನೆ ಮತ್ತು ಕಚೇರಿಗೂ ದಾಳಿ ನಡೆಸಿರುವ ಮಾಹಿತಿ ಲಭ್ಯವಾಗಿದೆ.

ಶ್ರೀನಿವಾಸ ಮೆಡಿಕಲ್ ಕಾಲೇಜಿನ ಮಾಲೀಕ ಶ್ರೀನಿವಾಸ ರಾವ್ ಅವರ ಕೊಡಿಯಾಲಬೈಲಿನಲ್ಲಿರುವ ಮನೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಗಳೂರಿನ ವಳಚ್ಚಿಲ್, ಪಾಂಡೇಶ್ವರ ಮತ್ತು ಸುರತ್ಕಲ್ ಬಳಿಯ ಮುಕ್ಕದಲ್ಲಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿದ್ದು, ಕಾಲೇಜು, ಕಚೇರಿಗೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

READ ALSO

ದೇರಳಕಟ್ಟೆ ಬಳಿಯ ನಾಟೆಕಲ್ ನಲ್ಲಿರುವ ಕಣಚೂರು ಮೆಡಿಕಲ್ ಕಾಲೇಜಿನ ಮಾಲೀಕ ಕಣಚೂರು ಮೋನು ಮನೆ ಮತ್ತು ಕಚೇರಿಗೂ ಐಟಿ ದಾಳಿ ನಡೆದಿದೆ. ಕಣಚೂರು ಮೋನು ಕೂಡ ಈ ಹಿಂದೆ ಟಿಂಬರ್ ವ್ಯಾಪಾರಿಯಾಗಿದ್ದು, ಹತ್ತು ವರ್ಷಗಳ ಹಿಂದೆ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಿದ್ದರು.

ಯೇನಪೋಯ ಮತ್ತು ಎಜೆ ಶೆಟ್ಟಿ ಮೆಡಿಕಲ್ ಕಾಲೇಜುಗಳ ಮನೆ ಮತ್ತು ಕಚೇರಿಗೂ ದಾಳಿ ನಡೆದಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು ಮತ್ತು ಗೋವಾದ ಅಧಿಕಾರಿಗಳು ದಾಳಿ ನೇತೃತ್ವ ವಹಿಸಿದ್ದಾರೆ ಎನ್ನಲಾಗುತ್ತಿದೆ.