ಬೆಳ್ತಂಗಡಿ: ಬಂಗರ ಪಲ್ಕೆ ಫಾಲ್ಸ್ ನಲ್ಲಿ ಗುಡ್ಡಕುಸಿದು ಮೃತಪಟ್ಟ ಕಾಶಿಬೆಟ್ಟು ನಿವಾಸಿ ಸನತ್ ಶೆಟ್ಟಿ ಅವರ ನಿವಾಸಕ್ಕೆ ಇಂದು ಬೆಳಗ್ಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಭೇಟಿ ನೀಡಿ ಸಾಂತ್ವನ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಕೃತಿ ವಿಕೋಪದ ಅಡಿಯಲ್ಲಿ ಸರ್ಕಾರದಿಂದ ನೀಡಲಾಗುವ 5ಲಕ್ಷ ರೂಪಾಯಿ ಮೊತ್ತದ ಪರಿಹಾರದ ಚೆಕ್ ಸನತ್ ಶೆಟ್ಟಿ ಹೆತ್ತವರಾದ ತಂದೆ ವಾಸುದೇವ ಶೆಟ್ಟಿ ತಾಯಿ ಕುಶಲ ಅವರಿಗೆ ನೀಡಿದರು.
ಈ ವೇಳೆ ಪುತ್ತೂರಿನ ಪ್ರಭಾರ ತಹಶೀಲ್ದಾರ್ ರಮೇಶ್ ಬಾಬು, ಕಂದಾಯ ನಿರೀಕ್ಷಕ ಪ್ರತೀಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.