ಶಿವಮೊಗ್ಗ: ರಾಮ ಮಂದಿರ ದೇಣಿಗೆ ಸಂಗ್ರಹ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಲೆಹರಟೆ ಮಾಡುವುದನ್ನು ನಿಲ್ಲಿಸಲಿ. ರಾಮ ಮಂದಿರಕ್ಕಾಗಿ ಇಡೀ ದೇಶದ ಜನರು ದೇಣಿಗೆ ನೀಡುತ್ತಿದ್ದಾರೆ. ಹಣ ದುರುಪಯೋಗವಾಗಿಲ್ಲ ಇವರಿಗೆ ಮಾತ್ರ ಹಣ ದುರುಪಯೋಗವಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಮಾಜಿ ಸಿಎಂ ಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರಿಗೆ ತಲೆ ಕೆಟ್ಟಿದೆ. ಈಗಾಗಲೇ ಜೆಡಿಎಸ್ ಪಕ್ಷ ನೆಲಕಚ್ಚಿದೆ. ಹೀಗೆಯೇ ಮುಂದುವರಿದರೆ ಮುಸ್ಲಿಂ ಮತಗಳು ಕೂಡ ಬೀಳಲ್ಲ ಎಂದರು.
ಇನ್ನು ಸಿದ್ದರಾಮಯ್ಯ ರಾಮ ಮಂದಿರ ಬೇರೆಡೆ ನಿರ್ಮಿಸಿದರೆ ದೇಣಿಗೆ ನೀಡುತ್ತಿದ್ದೆ ಎಂದು ಹೇಳಿದ್ದಾರೆ. ಓರ್ವ ವಕೀಲರಾಗಿ ಇಂಥಹ ಮಾತುಗಳನ್ನು ಆಡುವುದು ಸರಿಯಲ್ಲ ಎಂದು ಗುಡುಗಿದ್ದಾರೆ.