ಇಂದು ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಿದರು.

ನವದೆಹಲಿ: ಕೊರೋನಾದ ಸಾಂಕ್ರಾಮಿಕ ರೋಗದ ಸಂಕಷ್ಟ ಸಮಯ ಆರಂಭವಾದ ನಂತರ ಕಳೆದ ಏಳು ತಿಂಗಳಲ್ಲಿ ಏಳನೇ ಬಾರಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ಕೋವಿಡ್ 19 ಇನ್ನೂ ಕೊನೆಗೊಂಡಿಲ್ಲ. ಕಳೆದ 7ರಿಂದ 8 ತಿಂಗಳ ಅವಧಿಯಲ್ಲಿ ಪ್ರತಿಯೊಬ್ಬ ಭಾರತೀಯನ ಪ್ರಯತ್ನದ ಫಲವಾಗಿ ಭಾರತದಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗಿದೆ. ಅದನ್ನು ಹಾಳುಗೆಡಹುವ ಕೆಲಸ ನಮ್ಮಿಂದ ಆಗದಂತೆ ಎಚ್ಚರಿಕೆಯಿಂದ ಇರಬೇಕು ಎಂದ ಅವರು, ಇದೇ ವೇಳೆ ನವರಾತ್ರಿ, ಈದ್​ ದೀಪಾವಳಿ, ಚಥ್​​​ ಪೂಜಾ ಶುಭಾಶಯ ತಿಳಿಸಿದರು.

ಜೀವನದ ಉದ್ದೇಶಕ್ಕಾಗಿ ನಾವು ಹೊರಬರುತ್ತಿದ್ದೇವೆ. ಲಾಕ್​ಡೌನ್​ ಮುಗಿಯಿತು ಎಂದ ಮಾತ್ರಕ್ಕೆ ವೈರಸ್​ ಕೊನೆಗೊಂಡಿಲ್ಲ ಎಂಬುದನ್ನು ಮರೆಯಬಾರದು.

READ ALSO

ಹಬ್ಬದ ಸಮಯ ಎಂಬುದು ಜೀವನದ ಖುಷಿ. ಈ ವೇಳೆ ಬೇಜಾವಬ್ದಾರಿ ವಹಿಸಿದರೆ, ಭಾರೀ ದಂಡ ತೆರೆಬೇಕಾಗುತ್ತದೆ. ಈ ಸಮಯದಲ್ಲಿ ಎಚ್ಚರದಿಂದ ಇದ್ದರೆ, ಉತ್ತಮ ದಿನಗಳು ನಮ್ಮ ಮುಂದಿರಲಿದೆ.

ಅಮೆರಿಕ, ಯುರೋಪ್​ಗಳಲ್ಲಿ ಕೊರೋನಾ ಕಡಿಮೆಯಾಗುತ್ತಿದ್ದಂತೆ ಹೆಚ್ಚಾಗಿದ್ದನ್ನು ಜನರು ಮರೆಯಬಾರದು.

ಹಬ್ಬದ ಸಮಯಲ್ಲಿ ಜನರು ಜಾಗರುಕತೆಯಿಂದ ಮೂರು ಮಂತ್ರಗಳಾದ ಸ್ವಚ್ಛತೆ, ಮಾಸ್ಕ್​ಧಾರಣೆ, ಸಾಮಾಜಿಕ ಅಂತರಗಳನ್ನು ಅನುಸರಿಸಬೇಕು.

ನಿಮ್ಮನ್ನು ನೀವು ಕಾಪಾಡಿಕೊಳ್ಳುವ ಮೂಲಕ ಇದೇ ದೇಶಕ್ಕೆ ನೀಡುವ ಸೇವೆ. ಈ ವಿಷಯದಲ್ಲಿ ನೀವು ನಮಗೆ ಜೊತೆಯಾಗಬೇಕು.

ಇಂದು ದೇಶದಲ್ಲಿ ರಿಕವರಿ ರೇಟ್​ ಚೆನ್ನಾಗಿದೆ. ಮರಣ ಪ್ರಮಾಣ ಕಡಿಮೆ ಇದೆ. ಭಾರತದಲ್ಲಿ 10 ಲಕ್ಷ ಜನಸಂಖ್ಯೆಗೆ 5,500 ಜನರಷ್ಟೇ ಸೋಂಕಿತರಾಗಿದ್ದಾರೆ. ಅಮೆರಿಕ, ಬ್ರೆಜಿಲ್​ ಮುಂತಾದ ರಾಷ್ಟ್ರಗಳಲ್ಲಿ ಇದು 25,000 ಇದೆ. ಮರಣ ಪ್ರಮಾಣ ಪ್ರತಿ 10 ಲಕ್ಷಕ್ಕೆ ಭಾರತದಲ್ಲಿ 83 ಇದ್ದರೆ, ಅಮೆರಿಕ, ಬ್ರೆಜಿಲ್, ಸ್ಪೇನ್​, ಬ್ರಿಟನ್​ಗಳಲ್ಲಿ 600ಕ್ಕೂ ಹೆಚ್ಚಿದೆ ಎಂದು ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ