ಒಂದೇ ದಿನ ಸೂಪರ್ ಮೂನ್-ಬ್ಲಡ್ ಮೂನ್ ಗೋಚರ! ಮೇ 26 ರಂದು ಸಂಭವಿಸಲಿದೆ ಈ ವರ್ಷದ ಮೊದಲ ಚಂದ್ರಗ್ರಹಣ

ನವದೆಹಲಿ: 2021ನೇ ವರ್ಷದ  ಮೊದಲ ಚಂದ್ರಗ್ರಹಣ  ಮೇ 26 ನೇ ದಿನಾಂಕದಂದು ವೈಶಾಖ ಪೂರ್ಣಿಮೆಯ ದಿನದಂದು ಸಂಭವಿಸಲಿದ್ದು, ಒಂದೇ ದಿನ ಸೂಪರ್ ಮೂನ್ ಮತ್ತು ರೆಡ್ ಬ್ಲಡ್ ಮೂನ್ ಕೂಡ ಗೋಚರಿಸಲಿದೆ.

READ ALSO

ಭೂಮಿಗೆ ಸಮೀಪದಲ್ಲೇ ಅಂದರೆ ಅಂದಾಜು 28 ಸಾವಿರ ಮೈಲಿ ಸಮೀಪ ಚಂದ್ರನ ಕಕ್ಷೆ ಇರುವ ಕಾರಣ ಚಂದ್ರ ಸೂಪರ್ ಮೂನ್ ಆಗಿ ಗೋಚರಿಸಲಿದೆ.

ಈಶಾನ್ಯ ಭಾರತದಲ್ಲಿ. ಜಪಾನ್, ಬಾಂಗ್ಲಾದೇಶ, ಸಿಂಗಾಪುರ, ಬರ್ಮಾ, ದಕ್ಷಿಣ ಕೋರಿಯಾ, ಫಿಲಿಪೀನ್ಸ್, ಉತ್ತರ ಹಾಗೂ ದಕ್ಷಿಣ ಅಮೆರಿಕ, ಹಿಂದೂ ಮಹಾಸಾಗರ ಪ್ರದೇಶಗಳಲ್ಲಿ ಚಂದ್ರ ಗ್ರಹಣ ಗೋಚರಿಸಲಿದೆ.

ಸಂಪೂರ್ಣ ಚಂದ್ರ ಗ್ರಹಣಗಳನ್ನು ಬ್ಲಡ್ ಮೂನ್ ಎಂದೂ ಕರೆಯಲಾಗುತ್ತದೆ ಏಕೆಂದರೆ ಇದು ಭೂಮಿಯ ಸೂರ್ಯೋದಯ ಮತ್ತು ಸೂರ್ಯಾಸ್ತಗಳಿಂದ ಚಂದ್ರನ ಮುಖದ ಮೇಲೆ (ಗ್ರಹಣದ ಮಧ್ಯದಲ್ಲಿ) ಬೀಳುವ ಚದುರಿದ ಬೆಳಕಿನಿಂದಾಗಿ ಸ್ವಲ್ಪ ಕೆಂಪು-ಕಿತ್ತಳೆ ಬಣ್ಣದಲ್ಲಿ ಕಾಣುತ್ತದೆ.