ಮದುವೆಗೆ ಹೋಗಲು ಕುದುರೆ ಏರಿ ಬಂದ ಯುವಕ! ಕುದುರೆಯ ಕಂಡು ಪೊಲೀಸರಿಗೆ ಪುಲ್ ಶಾಕ್!

ಬೆಂಗಳೂರು: ನವ ಜೋಡಿ ಜೋರಾಗಿ ಮದ್ವೆ ಆಗುವ ಪ್ಲಾನ್ ಮಾಡಿಕೊಂಡಿದ್ದರೂ ಕೊರೊನಾ ಕಾಟದಿಂದಾಗಿ ಮದುವೆ ಹಾಲ್ ಬಿಟ್ಟು ದೇಗುಲದಲ್ಲಿ 25 ನಿಮಿಷದಲ್ಲಿಯೇ ಮದುವೆ ಮಾಡಿಕೊಂಡಿದ್ದಾರೆ. ಆದರೆ ಇಲ್ಲೊಬ್ಬ ಮಹಾಶಯ ಮದುವೆಗೆ ಹೋಗಲು ಕುದುರೆ ಏರಿ ಬಂದಿದ್ದಾನೆ. ಅದನ್ನು ಕಂಡು ಪೊಲೀಸರೂ ಗಲಿಬಿಲಿಗೊಂಡಿದ್ದಾರೆ! ವಾಹನವಾದರೆ ಜಪ್ತಿ ಮಾಡಬಹುದು. ಆದರೆ ಕುದುರೆಯನ್ನು ಏನು ಮಾಡುವುದು ಎಂಬ ಜಿಜ್ಞಾಸೆ ಪೊಲೀಸರಲ್ಲಿ ಮೂಡಿದೆ.

ಆ ವೇಳೆಯಲ್ಲಿಯೇ ಪೊಲೀಸರು ಯುವಕನನ್ನು ಹೊಡೆಯಲು ಮುಂದಾಗಿದ್ದಾರೆ. ಪೊಲೀಸರು ಮನದಿಂಗಿತ ಅರಿತವನಂತೆ ಅವರು ಹತ್ತಿರ ಬರುತ್ತಿದ್ದಂತೆ ಯುವಕ ಪತ್ರ ತೋರಿಸಿದ್ದಾನೆ. ಹೊಡೆಯಬೇಡಿ ಸಾರ್, ನಾನು ಅನುಮತಿ ಪಡೆದಿದ್ದೇನೆ. ಮದುವೆಗೆ ಹೋಗಲು ಅನುಮತಿ ಇದೆ ಎಂದು ಯುವಕ ಜೋರಾಗಿಯೇ ಕೇಳಿದ್ದಾನೆ.

READ ALSO

ಕುದುರೆಯ ಕಂಡು ಕೆ.ಆರ್.ಮಾರುಕಟ್ಟೆ ಪೊಲೀಸರು ಗಲಿಬಿಲಿಗೊಂಡಿದ್ದು ಕೊನೆಗೆ ಯುವಕನನ್ನು ವಿಚಾರಿಸಿ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.