ನಾಗರ ಪಂಚಮಿ ದಿನ ಹಿಂದೂಗಳ ಹಬ್ಬಗಳ ಟೀಕಿಸುವ ಸತೀಶ ಜಾರಕಿಹೊಳಿ ಯವರು ಕ್ಷಮೆಯಾಚನೆ ಮಾಡಬೇಕು: HJS ಮೋಹನ ಗೌಡ ಆಗ್ರಹ

ಬೆಂಗಳೂರು: ನಾಗರಪಂಚಮಿಯಂದು ಹಿಂದೂಗಳು ನಾಗದೇವರಿಗೆ ಹಾಲನ್ನು ಎರೆಯುವ ಸಂಪ್ರದಾಯವನ್ನು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿಯವರು ಟೀಕಿಸುತ್ತಾ, ಇದು ಅವೈಜ್ಞಾನಿಕ ಕೋಟ್ಯಂತರ ಲೀಟರ್ ಹಾಲು ವ್ಯರ್ಥವಾಗುತ್ತದೆ. ಹಾಗಾಗಿ ಅದನ್ನು ಬಡಮಕ್ಕಳಿಗೆ, ರೋಗಿಗಳಿಗೆ ನೀಡಿ ಎಂದು ಹಿಂದೂ ವಿರೋಧಿ ಕರೆ ನೀಡುವ ಒಂದು ಪೋಸ್ಟ್ ಸಾಮಾಜಿಕ ಮಾಧ್ಯಗಳಲ್ಲಿ ಹರಿದಾಡುತ್ತಿದೆ. ಅದಲ್ಲದೇ ಕರ್ನಾಟಕದಲ್ಲಿ ಪ್ರತಿ ವರ್ಷ ೪೦ ಸಾವಿರಕ್ಕೂ ಹೆಚ್ಚು ಮಕ್ಕಳು ಅಪೌಷ್ಠಿಕತೆಯಿಂದ ಮರಣ ಹೊಂದುತ್ತಿದ್ದಾರೆ, ನಾಗನಿಗೆ ಹಾಲು ಎರೆಯವ ಬದಲು, ಬಡಮಕ್ಕಳಿಗೆ ಹಾಲು ನೀಡಿ ಎಂದು ಕರೆ ನೀಡಿದ್ದಾರೆ. ಇದು ಇವರ ಹಿಂದೂಗಳ ಧಾರ್ಮಿಕ ಹಬ್ಬಗಳ ಹಿಂದಿರುವ ಶಾಸ್ತ್ರವನ್ನು ಅರಿತುಕೊಳ್ಳದೇ ಹಿಂದುಗಳ ಹಬ್ಬದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯವಕ್ತಾರ ಶ್ರೀ ಮೋಹನ ಗೌಡ ಆಗ್ರಹಿಸಿದ್ದಾರೆ.

ಶಿವಲಿಂಗಕ್ಕೆ ಹಾಲು ಅರ್ಪಿಸಬೇಡಿ ಮಕ್ಕಳಿಗೆ ನೀಡಿ ಹೇಳುವವರು, ಹಾಲಿನ ಬೆಲೆ ಹೆಚ್ಚಿಸಲು ಪ್ರತಿಭಟನೆ ಹೆಸರಿನಲ್ಲಿ ಲಕ್ಷಗಟ್ಟಲೆ ಲೀಟರ್ ಹಾಲು ಬೀದಿಯಲ್ಲಿ ಸುರಿಯುವಾಗ ಯಾಕೆ ಮೌನವಾಗಿದ್ದರು? ಅದಲ್ಲದೇ ಶೇಕಡಾ 80 ರಷ್ಟು ಹಾಲನ್ನು ಕಲಬೆರಕೆ ಮಾಡಿ ಮಾರಾಟ ಮಾಡುವ ಮೂಲಕ ಲಕ್ಷಾಂತರ ಮಕ್ಕಳ ಜೀವನ ಹಾಳು ಮಾಡುವ ಸಮಸ್ಯೆಯ ಬಗ್ಗೆ ಯಾಕೆ ಮೌನ ?

READ ALSO

ಭಾರತೀಯ ಸಂವಿಧಾನವು ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಆಚರಿಸುವ ಸಾಂವಿಧಾನಿಕ ಹಕ್ಕನ್ನು ನೀಡಿದೆ. ಅದರಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಯಾರಿಗೂ ಇಲ್ಲ’ ಎಂದು ನಾವು ಹೇಳಬಯಸುತ್ತೇವೆ. ಅಪೌಷ್ಟಿಕತೆಯಿಂದ ಸಾಯುತ್ತಿರುವ ಬಡ ಮಕ್ಕಳಿಗೆ ಹಾಲು ಸಿಗದಿರಲು ಸರ್ಕಾರ ಅವರಿಗೆ ಸರಿಯಾದ ಸೌಲಭ್ಯ ಮತ್ತು ಪರಿಹಾರಗಳ ತಲುಪದಿರುವುದರ ಪರಿಣಾಮವಾಗಿದೆ. ಈ ರೀತಿ ಮೂಲ ಸಮಸ್ಯೆಯನ್ನು ಪರಿಹರಿಸದೆ ಕೇವಲ ಮೇಲುಮೇಲಿನ ಉಪಾಯವೆಂದು ನಾಗಪಂಚಮಿ ಅಥವಾ ಮಹಾಶಿವರಾತ್ರಿಯ ಕೇವಲ ಒಂದು ದಿನದ ಹಾಲನ್ನು ನೀಡುವ ಮೂಲಕ ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸಬಹುದೇ?

ಇಂದು, ಹಿಂದೂ ಧರ್ಮ, ಸಂಪ್ರದಾಯಗಳು ಮತ್ತು ಹಬ್ಬಗಳ ಮೇಲೆ ಕೆಸರೆರಚಿ ಖ್ಯಾತಿ ಪಡೆಯುವುದು ಫ್ಯಾಷನ್ ಆಗಿದೆ. ಹೀಗೆ ಹೇಳುವವರು ಬಕ್ರಿದ್ ಮತ್ತು ಇತರ ಧರ್ಮಗಳಿಗೆ ಏಕೆ ಮಾರ್ಗದರ್ಶನ ಮಾಡುವುದಿಲ್ಲ? ಹಿಂದೂಗಳು ಸಹಿಷ್ಣುರು, ಆದ್ದರಿಂದ ಅವರನ್ನು ಸಾಫ್ಟ್ ಟಾರ್ಗೆಟ್ ಮಾಡಲಾಗುತ್ತದೆ. ಎಲ್ಲ ಹಿಂದೂಗಳು ಇದನ್ನು ಸಂವಿಧಾನದ ಮಾರ್ಗದಿಂದ ಈ ಹೇಳಿಕೆಯನ್ನು ಬಲವಾಗಿ ವಿರೋಧಿಸುವುದು ಅವಶ್ಯಕ. ಸತೀಶ ಜಾರಕಿಹೊಳಿ ಯವರು ಈ ಹೇಳಿಕೆ ಬಗ್ಗೆ ನಾಡಿನ ಸಮಸ್ತ ಹಿಂದೂಗಳಲ್ಲಿ ಕ್ಷಮೆಯಾಚಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯವಕ್ತಾರ ಶ್ರೀ ಮೋಹನ ಗೌಡ ಆಗ್ರಹಿಸಿದ್ದಾರೆ.