‘ಆನ್‌ಲೈನ್’ ಮಾಧ್ಯಮದಿಂದ ೯ ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶ’ವು ಉತ್ಸಾಹದಿಂದ ಆರಂಭ !

ವೈಚಾರಿಕ ಧ್ರುವೀಕರಣದ ಕಾಲದಲ್ಲಿ ಧರ್ಮದ ಪರವಾಗಿ ನಿಂತು ಹಿಂದೂ ರಾಷ್ಟ್ರದ ದಿಕ್ಕಿನತ್ತ ಮಾರ್ಗಕ್ರಮಣ ಮಾಡಿ ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ

ಕೊರೋನಾದ ಮಹಾಮಾರಿಯಾಗಿರಲಿ ಅಥವಾ ಭವಿಷ್ಯದಲ್ಲಿ ಎದುರಾಗುವ ಮೂರನೇ ವಿಶ್ವಯುದ್ಧವಾಗಿರಲಿ, ಕಾಲಮಹಾತ್ಮೆಗನುಸಾರ ಮುಂಬರುವ ಕಾಲವು ಹಿಂದುತ್ವನಿಷ್ಠರಿಗೆ ಅನುಕೂಲಕರ ಕಾಲವಾಗಿರಲಿದೆ. ಅದಕ್ಕಾಗಿ ನಾವು ನಿರಂತರವಾಗಿ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡುತ್ತಿರಬೇಕು. ಕೊರೋನಾ ಮಹಾಮಾರಿಯ ಕಾಲದಲ್ಲಿ ತಬ್ಲಿಗೀ ಜಮಾತವು ‘ಕೊರೋನಾ ವಾಹಕ’ದ ಪಾತ್ರ ನಿರ್ವಹಿಸಿದರೆ, ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ‘ಕೊರೋನಾ ಯೋಧ’ರ ಪಾತ್ರವನ್ನು ನಿರ್ವಹಿಸಿದವು. ಪ್ರಸಕ್ತ ಕಾಲದಲ್ಲಿ ರಾಜಕಾರಣ, ಶಿಕ್ಷಣಕ್ಷೇತ್ರ, ಪ್ರಸಾರ ಮಾಧ್ಯಮಗಳು, ಕಲಾಕ್ಷೇತ್ರ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿ ‘ದೇಶಭಕ್ತ ಹಾಗೂ ಧರ್ಮಪ್ರೇಮಿ’ಗಳ ವಿರುದ್ಧ ‘ದೇಶದ್ರೋಹಿ ಹಾಗೂ ಧರ್ಮವಿರೋಧಿ’ ಹೀಗೆ ಧ್ರುವೀಕರಣ ಆಗುತ್ತಿದೆ. ಈ ವೈಚಾರಿಕ ಧ್ರುವೀಕರಣದ ಕಾಲದಲ್ಲಿ ಧರ್ಮದ ಪರವಾಗಿ ಹಿಂದೂ ರಾಷ್ಟ್ರದ ದಿಕ್ಕಿನತ್ತ ಮಾರ್ಗಕ್ರಮಣ ಮಾಡಿರಿ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಕರೆ ನೀಡಿದ್ದಾರೆ. ಅವರು ‘೯ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಉದ್ಘಾಟನೆಯ ಸಮಯದಲ್ಲಿ ಮಾತನಾಡುತ್ತಿದ್ದರು.

ಈ ಅಧಿವೇಶನವು ಜುಲೈ ೩೦ ರಿಂದ ಆಗಸ್ಟ್ ೨ ಹಾಗೂ ೬ ರಿಂದ ೯ ಆಗಸ್ಟ್ ೨೦೨೦ ಈ ಕಾಲಾವಧಿಯಲ್ಲಿ ಸಾಯಂಕಾಲ ೬.೩೦ ರಿಂದ ೮.೩೦ ಈ ಸಮಯದಲ್ಲಿ
‘ಆನ್‌ಲೈನ್’ನಲ್ಲಿ ನಡೆಯುತ್ತಿದೆ. ಈ ಅಧಿವೇಶನಕ್ಕೆ ದೇಶ-ವಿದೇಶಗಳಿಂದ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿನಿಧಿಗಳು, ನ್ಯಾಯವಾದಿಗಳು, ವಿಚಾರವಂತರು, ಸಂಪಾದಕರು, ಉದ್ಯಮಿಗಳು ಮುಂತಾದವರು ದೊಡ್ಡ ಸಂಖ್ಯೆಯಲ್ಲಿ ‘ಆನ್‌ಲೈನ್’ನಲ್ಲಿ ಉಪಸ್ಥಿತರಿದ್ದರು. ಸಮಿತಿಯ ‘ಯೂ ಟ್ಯೂಬ್’ ಚಾನಲ್ ಹಾಗೂ ಫೇಸ್‌ಬುಕ್ ಮೂಲಕ ಈ ಅಧಿವೇಶನವನ್ನು 67 ಸಾವಿರಕ್ಕೂ ಹೆಚ್ಚು ಜನರು ಪ್ರತ್ಯಕ್ಷವಾಗಿ ನೋಡಿದರೆ, ‘3 ಲಕ್ಷದ 17 ಸಾವಿರಕ್ಕೂ ಹೆಚ್ಚು ಜನರ ತನಕ ಈ ವಿಷಯ ತಲುಪಿದೆ. ಹಿಂದೂ ಅಧಿವೇಶನಕ್ಕೆ ಬೆಂಬಲ ಸೂಚಿಸಲು ಅನೇಕರು ಟ್ವೀಟ್‌ಗಳನ್ನು ಮಾಡಲಾಯಿತು. #We_Want_Hindu_Rashtra ಈ ಹ್ಯಾಶಟ್ಯಾಗ್ ಭಾರತದಲ್ಲಿ ಮೊದಲ ಐದು ಟ್ರೆಂಡಿಂಗ್‌ದಲ್ಲಿತ್ತು. ಈ ಅಧಿವೇಶನವು HinduJagruti ಈ ಯೂಟ್ಯೂಬ್ ಚಾನೆಲ್ ಮೂಲಕ, ಅದೇರೀತಿ HinduAdhiveshan ಈ ಫೇಸ್‌ಬುಕ್ ಪೇಜ್‌ನಿಂದ ಲೈವ್ ಪ್ರಸಾರ ಮಾಡಲಾಗುತ್ತಿದೆ.

ಅಧಿವೇಶನದ ಆರಂಭದಲ್ಲಿ ಶಂಖನಾದ, ವೇದಮಂತ್ರಗಳ ಪಠಣ ಹಾಗೂ ಸದ್ಗುರು (ಡಾ) ಚಾರುದತ್ತ ಪಿಂಗಳೆ ಇವರ ಶುಭಹಸ್ತದಿಂದ ದೀಪ ಪ್ರಜ್ವಲನೆಯನ್ನು ಮಾಡಿ ಮಾಡಲಾಯಿತು. ಈ ಸಂದರ್ಭದಲ್ಲಿ ಸನಾತನದ ಧರ್ಮಪ್ರಚಾರಕರಾದ ಸದ್ಗುರು ಸತ್ಯವಾನ ಕದಮ ಇವರು ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ಥಾನ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಆಶೀರ್ವಾದ ರೂಪಿ ಸಂದೇಶವನ್ನು ಓದಿದರು. ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಅಧಿವೇಶನದ ಉದ್ದೇಶವನ್ನು ಹೇಳಿದರೆ, ಅದರ ನಿರೂಪಣೆಯನ್ನು ಶ್ರೀ. ಸುಮಿತ ಸಾಗವೇಕರ ಇವರು ಮಾಡಿದರು.

‘ಜಾತ್ಯತೀತ ಹಾಗೂ ವಿದೇಶಿ ಜನರ ಕುದೃಷ್ಟಿಯಿಂದಾಗಿ ನೇಪಾಳವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಲು ಅಡಚಣೆಗಳು ನಿರ್ಮಾಣವಾಗುತ್ತಿವೆ. ನೇಪಾಳದ ಈಗಿನ ಸರಕಾರವು ಹಿಂದೂದ್ರೋಹಿಯಾಗಿದೆ. ನೇಪಾಳ ಹಾಗೂ ಭಾರತ ಇವರೆಡು ರಾಷ್ಟ್ರಗಳನ್ನು ‘ಹಿಂದೂ ರಾಷ್ಟ್ರ’ವನ್ನಾಗಿಸಲು ಜಗತ್ತಿನಾದ್ಯಂತ ಹಿಂದೂಗಳು ಸಂಘಟಿತರಾಗಿ ತಮ್ಮ ಯೋಗದಾನವನ್ನು ನೀಡಬೇಕು. ಸಣ್ಣ, ಸಾಂಪ್ರದಾಯಿಕ ಸ್ವಾರ್ಥವನ್ನು ಬಿಟ್ಟು ವ್ಯಾಪಕ ಹಿಂದುತ್ವದ ಆಗ್ರಹವನ್ನು ಹಿಡಿಯಬೇಕು’, ಎಂದು ರಾಷ್ಟ್ರೀಯ ಧರ್ಮಸಭಾ, ನೇಪಾಳದ ಅಧ್ಯಕ್ಷ ಡಾ. ಮಾಧವ ಭಟ್ಟರಾಯಿ ಇವರು ಹೇಳಿದರು.

ಬಾಲಿ (ಇಂಡೋನೇಷಿಯಾ)ದಿಂದ ಆನ್‌ಲೈನ್ ಮೂಲಕ ಜೋಡಿಸಲ್ಪಟ್ಟಿದ್ದ ಹಾಗೂ ‘ಇಂಟರನ್ಯಾಶನಲ್ ಡಿವೈನ್ ಲವ್ ಸೊಸೈಟಿ’ಯ ಅಧ್ಯಕ್ಷ ಅದೇರೀತಿ ‘ವರ್ಲ್ಡ್ ಹಿಂದೂ ಫೆಡರೇಶನ್’ ಇದರ ಉಪಾಧ್ಯಕ್ಷರಾದ ಶ್ರೀ ಧರ್ಮಯೆಶಾಜಿ ಇವರು, ‘ನಾವು ನಮ್ಮ ಕುಟುಂಬದವರನ್ನು ರಕ್ಷಿಸುವಂತೆಯೇ ನಮ್ಮ ಧರ್ಮದ ರಕ್ಷಣೆಯನ್ನು ಮಾಡಬೇಕು. ಧರ್ಮ ಇದು ಮೋಕ್ಷದಾಯಕವಾಗಿದೆ, ಆದ್ದರಿಂದ ಓರ್ವ ಸೇವಕನಂತೆ ಧರ್ಮದ ರಕ್ಷಣೆಯನ್ನು ಮಾಡಿದರೆ ಧರ್ಮ ನಮ್ಮ ರಕ್ಷಣೆಯನ್ನು ಮಾಡುವುದು’ ಎಂದು ಹೇಳಿದರು.

ಕರ್ನಾಟಕದ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ್ ಇವರು ಮಾತನಾಡುತ್ತಾ, ‘ಕೊರೋನಾದಂತಹ ಇನ್ನು ಕೆಲವು ವಿಷಾಣುಗಳ ಸಂಕಟ ನಮ್ಮ ಮುಂದಿದೆ, ಅದೆಂದರೆ ಹಿಂದೂವಿರೋಧಿ ಹಾಗೂ ಹಿಂದೂದ್ರೋಹಿ ! ಎಲ್ಲ ರಾಷ್ಟ್ರಘಾತಕ ಶಕ್ತಿಗಳಿಗೆ ಉತ್ತರವೆಂದರೆ ‘ಹಿಂದೂ ರಾಷ್ಟ್ರ’ವೇ ಆಗಿದೆ’ ಎಂದು ಹೇಳಿದರು.

Spread the love
  • Related Posts

    ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ, ರಾಜ್ಯಕ್ಕೆ ಡಾ.ಸುಧಾ ಯಾದವ್ ನೇಮಕ

    ನವದೆಹಲಿ: ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅಧಿಕೃತ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಹಾಲಿ ರಾಜ್ಯಪಾಲರಾಗಿದ್ದ ಥಾವರ್‌ಚಂದ್ ಗೆಹ್ಲೋಟ್ ಅವರ ಅಧಿಕಾರಾವಧಿಯು ತೆರೆಕಂಡಿದ್ದು, ರಾಜ್ಯ ರಾಜಭವನಕ್ಕೆ ಹೊಸ ಮುಖ್ಯಸ್ಥರ ಆಗಮನವಾಗಲಿದೆ. ಕರ್ನಾಟಕ ಸೇರಿದಂತೆ…

    Spread the love

    ಸೌದಿ ಅರೇಬಿಯಾ ಏರ್ ಪೋರ್ಟ್‌ ಮೇಲೆ ಹೌತಿ ಉಗ್ರರ ದಾಳಿ – 12 ಮಂದಿ ಸಾವು, 300 ಕ್ಕೂ ಹೆಚ್ಚು ಮಂದಿಗೆ ಗಾಯ!

    ಸೌದಿ ಅರೇಬಿಯಾದ ರಾಜಧಾನಿ ರಿಯಾಧ್‌ನಲ್ಲಿರುವ ಪ್ರಮುಖ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ(Saudi airport) ಮೇಲೆ ಹೌತಿ ಬಂಡುಕೋರರು(Houthi Terrorists) ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ (Missile attack) 12 ಜನರು ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ…

    Spread the love

    You Missed

    ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ, ರಾಜ್ಯಕ್ಕೆ ಡಾ.ಸುಧಾ ಯಾದವ್ ನೇಮಕ

    • By admin
    • October 12, 2026
    • 4 views
    ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ, ರಾಜ್ಯಕ್ಕೆ ಡಾ.ಸುಧಾ ಯಾದವ್ ನೇಮಕ

    ಸೌದಿ ಅರೇಬಿಯಾ ಏರ್ ಪೋರ್ಟ್‌ ಮೇಲೆ ಹೌತಿ ಉಗ್ರರ ದಾಳಿ – 12 ಮಂದಿ ಸಾವು, 300 ಕ್ಕೂ ಹೆಚ್ಚು ಮಂದಿಗೆ ಗಾಯ!

    • By admin
    • October 11, 2026
    • 5 views
    ಸೌದಿ ಅರೇಬಿಯಾ ಏರ್ ಪೋರ್ಟ್‌ ಮೇಲೆ ಹೌತಿ ಉಗ್ರರ ದಾಳಿ – 12 ಮಂದಿ ಸಾವು, 300 ಕ್ಕೂ ಹೆಚ್ಚು ಮಂದಿಗೆ ಗಾಯ!

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ “ಅತ್ಯುತ್ತಮ ಮಹಿಳಾ ಸ್ನೇಹಿ ಆರ್ಥಿಕ ಸಂಸ್ಥೆ” – ಇಲಾಬೆನ್ ಸ್ಮಾರಕ ಪ್ರಶಸ್ತಿ’

    • By admin
    • October 10, 2026
    • 7 views
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ “ಅತ್ಯುತ್ತಮ ಮಹಿಳಾ ಸ್ನೇಹಿ ಆರ್ಥಿಕ ಸಂಸ್ಥೆ” – ಇಲಾಬೆನ್ ಸ್ಮಾರಕ ಪ್ರಶಸ್ತಿ’

    ಕಾಡಾನೆ ಸಂಚಾರ ಹಿನ್ನಲೆ ದಿಡುಪೆ ಫಾಲ್ಸ್ ಭೇಟಿಗೆ ನಿರ್ಬಂಧ

    • By admin
    • October 9, 2026
    • 10 views
    ಕಾಡಾನೆ ಸಂಚಾರ ಹಿನ್ನಲೆ ದಿಡುಪೆ ಫಾಲ್ಸ್ ಭೇಟಿಗೆ ನಿರ್ಬಂಧ

    ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ಸೇವಾಸಂಕಲ್ಪ ಅಭಿಯಾನ ಸಲುವಾಗಿ ಜಿಲ್ಲಾ ಮಟ್ಟದ ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ಬೆಳ್ತಂಗಡಿ ತೆಕ್ಕೆಗೆ, ವಿಜೇತರು ರಾಜ್ಯ ಮಟ್ಟಕ್ಕೆ ಆಯ್ಕೆ

    • By admin
    • October 9, 2026
    • 11 views
    ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ಸೇವಾಸಂಕಲ್ಪ ಅಭಿಯಾನ ಸಲುವಾಗಿ ಜಿಲ್ಲಾ ಮಟ್ಟದ ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ಬೆಳ್ತಂಗಡಿ ತೆಕ್ಕೆಗೆ, ವಿಜೇತರು ರಾಜ್ಯ ಮಟ್ಟಕ್ಕೆ ಆಯ್ಕೆ

    ಕೇರಳ: ಸಿಡಿಲು ಬಡಿದು ಪ್ರಸಿದ್ದ ಆನೆ ‘ಪಲ್ಲಟ್ಟು ಬ್ರಹ್ಮದತ್ತನ್’ ದುರಂತ ಸಾವು; ಶೋಕಸಾಗರದಲ್ಲಿ ಆನೆ ಪ್ರಿಯರು!

    • By admin
    • October 5, 2026
    • 14 views
    ಕೇರಳ: ಸಿಡಿಲು ಬಡಿದು ಪ್ರಸಿದ್ದ ಆನೆ ‘ಪಲ್ಲಟ್ಟು ಬ್ರಹ್ಮದತ್ತನ್’ ದುರಂತ ಸಾವು; ಶೋಕಸಾಗರದಲ್ಲಿ ಆನೆ ಪ್ರಿಯರು!