ನೇತ್ರಾವತಿ ಸ್ನಾನಘಟ್ಟದ ಅಣೆಕಟ್ಟಿನ ಬಳಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಸ್ವಚ್ಚತಾ ಕಾರ್ಯ

ಧರ್ಮಸ್ಥಳ: ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ನೇತ್ರಾವತಿ ಸ್ನಾನಘಟ್ಟದ ಬಳಿಯ ಅಣೆಕಟ್ಟಿನ ಸ್ವಚ್ಚತಾ ಕಾರ್ಯಕ್ರಮ‌ ಮತ್ತು ಸಿಲುಕಿದ್ದ ಬೃಹತ್ ಮರಗಳನ್ನು ತೆರವುಗೊಳಿಸುವ ಕಾರ್ಯ ಇಂದು ನಡೆಯಿತು.

ತತ್ ಕ್ಷಣಕ್ಕೆ ಎದುರಾಗುವ ಅಪಾಯದ ಪರಿಸ್ಥಿತಿಗಳನ್ನು ನಿಭಾಯಿಸಲು ಹುಟ್ಟಿಕೊಂಡಿರುವ ತಂಡ ಇದಾಗಿದ್ದು ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆಯ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ತಂಡದ ಸದಸ್ಯರೆಲ್ಲರೂ ಈಜುಪಟುಗಳು, ಉರಗ ತಜ್ಞರು, ಮರದ ನುರಿತ ಕೆಲಸಗಾರರಾಗಿದ್ದಾರೆ. ಹಾಗೂ ಇತ್ತೀಚೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(NDRF) ತಂಡದಿಂದ ತರಬೇತಿ ಪಡೆದಿದ್ದಾರೆ.

READ ALSO

ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ವರ್ಷ ಎದುರಾದ ಭೀಕರ ಪ್ರವಾಹದ ಆತಂಕ ತಾಲೂಕಿನಲ್ಲಿ ಸಹಜವಾಗಿ ಈ ಬಾರಿಯೂ ನೆಲೆಸಿತ್ತು. ಈ ಕುರಿತು ಆರಂಭದಿಂದಲೂ ಕಾರ್ಯಪ್ರವೃತ್ತವಾಗಿರುವ ಈ ತಂಡ ಅಣೆಕಟ್ಟುಗಳಲ್ಲಿ ಸಿಲುಕಿಕೊಂಡಿರುವ ಬೃಹತ್ ಮರಗಳನ್ನು, ದಿಮ್ಮಿಗಳನ್ನು ತೆರವುಗೊಳಿಸುತ್ತಾ ಬಂದಿದೆ.