ಬೆಂಗಳೂರು : ಕೋವಿಡ್ ಸೋಂಕಿನಿಂದ ಗುಣಮುಖರಾದವರು ಸಕ್ರೀಯ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಪ್ಲಾಸ್ಮಾ ದಾನ ಮಾಡಿದರೆ ಅವರಿಗೆ ಆರೈಕೆ ಭತ್ಯೆಯಾಗಿ 5000 ಸಾವಿರ ರೂಪಾಯಿಗಳನ್ನು ನೀಡಲು ಸರ್ಕಾರ ಅನುಮೋದನೆ ನೀಡಿದೆ.
ಕೊರೋನಾ ದಿಂದ ಗುಣಮುಖರಾದವರು 14 ರಿಂದ 28 ದಿನಗಳ ಒಳಗಾಗಿ ಸಕ್ರೀಯ ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ನೀಡಿದರೆ ಅವರಿಗೆ ಸರ್ಕಾರ ಗುಣಮಟ್ಟದ ಆಹಾರ ವೆಚ್ಚವಾಗಿ 5000 ಸಾವಿರ ರೂಪಾಯಿಗಳನ್ನು ನೀಡುತ್ತದೆ. ಇನ್ನು ಕೊರೊನಾ ಸೋಂಕಿನಿಂದ ಗುಣಮುಖವಾದವರೆಲ್ಲರೂ ಪ್ಲಾಸ್ಮಾವನ್ನು ಬೇಕಾಬಿಟ್ಟಿ ನೀಡೋದಕ್ಕೆ ಸಾಧ್ಯವಿಲ್ಲ. ಅದಕ್ಕೆ ಸರ್ಕಾರ ಕೆಲವೊಂದು ಷರತ್ತುಗಳನ್ನು ವಿಧಿಸಿದೆ.
- ಒಂದು ವ್ಯಕ್ತಿಯಿಂದ ಒಂದು ಬಾರಿಗೆ ಮಾತ್ರ ಪ್ಲಾಸ್ಮಾವನ್ನು ಪಡೆಯಬೇಕು.
- ಅಂತಹ ವ್ಯಕ್ತಿಗಳ ಆಧಾರ್ ಸಂಖ್ಯೆ, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆದು ದಾಖಲೆ ನಿರ್ವಹಿಸಬೇಕು.
- ದಾನ ಪಡೆದ ಪ್ಲಾಸ್ಮಾವನ್ನು ಯಾವ ವ್ಯಕ್ತಿಯ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತದೆಯೋ, ಆ ವ್ಯಕ್ತಿಯ ಸಂಪೂರ್ಣ ಮಾಹಿತಿಯ ದಾಖಲೆಯನ್ನು ನಿರ್ವಹಿಸಬೇಕು.
ಈ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ಒಬ್ಬ ಕೊರೋನಾ ದಿಂದ ಗುಣಮುಖವಾದ ವ್ಯಕ್ತಿಯಿಂದ ಪ್ಲಾಸ್ಮಾವನ್ನು ಪಡೆಯಬಹುದಾಗಿದೆ. ಇನ್ನು ಕೋವಿಡ್ ಮಾನವ ಶಕ್ತಿ ಮತ್ತು ತರಬೇತಿ ಟಾಸ್ಕ್ ಫೋರ್ಸ್ ಸರ್ಕಾರಕ್ಕೆ ಆರೈಕೆ ಭತ್ಯೆ ನೀಡುವ ಬಗ್ಗೆ ಶಿಫಾರಸ್ಸು ಮಾಡಿತ್ತು. ಇದಕ್ಕೆ ಸರ್ಕಾರ ಇದೀಗ ಅನುಮೋದನೆ ನೀಡಿದೆ.