TRENDING
Next
Prev

ನೆರೆ ಪೀಡಿತ ಪ್ರದೇಶಗಳಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ತುರ್ತು ಸ್ಪಂದನೆ ಸಿಬ್ಬಂದಿ‌ಗಳ ಕಾರ್ಯಾಚರಣೆ.

ಬೆಳ್ತಂಗಡಿ : ತಾಲೂಕಿನಲ್ಲಿ ಬರುತ್ತಿರುವ ಮಹಾಮಳೆಗೆ ನದಿಗಳಲ್ಲಿ ಭೀಕರವಾಗಿ ತುಂಬಿಹರಿಯುತ್ತಿರುವ ನೀರಿನಿಂದ ಜನ ಭಯಭೀತರಾಗಿದ್ದು ಈ ನಡುವೆ ಕೆಲವು ನದಿಗಳಲ್ಲಿ ಮರಗಳು, ಮರದ ತುಂಡುಗಳು ಬಂದು ಭೀಕರತೆ‌ ಸೃಷ್ಟಿಸುತ್ತಿದೆ.

ಈ ಮಳೆಯ ನಡುವೆ ಸರ್ಕಲ್‌ ಇನ್ಸ್‌ಪೆಕ್ಟರ್ ಸಂದೇಶ್.ಪಿ.ಜಿ ನೇತೃತ್ವದ ಬೆಳ್ತಂಗಡಿ ಪೊಲೀಸ್ ಠಾಣೆಯ ಪಿ.ಎಸ್ಐ ನಂದಕುಮಾರ್.ಎಮ್.ಎಮ್ ಇವರ ತುರ್ತು ಸ್ವಂದನ ತಂಡದ ಸಿಬ್ಬಂದಿಗಳಾದ ಪ್ರೋಬೇಷನರಿ ಪಿಎಸ್ಐ ಶರತ್ ಎಮ್.ಎಲ್, ಎಎಸ್ಐ ರಾಮಯ್ಯ ಹೆಗ್ಡೆ,ಹೆಡ್ ಕಾನ್ಟೇಬಲ್ ವೃಷಭ ಜೈನ್ ,ಕಾನ್ಟೇಬಲ್ ಗಳಾದ ಕಿರಣ್ ಕುಮಾರ್, ಮಾಲ್ತೇಶ್ , ವೆಂಕಟೇಶ್,ಶಶಿಕುಮಾರ್,ಚರಣ್ ರಾಜ್, ಗುತ್ಯಾಪ್ಪ, ನಾಗರಾಜ್, ಮಂಜುನಾಥ್ ಇವರುಗಳು ತಮ್ಮ ಪ್ರಾಣದ ಹಂಗು ತೊರೆದು ದಿಡುಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿಸರದಲ್ಲಿ ತಂಡ ಮೊಕ್ಕಂ ಹೋಡಿದ್ದು ನದಿ ,ಹಳ್ಳಕ್ಕೆ ಇಳಿದು ನೀರಿನಿಂದ ತೆರವು ಕಾರ್ಯಾಚಣೆಯಲ್ಲಿ ತೋಡಗಿಕೊಂಡಿದ್ದಾರೆ.

READ ALSO