ಕೊಡಗಿನ ತಲಕಾವೇರಿಯಲ್ಲಿ ಭೂ ಸಮಾಧಿಯಾಗಿರುವ ಐವರ ಪೈಕಿ ಓರ್ವರ ಮೃತದೇಹ ಪತ್ತೆ! ಮುಂದುವರಿದ ಶೋಧ ಕಾರ್ಯಾಚರಣೆ

ಮಡಿಕೇರಿ: ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಅರ್ಚಕರ ಮನೆಗಳ ಮೇಲೆ ಕುಸಿದು ಭೂಸಮಾಧಿಯಾಗಿರುವ ಐವರು ಅರ್ಚಕರ ಪೈಕಿ ಓರ್ವರ ಮೃತದೇಹ ಇಂದು ಪತ್ತೆಯಾಗಿದೆ.

ನಿರಂತರ ಶೋಧ ಕಾರ್ಯಾಚರಣೆ ಕೈಗೊಂಡಿರುವ ಎನ್ ಡಿ ಆರ್ ಎಫ್ ತಂಡ ಒಂದು ಮೃತದೇಹ ಪತ್ತೆಹಚ್ಚಿದೆ. ಮೃತರನ್ನು ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಸೋದರ ಆನಂದ ತೀರ್ಥ ಸ್ವಾಮೀಜಿ ಎಂದು ಗುರುತಿಸಲಾಗಿದೆ. ಬಂಟ್ವಾಳ ಮತ್ತು ಕಾಸರಗೋಡು ಮೂಲದ ಇಬ್ಬರು ಅರ್ಚಕರ ಸಹಿತ ನಾಲ್ವರು ಇನ್ನೂ ಪತ್ತೆಯಾಗದೇ ಇದ್ದು ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

READ ALSO