ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ ಸುಳ್ಳು ಸಂದೇಶ ರವಾನಿಸಿದ ವ್ಯಕ್ತಿಗೆ 25 ಲಕ್ಷ ರೂ. ದಂಡ!

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕುರಿತು ಅವಹೇಳನಾಕಾರಿ ಸುಳ್ಳು ಸಂದೇಶ ರವಾನಿಸಿದ ವ್ಯಕ್ತಿಗೆ ಬೆಳ್ತಂಗಡಿ ಪ್ರಧಾನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ 25 ಲಕ್ಷ ರೂಪಾಯಿ ದಂಡ ವಿಧಿಸಿದೆ.

READ ALSO

ಗುರುವಾಯನಕೆರೆಯ ಕೆ. ಸೋಮನಾಥ್ ನಾಯಕ್ ಎಂಬವರು , ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕುರಿತು ಸುಳ್ಳು ಎಸ್ಎಂಎಸ್ ರವಾನಿಸಿದ ಹಿನ್ನೆಲೆಯಲ್ಲಿ ಧರ್ಮಸ್ಥಳದ ಅಂದಿನ ಮ್ಯಾನೇಜರ್ ಉಡುಪ ಎಂಬವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.

ನ್ಯಾಯಾಲಯ ಸೋಮನಾಥ್ ನಾಯಕ್ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದರೂ ಸಹ ಮತ್ತೆ ಸುಳ್ಳು ಎಸ್ಎಂಎಸ್ ರವಾನಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಷ್ಟ ಪರಿಹಾರವಾಗಿ 25 ಲಕ್ಷ ರೂ. ನೀಡಲು ಆದೇಶಿಸಿದೆ.