ಖಾಸಗಿ ಆಸ್ಪತ್ರೆಯಲ್ಲಿ ನಿಗದಿತ ಬಿಲ್ ಗಿಂತ ಹೆಚ್ಚಿನ ಹಣ ವಸೂಲು ಮಾಡಿದರೆ ಕ್ರಿಮಿನಲ್ ಕೇಸ್! ಐಜಿಪಿ ಡಿ.ರೂಪ ಖಡಕ್ ಸೂಚನೆ!

ಬೆಂಗಳೂರು : ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ನಿಗದಿತ ಬಿಲ್ ಗಿಂತ ಹೆಚ್ಚಿನ ಹಣ ವಸೂಲು ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಐಜಿಪಿ ಡಿ.ರೂಪ ಅವರು ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾಗಿ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ಮೂರು ಆಸ್ಪತ್ರೆಗಳಲ್ಲಿ ಲೋಪದೋಷ ಕಂಡುಬಂದಿದ್ದು ಅದನ್ನು ತಿದ್ದುಕೊಳ್ಳಲು ಸೂಚಿಸಿದ್ದನ್ನು ಆಸ್ಪತ್ರೆಯ ಆಡಳಿತ ಮಂಡಳಿ ಒಪ್ಪಿಕೊಂಡಿದೆ. ಬೆಡ್ ಎಷ್ಟಿದೆ ಎಂದು ನೀವು ಪಟ್ಟಿ ಮಾಡಿ ಹಾಕಬೇಕು.

ಆನ್​ಲೈನ್​​​ನಲ್ಲಿ ಪ್ರತಿ ಬೆಡ್​ನ ಮಾಹಿತಿ ಇರಬೇಕು. ಈ ಮೊದಲು ನಾವು ಅವರಿಗೆ ಸರ್ಕಾರದ ಸೂಚನೆಗಳ ಪಾಲಿಸುವಂತೆ ಸೂಚಿಸಿದ್ದೇವೆ ಎಂದು ಹೇಳಿದರು.

ಸರ್ಕಾರ ನಿಗದಿ ಮಾಡಿದ ಹಣಕ್ಕಿಂತ ಮೂರು ಪಟ್ಟು ಬಿಲ್ ಮಾಡಿದ್ದಾರೆ.ಇದರ ಬಗ್ಗೆ ನಿಮಗೆ ಮಾಹಿತಿ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದೇವೆ. ಇದುವರೆಗೆ ಹೆಚ್ಚಿನ‌ ಬಿಲ್ ಪಡೆದಿರುವವರಿಗೆ ಹಣ ವಾಪಸ್ ಮಾಡುತ್ತೇವೆ ಬಿಬಿಎಂಪಿ ಗಮನಕ್ಕೆ ತರದೆ ನೇರವಾಗಿ ಆಸ್ಪತ್ರೆಗೆ ಹೋದವರಿಗೆ ಹೆಚ್ಚಿನ ಬಿಲ್ ಮಾಡಿದ್ದಾರೆ ಎಂದು ರೂಪ ತಿಳಿಸಿದರು.

ಕೊರೊನಾ ತಪಾಸಣೆ ಮಾಡಿ ಪರೀಕ್ಷೆ ನಡೆಸಿ ವರದಿ ಬರಲು ಮೂರು ದಿನ ಅಗಲಿದೆ ಪಾಸಿಟಿವ್ ಬಂದವರು ಗಾಬರಿಯಾಗಿ ಖಾಸಗಿ ಆಸ್ಪತ್ರೆಗೆ ಹೋಗಿ ಸೇರಿಕೊಳ್ಳುತ್ತಿ ದ್ದಾರೆ. ಹಾಗೆ ಮಾಡದೆ ಸರ್ಕಾರದ ಪ್ರೊಸಿಜರ್ ಮೂಲಕ ಹೋದರೆ ಸಮಸ್ಯೆ ಅಗುವುದಿಲ್ಲ. ಕೆಲವರಿಗೆ ಮನೆಯಲ್ಲಿ‌ ಕ್ವಾರಂಟೈನ್ ಮಾಡಿಕೊಳ್ಳಲು ಸೂಚಿಸಲಾಗುತ್ತದೆ.ಆದರೆ ಕೇಳದೆ ಕೆಲವರು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲೂ ಕೂಡ ಹಾಗೆ ಬರುವವರಿಗೆ ಸರ್ಕಾರದ ಮೂಲಕ ಬರುವಂತೆ ತಿಳಿಸಬೇಕು. ಸರ್ಕಾರ ನಿಗದಿ ಮಾಡಿರುವ ಚಿಕಿತ್ಸೆ ವೆಚ್ಚವನ್ನಷ್ಟೇ ಬಿಲ್ ಮಾಡುವಂತೆ ಸೂಚಿಸಿದ್ದೇವೆ. ಆಸ್ಪತ್ರೆಗಳಲ್ಲಿ, ರೋಗಿಗಳ ಬಳಿ ವಿಮೆ ಇದ್ದರೆ ಹೇಳಿ ಎಂದು ಹಣ ಮಾಡುವ ಆರೋಪ ಕೇಳಿಬಂದಿದೆ. ಅದರ ಬಗ್ಗೆ ಕೂಡ ನಾವು ಗಮನ ಹರಿಸಿದ್ದೇವೆ ಎಂದರು.

Spread the love
  • Related Posts

    17ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪ್ರೌಢಶಾಲೆಯ ಕು. ಯಕ್ಷಿತಾ.ಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    ಬೆಳ್ತಂಗಡಿ: ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯ 17 ರ ವಯೋಮಾನದ ಬಾಲಕಿಯರ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಪ್ರೌಢಶಾಲೆಯ ಕುಮಾರಿ ಕು.ಯಕ್ಷಿತಾ.ಜೆ ಇವಳು ಚಿನ್ನದ ಪದಕ ಪಡೆದು ನವೆಂಬರ್ 7…

    Spread the love

    14ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಪ್ರಾಥಮಿಕ ಶಾಲೆಯ ಕು.ರಕ್ಷಿತಾ. ಜೆ ರಾಷ್ಟ್ರಮಟ್ಟಕ್ಕೆ ಆಯ್ಕೆ

    ಬೆಳ್ತಂಗಡಿ: ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯ 14 ರ ವಯೋಮಾನದ ಬಾಲಕಿಯರ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ ಬೆಳ್ತಂಗಡಿ ತಾಲೂಕಿನ ಬಂದಾರು ಸ.ಹಿ.ಉ.ಪ್ರಾ ಶಾಲೆಯ ಕುಮಾರಿ ರಕ್ಷಿತಾ.ಜೆ ಇವಳು ಚಿನ್ನದ ಪದಕ ಪಡೆದು ನವೆಂಬರ್…

    Spread the love

    You Missed

    17ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪ್ರೌಢಶಾಲೆಯ ಕು. ಯಕ್ಷಿತಾ.ಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    • By admin
    • October 19, 2025
    • 52 views
    17ವಯೋಮಾನದ  ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪ್ರೌಢಶಾಲೆಯ ಕು. ಯಕ್ಷಿತಾ.ಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    14ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಪ್ರಾಥಮಿಕ ಶಾಲೆಯ ಕು.ರಕ್ಷಿತಾ. ಜೆ ರಾಷ್ಟ್ರಮಟ್ಟಕ್ಕೆ ಆಯ್ಕೆ

    • By admin
    • October 19, 2025
    • 47 views
    14ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಪ್ರಾಥಮಿಕ ಶಾಲೆಯ ಕು.ರಕ್ಷಿತಾ. ಜೆ  ರಾಷ್ಟ್ರಮಟ್ಟಕ್ಕೆ ಆಯ್ಕೆ

    ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ 6 ನೇ ವರ್ಷದ ದೀಪಾವಳಿ ದೋಸೆ ಹಬ್ಬ, ಗೋ ಪೂಜಾ ಉತ್ಸವ : ಶಶಿರಾಜ್ ಶೆಟ್ಟಿ

    • By admin
    • October 15, 2025
    • 27 views
    ಬಿಜೆಪಿ ಯುವ ಮೋರ್ಚಾ ವತಿಯಿಂದ ಬೆಳ್ತಂಗಡಿಯಲ್ಲಿ 6 ನೇ ವರ್ಷದ ದೀಪಾವಳಿ ದೋಸೆ ಹಬ್ಬ, ಗೋ ಪೂಜಾ ಉತ್ಸವ : ಶಶಿರಾಜ್ ಶೆಟ್ಟಿ

    ಸಕಲೇಶಪುರ: ನಾಳೆ ದುಶ್ಚಟಗಳ ವಿರುದ್ಧ ಜನಜಾಗೃತಿ ಜಾಥಾ ಹಾಗೂ ಸಮಾವೇಶ

    • By admin
    • October 13, 2025
    • 21 views
    ಸಕಲೇಶಪುರ: ನಾಳೆ ದುಶ್ಚಟಗಳ ವಿರುದ್ಧ ಜನಜಾಗೃತಿ ಜಾಥಾ ಹಾಗೂ ಸಮಾವೇಶ

    ಶ್ರದ್ಧಾ ಭಕ್ತಿಯಿಂದ ಭಗವಂತನ ಆರಾಧನೆಯೊಂದಿಗೆ ಸಾಧ್ಯವಾದಷ್ಟು ಪರೋಪಕಾರ ಹಾಗೂ ಇತರರ ಸೇವೆ ಮಾಡಿದಾಗ ದೇವರು ಸಂತೃಪ್ತರಾಗಿ ನಮ್ಮನ್ನು ಅನುಗ್ರಹಿಸುತ್ತಾರೆ.

    • By admin
    • October 12, 2025
    • 47 views
    ಶ್ರದ್ಧಾ ಭಕ್ತಿಯಿಂದ ಭಗವಂತನ ಆರಾಧನೆಯೊಂದಿಗೆ ಸಾಧ್ಯವಾದಷ್ಟು ಪರೋಪಕಾರ ಹಾಗೂ ಇತರರ ಸೇವೆ ಮಾಡಿದಾಗ ದೇವರು ಸಂತೃಪ್ತರಾಗಿ ನಮ್ಮನ್ನು ಅನುಗ್ರಹಿಸುತ್ತಾರೆ.

    ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರಿಂದ ಉಸ್ತುವಾರಿ ಸಚಿವರಿಗೆ ಮನವಿ

    • By admin
    • October 11, 2025
    • 43 views
    ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ನೂತನ ಕಟ್ಟಡಗಳ ನಿರ್ಮಾಣಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರಿಂದ ಉಸ್ತುವಾರಿ ಸಚಿವರಿಗೆ ಮನವಿ