ಕೊರೋನಾ ಸಂಕಷ್ಟದ ಸಮಯದಲ್ಲೂ ಮಕ್ಕಳಿಗೆ ಶಿಕ್ಷಣದ ಜೊತೆ ಬದುಕಿನ ಪಾಠ ಕಲಿಸಿದ ಪುಷ್ಪಾವತಿ ಟೀಚರ್

ಬಚ್ಚಿಟ್ಟ ಜ್ಞಾನ ಕೊಳೆಯುತ್ತದೆ….
ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ….

ಹೌದು ಜ್ಞಾನ ಅನ್ನೋದು ಕೆಲವರಿಗೆ ಮಾತ್ರ ಕರುಣಿಸುವಂತದ್ದು. ಅದನ್ನು ಇನ್ನೊಬ್ಬರಿಗೆ ಹಂಚಿದರೆ ಮಾತ್ರ ಅದಕ್ಕೊಂದು ಬೆಲೆಯಿರುತ್ತದೆ. ಕೇವಲ ಸಂಪಾದನೆಗೆ ಮಾತ್ರವೇ ಜ್ಞಾನವನ್ನು ಉಪಯೋಗಿಸಿದರೆ ಅದು ಬಿಸಿನೆಸ್ ಆಗಿರುತ್ತದೆಯೇ ಹೊರತು ಜ್ಞಾನಕ್ಕೆ ಬೆಲೆಯಿರುವುದಿಲ್ಲ. ಅಧ್ಯಾಪಕಿ ಅನ್ನೋದು ಕೇವಲ ಒಂದು ಪದವಿ ಎಂದು ಭಾವಿಸೋದು ಮೂರ್ಖತನ. ಅದು ವಿದ್ಯಾರ್ಥಿಗಳ ಬಾಳಿನ ದಾರಿದೀಪˌ ನಂದಾದೀಪ ಹಾಗೂ ಮಕ್ಕಳ ಜೀವನದ ಯಶಸ್ಸಿಗೆ ಒಂದು ಸೇತುವೆ ಅಂತ ತಿಳಿದವರು ಮಾತ್ರ ಅಧ್ಯಾಪಕಿ ಅನ್ನುವ ಪದವಿಯನ್ನು ಸಿಂಗರಿಸಬಹುದು.

ಇಂತಹ ಒಂದು ಅಧ್ಯಾಪಕಿ ಪದವಿಗೆ ಸಿಂಗಾರವಾಗಿದ್ದಾರೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಂಜರ್ ಪೇಟೆಯ ಅತಿಥಿ ಶಿಕ್ಷಕಿ ಶ್ರೀಮತಿ ಪುಷ್ಪಾವತಿ..!

ಶ್ರೀಮತಿ ಪುಷ್ಪಾವತಿ

ತಾನು ಅತಿಥಿ ಶಿಕ್ಷಕಿಯಾಗಿ ಹೋಗುತ್ತಿದ್ದ ಸ.ಮಾ.ಪ್ರಾ. ಶಾಲೆ ಕಲ್ತೋಡು ಲಾಕ್ ಡೌನ್ ಕಾರಣದಿಂದ ಮುಚ್ಚಿ ಕೆಲವು ತಿಂಗಳುಗಳೇ ಕಳೆದವು. ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಲೆಯಲ್ಲಿರುವ ಇಂಥ ಸಮಯದಲ್ಲಿ ತಾನು ಕಲಿತ ಜ್ಞಾನವನ್ನು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಧಾರೆಯೆರೆದಿದ್ದಾರೆ.
ತನ್ನ ಮನೆಯ ಅಕ್ಕ ಪಕ್ಕದಲ್ಲಿ ಇರುವ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿ ಕಲಿಸೋದು ಅಧ್ಯಾಪಕಿಯಾದ ಇವರಿಗೇನೂ ಕಷ್ಟದ ಕೆಲಸವಲ್ಲದಿದ್ದರೂ ಜಾಗದ ಅಭಾವವಿತ್ತು ಹಾಗೂ ಕೊರೋನಾದ ಭಯವಿತ್ತು.

“ಮನಸ್ಸಿದ್ದರೆ ಮಾರ್ಗ” ತನ್ನ ಜ್ಞಾನವನ್ನು ವಿದ್ಯಾರ್ಥಿಳಿಗೆ ಹಂಚಲು ಕಷ್ಟವೇನಿಲ್ಲ. ಕೋರೋನಾ ಅನ್ನುವ ಮಹಾಮಾರಿಯ ನಡುವೆ ಮಕ್ಕಳ ಕಲಿಕೆಯ ಮೇಲೆ ಅಭಾವ ಬೀರಬಾರದೆಂದು ಅವರು ಅಯ್ದುಕೊಂಡದ್ದು ತನ್ನ ಮನೆಯ ಪಕ್ಕ ಗಣೇಶೋತ್ಸವದಂದು ಗಣಪತಿಯನ್ನು ಕೂರಿಸಲು ನಿರ್ಮಿಸಿರುವ ಚಿಕ್ಕ ಗುಡಿಯನ್ನು.

ಅಲ್ಲಿ ತಾನೇ ಸ್ವಂತ ಖರ್ಚಿನಲ್ಲಿ ಕಲಿಕಾ ಸಾಮಾಗ್ರಿಗಳನ್ನು ಖರೀದಿಸಿ ಆ ಗುಡಿಯನ್ನು ಶಾಲೆಯಾಗಿ ಪರಿವರ್ತಿಸಿದ್ದಾರೆ. 10-15 ಮಕ್ಕಳನ್ನು ಸೇರಿಸಿ ಕೊರೋನಾ ಜಾಗೃತಿಯ ಜೊತೆಗೆ, ಕಥೆˌ ಅಭಿನಯˌ ಗೀತೆˌ ಬರೆಯುವುದುˌ ಓದುವುದುˌ ಕ್ರಾಪ್ಟ್ ಮುಂತಾದ ಚಟುವಟಿಕೆಗಳನ್ನು ಮಾಡಿಸಿ ಚಿಕ್ಕದಾದ ಶಾಲೆಯ ವಾತಾವರಣವನ್ನೇ ನಿರ್ಮಿಸಿದ್ದಾರೆ.

ಕೋರೋನಾ ಅನ್ನುವ ಮಹಾಮಾರಿ ವೈರಸ್ ಗೆ ಭಯ ಪಡದೆ ಮಕ್ಕಳ ಭವಿಷ್ಯದ ಮೇಲೆ ಹೊಸಬೆಳಕು ಚೆಲ್ಲುತ್ತಿದ್ದಾರೆ. ತನ್ನ ಮನೆ ಕೆಲಸವನ್ನೆಲ್ಲ ಮಧ್ಯಾಹ್ನದವರೆಗೆ ಮಾಡಿ ಮುಗಿಸಿ ನಂತರ ಮಕ್ಕಳಿಗೆ ಪಾಠ ಮಾಡಲು ಶುರು ಮಾಡುತ್ತಾರೆ. ಕೊರೋನಾದ ಭಯವನ್ನು ಹೋಗಲಾಡಿಸಲು ಸರಕಾರದ ನಿಯಮದಂತೆ ಮಕ್ಕಳಿಗೆ ಸಾನಿಟೈಸರ್ˌ ಮಾಸ್ಕ್, ಬಿಸಿ ನೀರು ಹಾಗೂ ಸಾಮಾಜಿಕ ಅಂತರ ಪಾಲಿಸಿಕೊಂಡು ಮಕ್ಕಳಿಗೆ ಪಾಠಗಳನ್ನು ಭೋದಿಸುತ್ತಾ ಬಂದಿದ್ದಾರೆ. ಮತ್ತು ಮಕ್ಕಳನ್ನು ಓಲೈಸಲು ಟಾಕಲೇಟ್ˌ ಬಿಸ್ಕೆಟ್ ನೀಡಿ ಕ್ಲಾಸಿಗೆ ತಪ್ಪಿಸದಂತೆ ಚಾಣಕ್ಷತನ ಮೆರೆಯುತ್ತಾರೆ. ಶಿಕ್ಷಕಿ ಪುಷ್ಪಾವತಿಯವರ ಈ ಕಾಳಜಿ ಪ್ರತಿ ಬಡ ಮಕ್ಕಳ ಭವಿಷ್ಯವನ್ನು ರೂಪಿಸುವ ಮಾರ್ಗವಾಗಲಿ ಹಾಗೂ ಪ್ರತಿ ಶಿಕ್ಷಕರಿಗೂ ಮಾದರಿಯಾಗಲಿ.

ಇಂತಹ ಗ್ರಾಮೀಣ ಪ್ರತಿಭೆ ಕೊಡಗಿನ ಶಿಕ್ಷಕಿ ಪುಷ್ಪಾವತಿ ಯವರಿಗೆ ನಮ್ಮದೊಂದು ಸಲಾಂ……

ಹಾಗೇ “ಬಚ್ಚಿಟ್ಟ ಜ್ಞಾನ ಕೊಳೆಯುತ್ತದೆ….”
“ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ….” ಎಂದು ತಿಳಿದಿರಲಿ..!

Spread the love
  • Related Posts

    ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ ಹಬ್ಬದ ವೈಶಿಷ್ಟ್ಯ ಆಚರಣೆಗಳ ಮಹತ್ವ

    ದೈನಂದಿನ ಸಮಾಜಿಕ ಧಾರ್ಮಿಕ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವಂತಹದ್ದೆ “ಹಬ್ಬಗಳು”. ಇಡೀ ಮನುಷ್ಯ ಸಮೂಹಕ್ಕೆ ಸಂತೋಷ, ಸಡಗರ ಸಹಜ ಪ್ರೀತಿಯ ವಿಷಯವಾಗಿರುವುದೇ ಹಬ್ಬಗಳು. ಇಂದಿನ ಆಧುನಿಕ ಒತ್ತಡಯುಕ್ತ ಜೀವನದಲ್ಲಿ ತೊಡಗಿದ್ದಾಗಲೂ, ಹಬ್ಬಹರಿದಿನಗಳ ಬಗೆಗಿನ ಆಸಕ್ತಿಯು ಕಳೆದುಕೊಂಡಿಲ್ಲದ್ದನ್ನು ಕಾಣಬಹುದು. ಹಬ್ಬವೆಂಬುದು ಕೆಲವೇ ಧರ್ಮ ಸಂಪ್ರದಾಯಕ್ಕೆ…

    Spread the love

    ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಚೈತ್ರೇಶ್ ಇಳಂತಿಲ ಆಯ್ಕೆ

    ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ಜ.5 ರಂದು ಸಂಘದ ಕಚೇರಿಯಲ್ಲಿ ನಡೆದು 2024 ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಉದಯವಾಣಿ ವರದಿಗಾರ ಚೈತ್ರೇಶ್ ಇಳಂತಿಲ, ಉಪಾಧ್ಯಕ್ಷರಾಗಿ ವಾರ್ತಾಭಾರತಿ ವರದಿಗಾರ ಶಿಬಿ ಧರ್ಮಸ್ಥಳ, ಕಾರ್ಯದರ್ಶಿಯಾಗಿ ಪ್ರಜಾವಾಣಿ ವರದಿಗಾರ…

    Spread the love

    You Missed

    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • June 16, 2025
    • 138 views
    ದ.ಕ ಜಿಲ್ಲೆಯಾದ್ಯಂತ ಮುಂದುವರಿದ ವರುಣಾರ್ಭಟ ಎಲ್ಲಾ  ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    • By admin
    • June 15, 2025
    • 154 views
    ಪೂರ್ಣಗೊಳ್ಳದ ಚರಂಡಿ ಕಾಮಗಾರಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಚರಂಡಿಗೆ ಬಿದ್ದು ಗಾಯ

    ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ವ್ಯಕ್ತಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು

    • By admin
    • June 12, 2025
    • 97 views
    ಅಪಘಾತಕ್ಕೊಳಗಾಗಿ ಶುಶ್ರೂಷೆಯಲ್ಲಿರುವ ವ್ಯಕ್ತಿಗೆ ತಾಲೂಕು ಪ್ರಿಂಟರ್ಸ್ ಅಶೋಸಿಯೇಶನ್ ವತಿಯಿಂದ ತುರ್ತು ಆರ್ಥಿಕ ನೆರವು

    ಕರಾವಳಿಯಾದ್ಯಂತ ಚುರುಕುಗೊಂಡ ಮುಂಗಾರು, ವಿಪರೀತ ಮಳೆ ಸಾಧ್ಯತೆ ಶಾಲೆಗೆ ರಜೆ ಘೋಷಣೆ

    • By admin
    • June 12, 2025
    • 56 views
    ಕರಾವಳಿಯಾದ್ಯಂತ ಚುರುಕುಗೊಂಡ ಮುಂಗಾರು, ವಿಪರೀತ ಮಳೆ ಸಾಧ್ಯತೆ ಶಾಲೆಗೆ ರಜೆ ಘೋಷಣೆ

    ಬೆಳ್ತಂಗಡಿ, ಪುಂಜಾಲಕಟ್ಟೆ PSI ನಂದಕುಮಾರ್ ರವರಿಗೆ ಪೋಲೀಸ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ

    • By admin
    • June 11, 2025
    • 67 views
    ಬೆಳ್ತಂಗಡಿ, ಪುಂಜಾಲಕಟ್ಟೆ PSI ನಂದಕುಮಾರ್ ರವರಿಗೆ ಪೋಲೀಸ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ

    ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡಕ್ಕೆ ಸರ್ಕಾರದಿಂದ 9 ಕೋಟಿ ಅನುದಾನ ಮಂಜೂರು

    • By admin
    • June 11, 2025
    • 75 views
    ಬೆಳ್ತಂಗಡಿಗೆ ಹೊಸ ನ್ಯಾಯಾಲಯ ಕಟ್ಟಡಕ್ಕೆ ಸರ್ಕಾರದಿಂದ 9 ಕೋಟಿ ಅನುದಾನ ಮಂಜೂರು