ಕೋವಿಡ್ ಸೋಂಕಿಗೆ ಬೆಳ್ತಂಗಡಿಯ ಚಾರ್ಮಾಡಿ ಮೂಲದ ಮಹಿಳೆ ಬಲಿ!

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಪಾಂಡಿಕಟ್ಟೆ ನಿವಾಸಿ 60 ವರ್ಷದ ಮಹಿಳೆಯೋರ್ವರು ಗುರುವಾರ ಕೋವಿಡ್-19 ಸೋಂಕಿನ ಕಾರಣದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.

ತಾಲೂಕಿನಲ್ಲಿ ಒಟ್ಟು ಕೋವಿಡ್ ಸೋಂಕಿಗೆ ಬಲಿಯಾದವರ ಸಂಖ್ಯೆ 7 ಕ್ಕೇರಿದ್ದು ವೇಣೂರು, ಮಲವಂತಿಗೆ, ನೆರಿಯಾ, ಪಡಂಗಡಿ , ಕಣಿಯೂರು, ನಾರಾವಿ ಸೇರಿದಂತೆ ಇಂದು ಚಾರ್ಮಾಡಿಯ ಮಹಿಳೆ ಕೊವಿಡ್ ಸೋಂಕಿನಿಂದ ಮೃತರಾಗಿದ್ದಾರೆ.

READ ALSO

ಇವರಿಗೆ ಉಸಿರಾಟದ ಸಮಸ್ಯೆ ಇದ್ದಿದ್ದರಿಂದ ಕಳೆದ ಮೂರು ದಿನಗಳ ಹಿಂದೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಮನೆಯಲ್ಲೆ ಐಸೋಲೇಶನ್ ಗೆ ಒಳಪಡಿಸಲಾಗಿತ್ತು. ಬುಧವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮಹಿಳೆ ಮನೆಯಲ್ಲೆ ಮೃತಪಟ್ಟಿದ್ದಾರೆ.