ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಬಳಿ 4 ಮನೆಗಳ ಮೇಲೆ ಗುಡ್ಡ ಕುಸಿದು ಬಿದ್ದ ಘಟನೆ ನಡೆದಿದ್ದು
ಇಬ್ಬರು ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಗುಡ್ಡ ಇನ್ನೂ ಕುಸಿಯುತ್ತಿದ್ದು ಎಂಟು ಮನೆಗಳು ಅಪಾಯದಲ್ಲಿದೆ. ತೆಂಗಿನ ಮರ ಸೇರಿದಂತೆ ಕೆಲವು ಮರಗಳು ಮಣ್ಣಿನ ಜೊತೆಗೆ ಕುಸಿದು ಬಿದ್ದಿದ್ದು
ಘಟನಾ ಸ್ಥಳಕ್ಕೆ ndrf ತಂಡ ಹಾಗೂ ಸ್ಥಳೀಯ ಪೋಲೀಸರು ಧಾವಿಸಿದ್ದು, ಮಣ್ಣಿನಡಿ ಸಿಲುಕಿರುವವರ ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ.