ಎಕ್ಸೆಲ್ ಕಾಲೇಜಿನ ವಿದ್ಯಾಸಾಗರ ಕ್ಯಾಂಪಸ್ ನಲ್ಲಿ ಸರಸ್ವತಿ ಗೋ ಮಂದಿರ ಲೋಕಾರ್ಪಣೆ

ಬೆಳ್ತಂಗಡಿ: ಹಲವು ಶೈಕ್ಷಣಿಕ ದಾಖಲೆಗಳ ಮೂಲಕ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾದ ಗುರುವಾಯನಕೆರೆ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆವರಣ ಇಂದು ಹೊಸ ವಿಷಯಕ್ಕೆ ಗಮನ ಸೆಳೆಯಿತು.

ಏಪ್ರಿಲ್ 10 ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರ ಜನ್ಮ ದಿನಾಚರಣೆಯ ಶುಭವಸರದಲ್ಲಿ ಎಕ್ಸೆಲ್ ಕಾಲೇಜಿನ ವಿದ್ಯಾಸಾಗರ ಕ್ಯಾಂಪಸ್ ನಲ್ಲಿ ಸರಸ್ವತಿ ಗೋ ಮಂದಿರವನ್ನು ಲೋಕಾರ್ಪಣೆಗೊಳಿಸಲಾಯಿತು

ದೇಸಿ ಮಲೆನಾಡು ಗಿಡ್ಡ ತಳಿಯ ಹಸು ಕರುಗಳಿಗೆ ಗೋಪೂಜೆ ನೇರವೇರಿಸಿ,ಗೋಶಾಲೆಗೆ ಚಾಲನೆ ನೀಡಲಾಯಿತು. ಕಾಲೇಜು ಕ್ಯಾಂಪಸ್ ನಲ್ಲಿ ಗೋಶಾಲೆ ಆರಂಭಿಸಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಗೋ ಮಂದಿರವನ್ನು ಮಲೆನಾಡು ಗಿಡ್ಡ ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನಾ ಅಭಿಯಾನದ ಸಂಘಟಕರಾದ ಅಕ್ಷಯ ಆಳ್ವ ಅವರು ಲೋಕಾರ್ಪಣೆಗೊಳಿಸಿ ಮಾತಮಾಡಿ ದೇಸಿ ತಳಿ ಗೋವುಗಳ ಸಂರಕ್ಷಣೆ ಭಾರತೀಯರಾದ ನಮ್ಮ ಆದ್ಯ ಕರ್ತವ್ಯ ಎಂದರು. ಮುಖ್ಯ ಅತಿಥಿಗಳಾದ ವಿಶ್ರಾಂತ ಪಶು ವೈದ್ಯಾಧಿಕಾರಿ ಆನಂದ ಶೆಟ್ಟಿ ಅವರು ಹಾಗೂ ಮಂಗಳೂರು ಜನತಾ ಬಜಾರ್ ಅಧ್ಯಕ್ಷರಾದ ಕೆ ಪ್ರಸನ್ನ ಭಟ್ ಅವರು ಶುಭಾಶಂಸನೆ ಮಾಡಿದರು.

ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಮಾತನಾಡಿ ಕೃಷಿ ಕುಟುಂಬದಿಂದ ಬಂದ ನಾನು ಹೈನುಗಾರಿಕೆಯನ್ನು ಬಹಳವಾಗಿ ಇಷ್ಟ ಪಟ್ಟವನು. ಇದೀಗ ಮಲೆನಾಡು ಗಿಡ್ಡ ಹಸುಗಳನ್ನೇ ನಮ್ಮ ಕ್ಯಾಂಪಸ್ ನಲ್ಲಿ ಸಾಕಿ ಬೆಳೆಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಆನಂದ ಶೆಟ್ಟಿ ವಾತ್ಸಲ್ಯ, ಸುನೀಶ್ ಕುಮಾರ್ ಕಡಂಬು,ಎಕ್ಸೆಲ್ ಸಂಸ್ಥೆಯ ಸಹನಾ ಜೈನ್ ಸೇರಿದಂತೆ, ಉಪನ್ಯಾಸಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು. ಉಪನ್ಯಾಸಕಿ ಅನನ್ಯ ಜೈನ್ ನಿರೂಪಿಸಿದರು. ಅರಮಲೆಬೆಟ್ಟ ಕ್ಯಾಂಪಸ್ ನ ಪ್ರಾಚಾರ್ಯ ಡಾ. ಪ್ರಜ್ವಲ್ ಕಜೆ ವಂದಿಸಿದರು.

Spread the love
  • Related Posts

    ಚಿರಂಜೀವಿ ಯುವಕ ಮಂಡಲ(ರಿ), ಕಾನರ್ಪ ಇದರ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ಬೆಳ್ತಂಗಡಿ, ಜು.16: ಚಿರಂಜೀವಿ ಯುವಕ ಮಂಡಲ ಕಾನರ್ಪ–ಕಡಿರುದ್ಯಾವರ ಇದರ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸಭೆಯು ಯುವಕ ಮಂಡಲದ ವಠಾರದಲ್ಲಿ ನಡೆಯಿತು. ಸಭೆಯಲ್ಲಿ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಯ ಅಧ್ಯಕ್ಷರಾಗಿ ಲೋಕೇಶ್ ಪಣಿಕಲ್,…

    Spread the love

    ಬಂಟ್ವಾಳದಲ್ಲಿ ಬೆಚ್ಚಿಬೀಳಿಸಿದ ಭೀಕರ ಹತ್ಯೆ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲೇ ಯುವತಿ ಕೊಲೆ, ಆರೋಪಿ ಪರಾರಿ

    ಬಂಟ್ವಾಳ : ಬಂಟ್ವಾಳ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬರನ್ನು ಮಾರಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ಗುರುವಾರ ವರದಿಯಾಗಿದೆ. ಮೃತ ಯುವತಿಯನ್ನು ಕಕ್ಯಪದವು ನಿವಾಸಿ ಲಾವಣ್ಯ ಎಂದು ಗುರುತಿಸಲಾಗಿದೆ. ಅವರು ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.…

    Spread the love

    You Missed

    ಚಿರಂಜೀವಿ ಯುವಕ ಮಂಡಲ(ರಿ), ಕಾನರ್ಪ ಇದರ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • July 16, 2026
    • 6 views
    ಚಿರಂಜೀವಿ ಯುವಕ ಮಂಡಲ(ರಿ), ಕಾನರ್ಪ ಇದರ 35ನೇ ವರ್ಷದ  ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ಬಂಟ್ವಾಳದಲ್ಲಿ ಬೆಚ್ಚಿಬೀಳಿಸಿದ ಭೀಕರ ಹತ್ಯೆ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲೇ ಯುವತಿ ಕೊಲೆ, ಆರೋಪಿ ಪರಾರಿ

    • By admin
    • July 16, 2026
    • 9 views
    ಬಂಟ್ವಾಳದಲ್ಲಿ ಬೆಚ್ಚಿಬೀಳಿಸಿದ ಭೀಕರ ಹತ್ಯೆ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲೇ ಯುವತಿ ಕೊಲೆ, ಆರೋಪಿ ಪರಾರಿ

    “ರೀಚಾರ್ಜ್ ಇಲ್ಲದೆ ಆರಿದ ಹೆದ್ದಾರಿ ದಾರಿದೀಪಗಳು; ಪೋಸ್ಟ್‌ಪೇಯ್ಡ್ ಮೀಟರ್‌ಗೆ ಮನವಿ” ಹೆದ್ದಾರಿ ಬದಿ ದಾರಿದೀಪಕ್ಕೆ ಪ್ರೀ-ಪೇಯ್ಡ್ ರೀಚಾರ್ಜ್: ಕತ್ತಲಲ್ಲಿ ದಾರಿಹೋಕರ ಪರದಾಟ

    • By admin
    • July 15, 2026
    • 9 views
    “ರೀಚಾರ್ಜ್ ಇಲ್ಲದೆ ಆರಿದ ಹೆದ್ದಾರಿ ದಾರಿದೀಪಗಳು; ಪೋಸ್ಟ್‌ಪೇಯ್ಡ್ ಮೀಟರ್‌ಗೆ ಮನವಿ” ಹೆದ್ದಾರಿ ಬದಿ ದಾರಿದೀಪಕ್ಕೆ ಪ್ರೀ-ಪೇಯ್ಡ್ ರೀಚಾರ್ಜ್: ಕತ್ತಲಲ್ಲಿ ದಾರಿಹೋಕರ ಪರದಾಟ

    ಬಿ.ಟಿ. ರಂಜನ್ ವಾರ್ಷಿಕ ಪ್ರಶಸ್ತಿಗೆ ಅರವಿಂದ ಹೆಬ್ಬಾರ್ ಮುಂಡಾಜೆ ಆಯ್ಕೆ

    • By admin
    • July 15, 2026
    • 16 views
    ಬಿ.ಟಿ. ರಂಜನ್ ವಾರ್ಷಿಕ ಪ್ರಶಸ್ತಿಗೆ ಅರವಿಂದ ಹೆಬ್ಬಾರ್ ಮುಂಡಾಜೆ ಆಯ್ಕೆ

    ಮಾರುವೇಷ ಯಾಕೆ ಸ್ವಾಮಿ.. ಇದು ಚಿಲ್ಲರೆ ಕಾಲವಲ್ಲ, ಕ್ಯೂಆರ್ ಕೋಡ್ ಕಾಲ: ಸಚಿವ ಸುರೇಶ್‌ಗೆ ಶಾಸಕ ಸುರೇಶ್ ಕುಮಾರ್ ಪಾಠ

    • By admin
    • July 13, 2026
    • 10 views
    ಮಾರುವೇಷ ಯಾಕೆ ಸ್ವಾಮಿ.. ಇದು ಚಿಲ್ಲರೆ ಕಾಲವಲ್ಲ, ಕ್ಯೂಆರ್ ಕೋಡ್ ಕಾಲ: ಸಚಿವ ಸುರೇಶ್‌ಗೆ ಶಾಸಕ ಸುರೇಶ್ ಕುಮಾರ್ ಪಾಠ

    ನಾರಾವಿ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಹಾಗೂ ಹಳೆಕೋಟೆ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ತಲಾ ರೂ.2 ಕೋಟಿ; ಸರ್ಕಾರಕ್ಕೆ ಶಾಸಕ ಹರೀಶ್ ಪೂಂಜ ಕೃತಜ್ಞತೆ.

    • By admin
    • July 12, 2026
    • 16 views
    ನಾರಾವಿ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಹಾಗೂ ಹಳೆಕೋಟೆ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ತಲಾ ರೂ.2 ಕೋಟಿ; ಸರ್ಕಾರಕ್ಕೆ ಶಾಸಕ ಹರೀಶ್ ಪೂಂಜ ಕೃತಜ್ಞತೆ.