ತಮಿಳುನಾಡಿನ ಶಿವಕಾಶಿಯಲ್ಲಿ ಅಗ್ನಿ ಅವಘಡ 6 ಮಂದಿ ದುರ್ಮರಣ

ಚೆನ್ನೈ: ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 6 ಮಂದಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಶಿವಕಾಶಿಯಲ್ಲಿ ಇಂದು ಸಂಜೆ ನಡೆದಿದೆ. ಕಲೈಯರ್ಕುರಿಚಿ ಪಟಾಕಿ ಕಾರ್ಖಾನೆಯಲ್ಲಿ ಘಟನೆ ನಡೆದಿದ್ದು, 17ಕ್ಕೂ ಹೆಚ್ಚು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪಟಾಕಿ ತಯಾರಿಕೆಗಾಗಿ ಸಂಗ್ರಹಿಸಿದ್ದ 10ಕ್ಕೂ ಹೆಚ್ಚು ಶೆಡ್‌ಗಳು ಬೆಂಕಿಗೆ ಆಹುತಿಯಾಗಿದೆ. ಕಳೆದೊಂದು ತಿಂಗಳಲ್ಲಿ ಈ ಪ್ರದೇಶದಲ್ಲಿ ಸಂಭವಿಸುತ್ತಿರುವ ಎರಡನೇ ದುರ್ಘಟನೆ ಇದಾಗಿದೆ. ಫೆಬ್ರುವರಿ 12ರಂದು ಸತ್ತೂರು ಬಳಿ ಅಚ್ಚಂಕುಲಂ ಘಟಕದಲ್ಲಿ ನಡೆದ ಪಟಾಕಿ ಸ್ಫೋಟದಲ್ಲಿ 11ಕ್ಕೂ ಹೆಚ್ಚು ಜನ ಕಾರ್ಮಿಕರು ಮೃತಪಟ್ಟು ಸುಮಾರು 20ರಷ್ಟು ಮಂದಿ ಗಾಯಗೊಂಡಿದ್ದರು.

READ ALSO

ದೇಶದಲ್ಲಿ ಅತಿ ಹೆಚ್ಚು ಪಟಾಕಿಗಳನ್ನು ಶಿವಕಾಶಿಯಲ್ಲಿ ತಯಾರಿ ಮಾಡಲಾಗುತ್ತಿದೆ. ಆದರೆ ಪದೇ ಪದೇ ಅವಘಡ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.