ಉಜಿರೆ: ಉಜಿರೆಯ ಸಿದ್ದವನ ಸಮೀಪ ವಾಹನ ತಪಾಸಣೆ ನಡೆಸುತಿದ್ದ ವೇಳೆ ಕಾರಿಗೆ ದ್ವಿಚಕ್ರವಾಹನ ಡಿಕ್ಕಿಯಾದ ಘಟನೆ ವರದಿಯಾಗಿದೆ
ಪೊಲೀಸರು ತಪಾಸಣೆಗೆಂದು ವಾಹನ ನಿಲ್ಲಿಸುವ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಸ್ಕೂಟರ್ ಢಿಕ್ಕಿಯಾಗಿದೆ.
ಮಳೆಯಿಂದಾಗಿ ಸ್ಕೂಟರ್ ಸವಾರ ನಿಯಂತ್ರಣ ಕಳೆದುಕೊಂಡ ಕಾರಣ ಸ್ಕೂಟರ್ ಸ್ಕಿಡ್ ಆಗಿ ಎದುರಿನಿಂದ ಬರುತ್ತಿದ್ದ ಕಾರ್‌ಗೆ ಡಿಕ್ಕಿಯಾಗಿದೆ. ಇನ್ನು ಅವಘಡದಿಂದ ಸ್ಕೂಟರ್ ಜಖಂ ಆಗಿದ್ದು, ಸವಾರ ಅಪಾಯದಿಂದ ಪಾರಾಗಿದ್ದಾರೆ.