ರಾಗಿಮುದ್ದೆ, ಸಾಂಬಾರ್ ಸೇವನೆ ಮಾಡಿದ್ದ ಒಂದೇ ಕುಟುಂಬದ ಮೂವರ ಸಾವು! ಇಬ್ಬರ ಸ್ಥಿತಿ ಗಂಭೀರ!

ಚಿತ್ರದುರ್ಗ : ರಾತ್ರಿಯ ಊಟದಲ್ಲಿ ರಾಗಿಮುದ್ದೆ, ಸಾಂಬಾರ್‌ ಸೇವನೆ ಮಾಡಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಅಸ್ವಸ್ಥಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಇಸಾಮುದ್ರ ಗ್ರಾಮದಲ್ಲಿ ನಡೆದಿದೆ.

ಇಸಾಮುದ್ರ ಗ್ರಾಮದ ನಿವಾಸಿಗಳಾಗಿರುವ ತಿಪ್ಪಾನಾಯ್ಕ್ (46 ವರ್ಷ ), ಪತ್ನಿ ಸುಧಾಬಾಯಿ (43 ವರ್ಷ ) ಹಾಗೂ ಗುಂಡಿ ಬಾಯಿ (75ವರ್ಷ ) ಸಾವನ್ನಪ್ಪಿದ್ದು, ರಾಹುಲ್ (18 ವರ್ಷ ) ಹಾಗೂ ರಮ್ಯಾ (16 ವರ್ಷ) ಅಸ್ವಸ್ಥರಾಗಿದ್ದುಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

READ ALSO

ರಾತ್ರಿ ರಾಗಿ ಮುದ್ದೆ ಹಾಗೂ ಸಾಂಬಾರ್‌ ಸೇವನೆ ಮಾಡಿದ್ದರು. ನಂತರದಲ್ಲಿ ಎಲ್ಲರೂ ಅಸ್ವಸ್ಥಗೊಂಡಿ ದ್ದಾರೆ. ಕೂಡಲೇ ಎಲ್ಲರನ್ನೂ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿ ಯಾಗದೇ ಮೂವರು ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರೂ ಕೂಡ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ದಾವಣಗೆರೆಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ರಾಗಿಮುದ್ದೆ ಹಾಗೂ ಸಾಂಬಾರ್‌ ವಿಷಪೂರಿತವಾಗಿತ್ತು ಎಂದು ತಿಳಿದುಬಂದಿದೆ. ಆದರೆ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದೆಯಾ ಇಲ್ಲಾ, ಆಹಾರವೇ ವಿಷವಾಗಿತ್ತಾ ಅನ್ನೋದು ತನಿಖೆಯಿಂದ ತಿಳಿದು ಬರಬೇಕಾಗಿದೆ. ಈ ಕುರಿತು ಭರಮಸಾಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.