ಶಿಡ್ಲಘಟ್ಟ: ಕರೋನಾ ಎರಡನೇ ಅಲೆಯ ಸಂಕಷ್ಟ ಪರಿಸ್ಥಿತಿಯಲ್ಲಿ ಅರ್ಹರಿಗೆ ನೆರವು ನೀಡುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ತಿಳಿಸಿದರು.
ಸಾದಲಿ ಹೋಬಳಿಯ ಕುದಾಪನ ಕುಂಟೆ ಯಲ್ಲಿ ನಿರ್ಗತಿಕರಿಗೆ ಆಹಾರದ ಕಿಟ್ಟುಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ಕ ರೋನ ಎರಡನೇ ಅಲೆಯ ಕಾರಣದಿಂದ ಲಾಕ್ ಡೌನ್ ಜಾರಿ ಮಾಡಿರುವುದರಿಂದ ನಿರ್ಗತಿಕರಿಗೆ ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಉಂಟಾಗಿದೆ ಅವರ ಕಷ್ಟಕ್ಕೆ ಇಂತಹ ಸಮಯದಲ್ಲಿ ಅವರಿಗೆ ನೆರವಾಗ ಬೇಕಾಗುವುದು ಮನುಷ್ಯನ ನಿಜವಾದ ಧರ್ಮ ಎಂಬುದನ್ನು ತಿಳಿದ ಧರ್ಮಸ್ಥಳದ ಧರ್ಮಾಧಿಕಾರಿಗಳು ಇಂತಹ ಸಾವಿರಾರು ನಿರ್ಗತಿಕರ ಕುಟುಂಬಗಳಿಗೆ ಆಹಾರಧಾನ್ಯದ ಕಿಟ್ಟು ಒದಗಣೆ ಸಂಸ್ಥೆಯ ವತಿಯಿಂದ ಮಾಡಲಾಗುತ್ತಿದ್ದು ಅದರಂತೆ ಶಿಡ್ಲಘಟ್ಟ ತಾಲ್ಲೂಕಿನ ಆಯ್ದ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ಪೂಜ್ಯರು ಮಂಜೂರು ಮಾಡಿದ್ದು ಅದನ್ನು ಅವರ ಮನೆ ಮನೆಗೆ ತಲುಪಿಸುವ ಕೆಲಸವನ್ನು ತಾಲೂಕಿನ ನಮ್ಮ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಶಂಕ್ರಪ್ಪ . ರವಿಚಂದ್ರ. ಚೋಟು ಸಾಬ್. ಸಂಸ್ಥೆಯ ಮೇಲ್ವಿಚಾರಕ ದಯಾನಂದ್. ಸೇವಾ ಪ್ರತಿನಿಧಿ ಆದಿನಾರಾಯಣ ಶೆಟ್ಟಿ. ಮಂಜುನಾಥ್. ನಾಗರಾಜು ಶ್ರೀನಿವಾಸ್. ವಿನೋದ್ ಕುಮಾರ್ ಉಪಸ್ಥಿತರಿದ್ದರು