ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶಿಡ್ಲಘಟ್ಟ ಕೆಂಪನಹಳ್ಳಿ ಸಾಸಲಮ್ಮ ದೇವಸ್ಥಾನಕ್ಕೆ 2ಲಕ್ಷ ಆರ್ಥಿಕ ನೆರವು

ಶಿಡ್ಲಘಟ್ಟ: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುವ ಸಮಾಜಮುಖಿ ಕಾರ್ಯಕ್ರಮಗಳು ನೂರಾರು ಧರ್ಮಸ್ಥಳದ ಧರ್ಮಾಧಿಕಾರಿಗಳು ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ನೂರಾರು ಯೋಜನೆಗಳನ್ನು ಜನಸಾಮಾನ್ಯರಿಗೆ ನೀಡಿದ್ದು ಸಾವಿರಾರು ಮಂದಿ ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಎಂದು ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಪ್ರಶಾಂತ್ ರವರು ತಿಳಿಸಿದರು.

ಇವರು ಶಿಡ್ಲಘಟ್ಟ ತಾಲ್ಲೂಕಿನ ಕೆಂಪನಹಳ್ಳಿ ಸಾಸಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಮಂಜೂರು ಮಾಡಿದ 2 ಲಕ್ಷ ಮೊತ್ತದ ಡಿ.ಡಿ ವಿತರಣೆ ಮಾಡಿ ಮಾತನಾಡುತ್ತಾ ಮನೆಗೊಂದು ಶೌಚಾಲಯ ಊರಿಗೊಂದು ದೇವಾಲಯ ಗ್ರಾಮಕ್ಕೊಂದು ವಿದ್ಯಾಲಯ ಈ 3 ಆಲಯಗಳು ಸುಸ್ಥಿತಿಯಲ್ಲಿದ್ದಲ್ಲಿ ಗ್ರಾಮ ಸುಭೀಕ್ಷೆಯಿಂದ ಕೂಡಿರುತ್ತದೆ. ಇಂತಹ ಧಾರ್ಮಿಕ ಕ್ಷೇತ್ರಗಳು ಶಿಥಿಲಗೊಳ್ಳಬಾರದು ಅಭಿವೃದ್ಧಿಯನ್ನು ಕಾಣಬೇಕು ಎನ್ನುವ ನಿಟ್ಟಿನಲ್ಲಿ ಪೂಜ್ಯರು ರಾಜ್ಯದಾದ್ಯಂತ ದೇವಸ್ಥಾನಗಳ ಅಭಿವೃದ್ಧಿಗೆ ಲಕ್ಷಾಂತರ ಸಹಾಯಧನವನ್ನು ನೀಡುತ್ತಿದ್ದು ಇದರ ಸದ್ಬಳಕೆಯನ್ನು ಮಾಡಿ ಎಂದು ಹೇಳಿದರು.

READ ALSO

ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಒಕ್ಕೂಟದ ಅಧ್ಯಕ್ಷರಾದ ಮಾಧವ ಆಚಾರ್ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಚಿಕ್ಕಸಾದಪ್ಪ ನಾರಾಯಣ ಸ್ವಾಮಿ ದ್ಯಾವಪ್ಪ ಸಮಿತಿಯ ಎಲ್ಲಾ ಸದಸ್ಯರು ಮೇಲ್ವಿಚಾರಕರಾದ ಸುಮಂಗಲಾ ಸೇವಾಪ್ರತಿನಿಧಿ ಮುನಿಲಕ್ಷ್ಮಿ ಸಂಘದ ಸದಸ್ಯರು ಉಪಸ್ಥಿತರಿದ್ದರು.