ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ’ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ’

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್‌ನ ನಿರ್ದೇಶನದಂತೆ ‘ಬ್ಯಾಂಕ್‌ಗಳ ವ್ಯವಹಾರ ಪ್ರತಿನಿಧಿ’ (Business Correspondence) ಆಗಿ ಸೇವೆಗೈಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ಗೆ ದೇಶದ ಬ್ಯಾಂಕಿಂಗ್ ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ‘ಭಾರತೀಯ ಆತೀ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಘಟನೆ’ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ ‘ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ – 2024’ (ಅತ್ಯುತ್ತಮ ಸಂಸ್ಥೆ ಹಾಗೂ ವಿಶೇಷ ಅಂಗೀಕಾರ ಪ್ರಶಸ್ತಿ) ಲಭಿಸಿದೆ. ಇತ್ತೀಚೆಗೆ ನವದೆಹಲಿಯಲ್ಲಿ ಶ್ರೀ ಪಂಕಜ್ ಚೌಧರಿ ಕೇಂದ್ರ ಹಣಕಾಸು ಸಚಿವರು, ರಾಜ್ಯ ಖಾತೆ ಇವರು ಪ್ರಶಸ್ತಿ ಪ್ರಧಾನ ಮಾಡಿದರು. ಯೋಜನೆಯ ಪರವಾಗಿ ಬೆಂಗಳೂರು ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಎಂ. ಮತ್ತು ಬಿ. ಸಿ. ವಿಭಾಗದ ನಿರ್ದೇಶಕ ಪ್ರವೀಣ್ ಎಂ.ಸಿ.ಯವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ ಹಾಗೂ ಖಾಸಗಿ ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹೀಗೆ ದೇಶದ ಇಪ್ಪತ್ತು ಪ್ರತಿಷ್ಠಿತ ಸಂಸ್ಥೆಗಳು ಈ ಪ್ರಶಸ್ತಿಗೆ ಭಾಜನವಾಗಿವೆ.

ದೇಶದ ಎಲ್ಲಾ ಗ್ರಾಮ ಗ್ರಾಮಗಳಲ್ಲಿ ಬ್ಯಾಂಕ್‌ಗಳು ತಮ್ಮ ಶಾಖೆಗಳನ್ನು ತೆರೆದು ಬ್ಯಾಂಕಿಂಗ್ ಸೇವೆ ನೀಡುವುದು ಅಸಾಧ್ಯವೆಂಬುದನ್ನು ಪರಿಗಣಿಸಿದ ವಿತ್ತ ಸಚಿವಾಲಯ ಹಾಗೂ ದೇಶದ ಆರ್ಥಿಕ ನಿಯಂತ್ರಕ ಸಂಸ್ಥೆಗಳು ಆರ್ಥಿಕ ಸೇರ್ಪಡೆ (Financial Inclusion) ಕಾರ್ಯಕ್ರಮದಡಿ ವ್ಯಕ್ತಿಗತ ಹಾಗೂ ಆಯ್ದ ಸಂಸ್ಥೆಗಳನ್ನು ಬಿ.ಸಿ. (Business Correspondence – ಬ್ಯಾಂಕ್‌ಗಳ ವ್ಯವಹಾರ ಪ್ರತಿನಿಧಿ)ಯಾಗಿ ನಿಯೋಜಿಸಿಕೊಂಡಿವೆ. ಇದರನ್ವಯ ‘ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್’ ಅನ್ನು ಬ್ಯಾಂಕ್‌ಗಳು ‘ಎಸ್.ಹೆಚ್.ಜಿ. ಬ್ಯಾಂಕ್ ಕ್ರೆಡಿಟ್ ಲಿಂಕೆಜ್ ಪ್ರೋಗ್ರಾಂ’ (ಸ್ವ ಸಹಾಯ ಸಂಘಗಳ ಬ್ಯಾಂಕ್ ಸಾಲ ಸೌಲಭ್ಯ ಒದಗಣೆ) ಸೇವೆಗಳನ್ನು ಒದಗಿಸಲು ತನ್ನ ‘ಬಿ.ಸಿ.’ (ಬ್ಯುಸಿನೆಸ್ ಕರೆಸ್ಪಾಂಡೆನ್ಸ್) ಬ್ಯಾಂಕ್‌ ವ್ಯವಹಾರ ಪ್ರತಿನಿಧಿಯಾಗಿ ನಿಯೋಜಿಸಿಕೊಂಡಿವೆ. ತನ್ಮೂಲಕ ಗ್ರಾಮ ಗ್ರಾಮಗಳಲ್ಲಿ ಸ್ವಸಹಾಯ ಸಂಘಗಳಿಗೆ ಬ್ಯಾಂಕ್‌ಗಳಿಂದ ನೇರವಾಗಿ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುತ್ತಿವೆ. ಈ ಮೂಲಕ ಬ್ಯಾಂಕ್‌ ಸಾಲ ಸೌಲಭ್ಯಗಳನ್ನು ಗ್ರಾಮ ಗ್ರಾಮಗಳಿಗೆ ತಲುಪಿಸುವ ಕೆಲಸವನ್ನು ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ.

ಗ್ರಾಮಾಭಿವೃದ್ಧಿ ಯೋಜನೆಯು ಸ್ವಸಹಾಯ ಸಂಘಗಳಿಗೆ ಬ್ಯಾಂಕ್‌ಗಳಿಂದ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಇಂದು ಲಕ್ಷಾಂತರ ಕೃಷಿ, ಸ್ವ ಉದ್ಯೋಗ ಚಟುವಟಿಕೆಗಳನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಪ್ರದೇಶದ ರೈತರು, ಬಡವರು, ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗಿದೆ. ಇದರ ಜೊತೆಗೆ ಗ್ರಾಮೀಣ ಪ್ರದೇಶದ ಯುವಕ – ಯುವತಿಯರಿಗೆ ಬ್ಯಾಂಕ್‌ನಿಂದ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ಶೇ. 14ರ (ಬ್ಯಾಂಕ್ ಬಡ್ಡಿದರ ಹಾಗೂ ಬ್ಯಾಂಕ್ ನೀಡುವ ಬಿ.ಸಿ. ಸೇವಾಶುಲ್ಕ ಸೇರಿ) ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು, ತರಬೇತಿಗಳನ್ನು ಒದಗಿಸುವ ಮೂಲಕ ಲಕ್ಷಾಂತರ ಮಂದಿಗೆ ಗುಡಿ ಕೈಗಾರಿಕೆಗಳು, ಕಿರು ಉದ್ಯಮ, ವ್ಯಾಪಾರ, ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ನೆರವಾಗಿದೆ.

ಗ್ರಾಮಾಭಿವೃದ್ಧಿ ಯೋಜನೆಯು ದೇಶದ ಅತ್ಯಂತ ಪ್ರಮುಖ ಬ್ಯಾಂಕ್ ಆದ ‘ಸಿಡ್ಬಿ’ (SIDBI) ಬ್ಯಾಂಕ್‌ನ ‘ಪ್ರಯಾಸ್’ ಕಾರ್ಯಕ್ರಮವನ್ನು ಅನುಷ್ಠಾನ ಮಾಡುತ್ತಿದ್ದು ಇದರಡಿ ಅತಿ ಕಡಿಮೆ ಬಡ್ಡಿದರದಲ್ಲಿ ಕಿರು ಉದ್ಯಮವನ್ನು ಆರಂಭಿಸಲು ಗರಿಷ್ಠ ಮೊತ್ತದ ಸಾಲವನ್ನು ಸಿಡ್ಡಿಯಿಂದ ನೇರವಾಗಿ ಸ್ವ ಉದ್ಯೋಗ ಘಟಕ ಪ್ರಾರಂಭಿಸುವ ಸದಸ್ಯರಿಗೆ ದೊರಕಿಸಿಕೊಡುತ್ತಿದೆ. ಸಿಡ್ಡಿ ಪ್ರಯಾಸ್ ಕಾರ್ಯಕ್ರಮದ ಮೂಲಕ 56,057 ಸದಸ್ಯರಿಗೆ ರೂ. 1,971 ಕೋಟಿ ಮೊತ್ತದ ಸಾಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಆ ಮೂಲಕ ಸಾವಿರಾರು ಮಂದಿ ಗ್ರಾಮೀಣ ಪ್ರದೇಶದ ಯುವಕ – ಯುವತಿಯರು ವ್ಯಾಪಾರ, ಕಿರು ಉದ್ಯಮಗಳನ್ನು ಆರಂಭಿಸುವ ಮೂಲಕ ಸ್ವಾವಲಂಬಿ ಬದುಕನ್ನು ಸಾಗಿಸುತ್ತಿದ್ದಾರೆ.

Spread the love
  • Related Posts

    ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪೂರಕವಾಗಿ ಅಟ್ಟಾರಿ ಗಡಿ ಮುಚ್ಚುವಿಕೆ, ಸಿಂಧೂ ಜಲ ಒಪ್ಪಂದಕ್ಕೆ ತಡೆ ಸೇರಿದಂತೆ ಕೇಂದ್ರ ಸರ್ಕಾರದಿಂದ 5 ಪ್ರಮುಖ ನಿರ್ಧಾರ

    ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಭದ್ರತಾ ಸಂಪುಟ ಸಮಿತಿಯ (ಸಿಸಿಎಸ್) ಉನ್ನತ ಮಟ್ಟದ ಸಭೆ ನಡೆಯಿತು. ಅಟ್ಟಾರಿ ಗಡಿ ಮುಚ್ಚುವಿಕೆ, ಸಿಂಧೂ ಜಲ ಒಪ್ಪಂದಕ್ಕೆ ತಡೆ ಸೇರಿದಂತೆ 5 ಪ್ರಮುಖ ನಿರ್ಧಾರದೊಂದಿಗೆ ಪಹಲ್ಗಾಮ್…

    Spread the love

    ಬೆಳ್ತಂಗಡಿ : ಉಜಿರೆಯಲ್ಲಿ ರಾಮೋತ್ಸವ ಕಾರ್ಯಕ್ರಮ ಹಿನ್ನಲೆ ಕಾರ್ಯಕ್ರಮಕ್ಕೆ ಬರುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ತಡೆದ ಪೊಲೀಸರು!!!

    ಬೆಳ್ತಂಗಡಿ : ಉಜಿರೆ ಕೃಷ್ಣಾನುಗ್ರಹದ ಸಭಾಭವನದಲ್ಲಿ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡ ಏ.19 ರಂದು ಸಂಜೆ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಚಕ್ರವರ್ತಿ ಸೂಲಿಬೆಲೆ ಆಗಮಿತಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮ ವೀಕ್ಷಿಸಲು ಹಿಂದೂ ಗೋ ರಕ್ಷಕ ಪುನೀತ್ ಕೆರೆಹಳ್ಳಿ…

    Spread the love

    You Missed

    ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪೂರಕವಾಗಿ ಅಟ್ಟಾರಿ ಗಡಿ ಮುಚ್ಚುವಿಕೆ, ಸಿಂಧೂ ಜಲ ಒಪ್ಪಂದಕ್ಕೆ ತಡೆ ಸೇರಿದಂತೆ ಕೇಂದ್ರ ಸರ್ಕಾರದಿಂದ 5 ಪ್ರಮುಖ ನಿರ್ಧಾರ

    • By admin
    • April 23, 2025
    • 83 views
    ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪೂರಕವಾಗಿ ಅಟ್ಟಾರಿ ಗಡಿ ಮುಚ್ಚುವಿಕೆ, ಸಿಂಧೂ ಜಲ ಒಪ್ಪಂದಕ್ಕೆ ತಡೆ ಸೇರಿದಂತೆ ಕೇಂದ್ರ ಸರ್ಕಾರದಿಂದ 5 ಪ್ರಮುಖ ನಿರ್ಧಾರ

    ಟೀಕೆಗಳು ಸಾಯುತ್ತದೆ ನಾವು ಮಾಡೋ ಕೆಲಸಗಳು ಶಾಶ್ವತವಾಗಿ ಉಳಿಯುತ್ತದೆ: ಡಿ.ಕೆ.ಶಿ

    • By admin
    • April 20, 2025
    • 46 views
    ಟೀಕೆಗಳು ಸಾಯುತ್ತದೆ ನಾವು ಮಾಡೋ ಕೆಲಸಗಳು ಶಾಶ್ವತವಾಗಿ ಉಳಿಯುತ್ತದೆ: ಡಿ.ಕೆ.ಶಿ

    ಬೆಳ್ತಂಗಡಿ : ಉಜಿರೆಯಲ್ಲಿ ರಾಮೋತ್ಸವ ಕಾರ್ಯಕ್ರಮ ಹಿನ್ನಲೆ ಕಾರ್ಯಕ್ರಮಕ್ಕೆ ಬರುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ತಡೆದ ಪೊಲೀಸರು!!!

    • By admin
    • April 19, 2025
    • 175 views
    ಬೆಳ್ತಂಗಡಿ : ಉಜಿರೆಯಲ್ಲಿ ರಾಮೋತ್ಸವ ಕಾರ್ಯಕ್ರಮ ಹಿನ್ನಲೆ ಕಾರ್ಯಕ್ರಮಕ್ಕೆ ಬರುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ತಡೆದ ಪೊಲೀಸರು!!!

    ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಕಾಮಗಾರಿ ನಡೆಯುತ್ತಿರುವ ಚರಂಡಿಗೆ ಬಿದ್ದ ಆಟೋ, ಚಾಲಕ ಪವಾಡ ಸದೃಶ ಪಾರು

    • By admin
    • April 18, 2025
    • 184 views
    ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಕಾಮಗಾರಿ ನಡೆಯುತ್ತಿರುವ ಚರಂಡಿಗೆ ಬಿದ್ದ ಆಟೋ, ಚಾಲಕ ಪವಾಡ ಸದೃಶ ಪಾರು

    ಮಂಗಳೂರಿನ ಹಳೇ ಬಂದರಿನಿಂದ ಲಕ್ಷದೀಪಕ್ಕೆ ಹೈ ಸ್ಪೀಡ್ ಫೇರೀ ಪ್ರಾಯೋಗಿಕ ಸಂಚಾರ ಪುನರಾರಂಭ

    • By admin
    • April 9, 2025
    • 88 views
    ಮಂಗಳೂರಿನ ಹಳೇ ಬಂದರಿನಿಂದ ಲಕ್ಷದೀಪಕ್ಕೆ ಹೈ ಸ್ಪೀಡ್ ಫೇರೀ ಪ್ರಾಯೋಗಿಕ ಸಂಚಾರ ಪುನರಾರಂಭ

    ಪಿಯುಸಿ ಫಲಿತಾಂಶ ಪ್ರಕಟ ಉಡುಪಿಗೆ ಮೊದಲ ಸ್ಥಾನ

    • By admin
    • April 8, 2025
    • 107 views
    ಪಿಯುಸಿ ಫಲಿತಾಂಶ ಪ್ರಕಟ ಉಡುಪಿಗೆ ಮೊದಲ ಸ್ಥಾನ