ಶಿಡ್ಲಘಟ್ಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಶಿಡ್ಲಘಟ್ಟ ತಾಲೂಕಿನ ದೊಡ್ಡತೇಕ ಹಳ್ಳಿಯ ಮುನಿಯಪ್ಪರಿಗೆ 10ಸಾವಿರ ರುಪಾಯಿಯನ್ನು ಧನಸಹಾಯ ಮಾಡಿ ಮಾನವೀಯತೆ ಮೆರೇದಿದ್ದಾರೆ.
ಸದಾ ಬೇರೆ ಬೇರೆ ಕಾರ್ಯಚಟುವಟಿಕೆಗಳ ಜೊತೆ ಕ್ರಿಯಾಶೀಲವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯು ಸಂಕಷ್ಟದಲ್ಲಿರುವ ಬಡವರ ಕಣ್ಣೀರೋರೆಸುವ ಮಹಾತ್ಕಾರ್ಯಕ್ಕೆ ಮುಂದಾಗಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯ ಸವಲತ್ತುಗಳನ್ನು ನೀಡಿ ಬಡವ ಬಲ್ಲಿದರ ಕುಂದು ಕೊರತೆಯನ್ನು ನೀಗಿಸುವ ಸಮಾಜೋನ್ಮುಖ ಸೇವೆಯನ್ನು ರಾಜ್ಯಾದ್ಯಂತ ನೀಡುತ್ತಿದ್ದು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಮುನಿಯಪ್ಪರಿಗೆ ಶ್ರೀ ಕ್ಷೇತ್ರದಿಂದ ಮಂಜೂರಾದ ಸಹಾಯಧನವನ್ನು ಶಿಡ್ಲಘಟ್ಟ ತಾಲ್ಲೂಕಿನ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ವಿತರಣಿ ಮಾಡಿದರು.
ಈ ಸಂಧರ್ಭದಲ್ಲಿ ಮೇಲ್ವಿಚಾರಕಿ ಆಶಾ ಒಕ್ಕೂಟದ ಅಧ್ಯಕ್ಷರಾದ ಅಶ್ವತ್ಥಮ್ಮ ಅಂಗನವಾಡಿ ಮೇಲ್ವಿಚಾರಕಿ ಮಧುರಮ್ಮ, ಸೇವಾಪ್ರತಿನಿಧಿ ಶಶಿಕಲಾ ಡಿ. ಮತ್ತು ಶಶಿಕಲಾ ಕೆ. ಎಂ. ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.