
ನೋಯ್ಡಾ: ವಿಶ್ವದ ಅಗ್ಗದ ಸ್ಮಾರ್ಟ್‌ಫೋನ್ ‘ಫ್ರೀಡಂ 251’ ಅನ್ನು ನೀಡಿದ ರಿಂಗಿಂಗ್ ಬೆಲ್ಸ್‌ನ ಸಂಸ್ಥಾಪಕ ಮೋಹಿತ್ ಗೋಯೆಲ್’ನನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.
ಒಣ ಹಣ್ಣುಗಳ ವ್ಯಾಪಾರಿಗಳನ್ನು 200 ಕೋಟಿ ರೂ.ಗೆ ವಂಚಿಸಿದ ಆರೋಪದ ಮೇಲೆ ಬಂಧಿಸಿದ್ದಾರೆ. ದುಬೈ ಡ್ರೈ ಫ್ರೂಟ್ಸ್ ಮತ್ತು ಮಸಾಲೆ ಹಬ್ ಎಂಬ ಕಂಪನಿಯಡಿಯಲ್ಲಿ ಒಣ ಹಣ್ಣು ವ್ಯಾಪಾರ ನಡೆಸುತ್ತಿದ್ದನು. ಆದರೆ ಅದರಲ್ಲಿ ವಂಚನೆ ನಡೆಸಿದ್ದಾನೆ ಎಂದು ವ್ಯಾಪಾರಿಗಳಿಂದ ಕಂಪನಿಯ ವಿರುದ್ಧ 40 ದೂರುಗಳನ್ನು ಪೊಲೀಸರು ಸ್ವೀಕರಿಸಿದ್ದರು. ಸದ್ಯ ಪೊಲೀಸರು ಮೋಹಿತ್ ಮತ್ತು ಓಂಪ್ರಕಾಶ್ ಜಾಂಗಿದ್ ಎನ್ನುವ ಸಹಚರನನ್ನು ಬಂಧಿಸಿದ್ದಾರೆ. ಶೇ.40ರಷ್ಟು ಮುಂಗಡ ಹಣ ಪಡೆದು ವಂಚಿಸಿದ್ದಾನೆ ಎನ್ನಲಾಗಿದೆ.