ಸ್ಪಂದನಾ ಸೇವಾ ಸಂಘ, ಬೆಳ್ತಂಗಡಿ ಇದರ ವತಿಯಿಂದ ಬಾಲಕನ ಚಿಕಿತ್ಸೆಗಾಗಿ ತುರ್ತು ಆರ್ಥಿಕ ನೆರವು

ಬೆಳ್ತಂಗಡಿ: ಸ್ಪಂದನಾ ಸೇವಾ ಸಂಘ,ಬೆಳ್ತಂಗಡಿ ಇದರ ವತಿಯಿಂದ ಬಾಲಕನ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಲಾಯಿತು.

ತಾಲೂಕಿನ ಮಲವಂತಿಗೆ ಗ್ರಾಮದ ಮಕ್ಕಿ ನಿವಾಸಿ ಶ್ರೀಯುತ ಶೀನಪ್ಪ ಗೌಡ ಪುತ್ರ ಮಾಸ್ಟರ್ ಸಂದೀಪ್ ರವರು ಹುಲ್ಲು ಕಟಾವು ಮಾಡುತ್ತಿದ್ದ ಸಂಧರ್ಭದಲ್ಲಿ ಆಕಸ್ಮಿಕವಾಗಿ ಯಂತ್ರಕ್ಕೆ ಕೈ ಸಿಲುಕಿ ತೀವ್ರ ಗಾಯ ಗೊಂಡಿತ್ತು ಇದನ್ನರಿತ ಸ್ಪಂದನಾ ಸೇವಾ ಯೋಜನೆಯು ಇವರ ಚಿಕಿತ್ಸಾ ವೆಚ್ಚಕ್ಕಾಗಿ ₹15,000/- ಧನಸಹಾಯವನ್ನು ಮಲವಂತಿಗೆ ಗ್ರಾಮ ಸಮಿತಿಯ ಅಧ್ಯಕ್ಷರಾದ ಆನಂದ ಗೌಡ ಮೈರ್ನೋಡಿ ಇವರ ಮೂಲಕ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.

READ ALSO

ಈ ಸಂದರ್ಭದಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಗೌಡ, ನಾವೂರು ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀಯುತ ದೇಜಪ್ಪ ಗೌಡ, ಸ್ಪಂದನಾ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ನಾವೂರು ಗ್ರಾಮದ ಸ್ವಜಾತಿ ಬಾಂಧವರು ಉಪಸ್ಥಿತರಿದ್ದರು.