ರಾಜ್ಯದಲ್ಲಿ 3ನೇ ದಿನವೂ 5ಸಾವಿರದ ಗಡಿದಾಟಿದ ಸೋಂಕಿತರ ಸಂಖ್ಯೆ! ಲಕ್ಷದ ಸನಿಹದಲ್ಲಿದೆ ಸೋಂಕಿತರ ಸಂಖ್ಯೆ!

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಸಮಸ್ಯೆ ಉಲ್ಬಣಿಸುತಿದ್ದು ಇಂದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇದಿನೇ 5ಸಾವಿರದ ಗಡಿ ಮೀರಿ ಏರಿಕೆಯನ್ನು ಕಂಡಿದೆ.

ರಾಜ್ಯದಲ್ಲಿಂದು5072 ಸೋಂಕಿತರು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 90942 ಕ್ಕೆ ಏರಿಕೆಯಾಗಿದೆ.

READ ALSO

ಮಹಾಮಾರಿಯ ಆಟಕ್ಕೆ 72 ಮಂದಿ ಬಲಿಯಾಗಿದ್ದು ರಾಜ್ಯದಲ್ಲಿ ಸಾವಿನ ಸಂಖ್ಯೆ 1796 ಕ್ಕೆ ಏರಿಕೆಯಾಗಿದೆ.

2403 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಇಂದು ಬಿಡುಗಡೆ ಹೊಂದಿದ್ದಾರೆ.

ರಾಜ್ಯರಾಜಧಾನಿಯಲ್ಲಿ2036 ಇಂದು ಮಂದಿಗೆ ಸೋಂಕು ದೃಢಪಟ್ಟಿದ್ದು 30ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ.

ಬೆಂಗಳೂರು, ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ 30 ಜಿಲ್ಲೆಯಲ್ಲೂ ತನ್ನ ಆಟವನ್ನು ಮುಂದುವರಿಸಿದೆ