ಬೆಂಗಳೂರು: ಕೊರೊನಾದಿಂದ ತಂದೆ-ತಾಯಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪ್ರತಿ ತಿಂಗಳು 3500 ರೂಪಾಯಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಮಕ್ಕಳ ಪಾಲನೆ, ಪೋಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಯೋಜನೆ ಮಾಹಿತಿ:
ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ 3500 ರೂ. ಸಹಾಯಧನ ನೀಡಲಾಗುವುದು
ಪೋಷಕರಿಲ್ಲದ ಮಕ್ಕಳಿಗೆ ನೋಂದಾಯಿತ ಪಾಲನ ಸಮಿತಿ ಆಶ್ರಯಿಸಲು ಅವಕಾಶ ನೀಡಲಾಗುವುದು.
ಗುಣಮಟ್ಟದ ಶಿಕ್ಷಣಕ್ಕೆ ವಸತಿ ಶಾಲೆಗಳಿಗೆ ಸೇರ್ಪಡೆಗೊಳಿಸಿ ಉತ್ತಮ ಶಿಕ್ಷಣ ನೀಡುವ ಬಗ್ಗೆ ತಿಳಿಸಿದ್ದರು.
10 ನೇ ತರಗತಿ ಪೂರೈಸಿದವರಿಗೆ ಲ್ಯಾಪ್ ಟಾಪ್, ಟ್ಯಾಬ್ ಒದಗಿಸುವ ಭರವಸೆ ನೀಡಿದರು.
21 ವರ್ಷವಾದ ಹೆಣ್ಣುಮಕ್ಕಳಿಗೆ 1 ಲಕ್ಷ ರೂ. ಸಹಾಯಧನ -ಉನ್ನತ ಶಿಕ್ಷಣ, ಮದುವೆಗೆ ನೆರವು ನೀಡಲಾಗುವುದು.
ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡವರ ಮಕ್ಕಳಿಗೆ ಹಿತೈಷಿ ನೇಮಿಸಿ ಸಬಲೀಕರಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಸುದ್ದಿ ಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ತಿಳಿಸಿದರು.