‘ವಾಟ್ಸಾಪ್ ರಾಮಾಯಣ’ ಎಂಬ ವಿನೂತನ ಪ್ರಯೋಗ ಪೌರಾಣಿಕ ಸನ್ನಿವೇಶ ಕಥೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಅರಿವು ಮೂಡಿಸುವ ಪ್ರಯತ್ನದಲ್ಲಿ ಪುತ್ತೂರಿನ ಯುವಕ

"ವಾಟ್ಸಾಪ್ ರಾಮಾಯಣ"

ನಾವೆಲ್ಲರೂ ನಮ್ಮ ವಾಟ್ಸಾಪ್ ಗಳಲ್ಲಿ ಕಲೆ ಸಾಹಿತ್ಯ, ಹರಟೆ, ಮನರಂಜನೆ ಹೀಗೆ ಹಲವು ಬಗೆಯ ವೀಡಿಯೊಗಳನ್ನು ನೋಡುತ್ತೇವೆ.

ಹೀಗೆ ನೋಡಿ ಸಂತೋಷಗೊಳ್ಳುವ ಮನಸ್ಸು ಕೆಲವೇ ನಿಮಿಷಗಳಲ್ಲಿ ನಿರಾಸಕ್ತಿ ಹೊಂದುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ.
ಇದಕ್ಕೆ ಕಾರಣ ನಮ್ಮ ಮನಸ್ಸಿನಲ್ಲಿ ಏಕಾಗ್ರತೆ ಇಲ್ಲದಿರುವುದು. ಇದರಿಂದ ನೆನಪಿನ ಶಕ್ತಿಯೂ ಕುಂದುವುದು. ಹಾಗಾಗಿ ಕೆಲವೇ ನಿಮಿಷಗಳಲ್ಲಿ ಅಥವಾ ಸೆಕೆಂಡುಗಳಲ್ಲಿ ತಿಳಿಯಬಯಸುವ ವಿಡಿಯೋಗಳು ಅಥವಾ ಮಾಹಿತಿಗಳು ದೊರಕಿದರೆ ಅದೇ ಖುಷಿ.
ಈ ನಿಟ್ಟಿನಲ್ಲಿ ಪ್ರತಿದಿನವೂ ಅದೇ ಕೆಲವು ಸೆಕೆಂಡುಗಳಲ್ಲಿ ರಾಮಾಯಣದ ಘಟನೆಗಳನ್ನು ನೆನಪಿಸಿಕೊಳ್ಳುವ ಚಿಕ್ಕ ಪ್ರಯತ್ನ ಮಾಡುವುದು ಒಳಿತು.

ಹಾಗಾಗಿ ವಾಟ್ಸಾಪ್ ರಾಮಾಯಣ ಎಂಬ ವಿನೂತನ ಪ್ರಯೋಗದೊಂದಿಗೆ ಮತ್ತೆ ಪುನಃ ನಮ್ಮ ಪೌರಾಣಿಕ ಸನ್ನಿವೇಶ / ಕಥೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ನಾಡಿನ ಜನತೆಗೆ ತಲುಪಿಸುವ ಪ್ರಯತ್ನದಲ್ಲಿ ಶ್ರೀಯುತ ದುರ್ಗಾಪರಮೇಶ್ವರ ಭಟ್ ಪುತ್ತೂರು, ಇವರು ತೊಡಗಿದ್ದಾರೆ.
ಜಾಲತಾಣದಲ್ಲಿ ರಾಮಾಯಣದ ಕುರಿತಾಗಿ ದೊರಕುವ ಸಾಂದರ್ಭಿಕ ಚಿತ್ರಗಳಿಗೆ ತಮ್ಮದೇ ಧ್ವನಿಯಲ್ಲಿ ಕಥೆ ಹೇಳುತ್ತಿದ್ದಾರೆ.

ಲೇಖಕನಾಗಿಯೂ,ಭಾಷಣಕಾರರಾಗಿಯೂ ಹಾಗೆಯೇ ವೃತ್ತಿಯಲ್ಲಿ ಶಿಕ್ಷಕರಾಗಿ ಇವರು ಬೆಂಗಳೂರಿನ ಶುಭಂ ಕರೋತಿ ಮೈತ್ರೇಯೀ ಗುರುಕುಲದಲ್ಲಿ ಸೇವೆ ಸಲ್ಲಿಸುತ್ತಿದ್ದು, ಶಾಲೆಗಳು ತೆರೆಯದೇ ಮನೆಯಲ್ಲಿ ಬೇಸತ್ತು ಕುಳಿತಿರುವ ಮಕ್ಕಳ್ನನ್ನು ಉದ್ದೇಶಿಸಿ ಈ ವಿನೂತನ ಪ್ರಯೋಗವನ್ನು ನಡೆಸಲು ಮುಂದಾಗಿದ್ದಾರೆ.

ಪ್ರತಿದಿನವೂ 30 ಸೆಕೆಂಡಿನ ವಾಟ್ಸಾಪ್ ರಾಮಾಯಣವನ್ನು ಪಡೆಯಲು ತಾವು ಈ ಕೆಳಗೆ ನೀಡಿರುವ ನಂಬರನ್ನು ಸೇವ್ ಮಾಡಿಕೊಂಡು ವಾಟ್ಸಾಪ್ ಮಾಡಬಹುದಾಗಿದೆ
ತದನಂತರ ಪ್ರತಿದಿನವೂ ಕೆಲವೇ ಸೆಕೆಂಡುಗಳಲ್ಲಿ ರಾಮಾಯಣದ ಘಟನೆಗಳನ್ನು ತಿಳಿದುಕೊಳ್ಳಬಹುದು.
ವಾಟ್ಸಾಪ್ ಮೊ. ಸಂಖ್ಯೆ 9663826972.
ನಾಡಿನ ಜನತೆಯು ತಮ್ಮ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರ ಮೂಲಕ ಪ್ರೋತ್ಸಾಹ ಮಾಡುವಂತೆ ವಿನಂತಿಸಿಕೊಂಡಿರುತ್ತಾರೆ.

Spread the love
  • Related Posts

    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    ಉಜಿರೆ: ಬೆಳ್ತಂಗಡಿ ತಾಲೂಕಿನ ಉಜಿರೆಯ ಬೆನಕ ಹೆಲ್ತ್ ಸೆಂಟರ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ ಯುವತಿಯರಿಗೆ ಉಚಿತವಾಗಿ ತರಬೇತಿಯೊಂದಿಗೆ ಉದ್ಯೋಗಾವಕಾಶ ಪಡೆಯುವ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ. NABH ಪುರಸ್ಕೃತ ಬೆನಕ ಹೆಲ್ತ್ ಸೆಂಟರ್ ನಲ್ಲಿ 2ವರ್ಷದ ANM ತರಬೇತಿಯನ್ನು…

    Spread the love

    ವಾಹನ ಸವಾರರೇ ಗಮನಿಸಿ HSRP ನಂಬರ್ ಪ್ಲೇಟ್ ಆಳವಡಿಸದೇ ಇದ್ದಲ್ಲಿ ಸೆ.16ರಿಂದ ದಂಡ ಫಿಕ್ಸ್

    Bangalore: ರಾಜ್ಯದಲ್ಲಿ ಎಚ್ಎಸ್ಆರ್ಪಿ ಅಳವಡಿಸಲು ಸೆಪ್ಟೆಂಬರ್ 15ರವರೆಗೆ ಅವಕಾಶ ನೀಡಲಾಗಿದೆ. HSRP ಗಳನ್ನು ಪಡೆಯದ ವಾಹನ ಮಾಲೀಕರು ಸೆ.16 ರಿಂದ ದಂಡವನ್ನು ಪಾವತಿಸಬೇಕಾಗಬಹುದು ಅಥವಾ ಇತರ ದಂಡದ ಕ್ರಮವನ್ನು ಎದುರಿಸಬೇಕಾಗುತ್ತದೆ. 2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ…

    Spread the love

    You Missed

    2024ರಲ್ಲಿ ಪೂಜಿಸಲ್ಪಟ್ಟ ಗಣಪ

    • By admin
    • September 10, 2024
    • 35 views
    2024ರಲ್ಲಿ  ಪೂಜಿಸಲ್ಪಟ್ಟ ಗಣಪ

    ಗಣಪನಿಗೆ 20 ಕೆಜಿ ಚಿನ್ನದ ಕಿರೀಟ ಕಾಣಿಕೆಯಾಗಿ ನೀಡಿದ ಅನಂತ್ ಅಂಬಾನಿ

    • By admin
    • September 7, 2024
    • 94 views
    ಗಣಪನಿಗೆ 20 ಕೆಜಿ ಚಿನ್ನದ ಕಿರೀಟ ಕಾಣಿಕೆಯಾಗಿ ನೀಡಿದ ಅನಂತ್ ಅಂಬಾನಿ

    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    • By admin
    • September 4, 2024
    • 215 views
    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    ವಾಹನ ಸವಾರರೇ ಗಮನಿಸಿ HSRP ನಂಬರ್ ಪ್ಲೇಟ್ ಆಳವಡಿಸದೇ ಇದ್ದಲ್ಲಿ ಸೆ.16ರಿಂದ ದಂಡ ಫಿಕ್ಸ್

    • By admin
    • September 4, 2024
    • 38 views
    ವಾಹನ ಸವಾರರೇ ಗಮನಿಸಿ HSRP ನಂಬರ್ ಪ್ಲೇಟ್ ಆಳವಡಿಸದೇ ಇದ್ದಲ್ಲಿ ಸೆ.16ರಿಂದ ದಂಡ ಫಿಕ್ಸ್

    ಸ್ಮಾರ್ಟ್ ಫೋನ್ ಬಳಕೆಗೂ ಮಿದುಳಿನ ಕ್ಯಾನ್ಸರ್ ಗೂ ಯಾವುದೇ ಸಂಬಂಧವಿಲ್ಲ: WHO ಸ್ಪಷ್ಟನೆ

    • By admin
    • September 4, 2024
    • 28 views
    ಸ್ಮಾರ್ಟ್ ಫೋನ್ ಬಳಕೆಗೂ ಮಿದುಳಿನ ಕ್ಯಾನ್ಸರ್ ಗೂ ಯಾವುದೇ ಸಂಬಂಧವಿಲ್ಲ: WHO ಸ್ಪಷ್ಟನೆ

    ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ, ಶರದ್ ಗೆ ಬೆಳ್ಳಿ ಮರಿಯಪ್ಪನ್ ಗೆ ಕಂಚಿನ ಪದಕ

    • By admin
    • September 4, 2024
    • 23 views
    ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ, ಶರದ್ ಗೆ ಬೆಳ್ಳಿ ಮರಿಯಪ್ಪನ್ ಗೆ ಕಂಚಿನ ಪದಕ