ರಾಜ್ಯಕ್ಕೆ ಬ್ಲ್ಯಾಕ್ ಫಂಗಸ್ ಬೆನ್ನಲ್ಲೇ ಮತ್ತೊಂದು ಶಾಕ್! ರಾಯಚೂರಿನಲ್ಲಿ 6 ಮಂದಿಗೆ ‘ವೈಟ್ ಫಂಗಸ್’ ಸೋಂಕು!

ರಾಯಚೂರು: ಕೊರೋನಾ, ಬ್ಲಾಕ್ ಫಂಗಸ್ ಬೆನ್ನಲ್ಲೇ ರಾಜ್ಯದಲ್ಲಿ ವೈಟ್‌ ಫಂಗಸ್‌ ಪ್ರಕರಣ ಪತ್ತೆಯಾಗಿದ್ದು, ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ 6 ಪ್ರಕರಣಗಳು ಪತ್ತೆಯಾದ ಮಾಹಿತಿ ಲಭ್ಯವಾಗಿದೆ.

ಖಾಸಗಿ ಆಸ್ಪತ್ರೆಯೊಂದರಲ್ಲೇ 6 ಜನರಲ್ಲಿ ವೈಟ್‌ ಫಂಗಸ್‌ ಪ್ರಕರಗಳು ಪತ್ತೆಯಾಗಿದ್ದು, ಅವ್ರು ಕೋವಿಡ್‌ನಿಂದ ಗುಣಮುಖರಾಗಿದ್ರು ಎಂದು ಖಾಸಗಿ ಆಸ್ಪತ್ರೆ ವೈದ್ಯ ಡಾ. ಮಂಜುನಾಥ್‌ ಮಾಹಿತಿ ನೀಡಿದ್ದಾರೆ.

READ ALSO

ಕೋವಿಡ್‌ನಿಂದ ಗುಣಮುಖರಾದ 6 ಮಂದಿಯಲ್ಲಿ ಈ ಬಿಳಿ ಶಿಲೀಂಧ್ರ ಪತ್ತೆಯಾಗಿದೆ.

ಈ ವೈಟ್‌ ಫಂಗಸ್‌ ಸೋಂಕಿತರು ಆತಂಕ ಪಡುವ ಆಗತ್ಯವಿಲ್ಲ. 14 ದಿನ ಔಷಧ ನೀಡಿದ್ರೆ 7 ದಿನಗಳಲ್ಲಿ ಗುಣಮುಖರಾಗ್ತಾರೆ. ಅನ್ನನಾಳಕ್ಕೆ ತೊಂದರೆ ನೀಡುವ ಸೋಂಕು ಜೀವ ಮಾರಕವಲ್ಲ. ವೈಟ್ ಫಂಗಸ್‌ ರಕ್ತಕ್ಕೆ ಸೇರಿದ್ರೆ ಮಾತ್ರ ಪ್ರಾಣಕ್ಕೆ ಆಪಾಯ. 100 ಜನರಿಗೆ ಸ್ಟಿರಾಯ್ಡ್‌ ನೀಡಿದ್ರೆ ಒಬ್ಬರಲ್ಲಿ ವೈಟ್‌ ಫಂಗಸ್‌ ತಗುಲುತ್ತೆ ಎಂದು ವೈದ್ಯ ಮಂಜುನಾಥ್‌ ಹೇಳಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಸಿರುವ ರಾಯಚೂರು ಜಿಲ್ಲಾಧಿಕಾರಿ ಆರ್‌. ವೆಂಕಟೇಶ್‌ ‘ ವೈಟ್‌ ಫಂಗಸ್‌ ಪ್ರಕರಣಗಳು ಪತ್ತೆಯಾದ ಬಗ್ಗೆ ರಾಯಚೂರಿನ ಖಾಸಗಿ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ವೈಟ್‌ ಫಂಗಸ್‌ ಬಗ್ಗೆ ಖಚಿತ ಪಡಿಸಿಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಸಂಜೆಯೊಳಗೆ ಈ ಬಗ್ಗೆ ಡಿಹೆಚ್‌ಒ ಮಾಹಿತಿ ನೀಡುತ್ತಾರೆ ಎಂದರು.