ಮೈಸೂರು: ಮಹಾಮಾರಿ ಕರೊನಾ ಚಿಕಿತ್ಸೆಗೂ ಪಿಪಿಪಿ ಮಾದರಿ (ಸಾರ್ವಜನಿಕರು-ಖಾಸಗಿ ಸಹಭಾಗಿತ್ವ) ಅಳವಡಿಸಿಕೊಳ್ಳಲಾಗಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಮೇಟಗಳ್ಳಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಯೋಗ ಆರಂಭಿಸಲಾಗಿದೆ.
ಮೈಸೂರಲ್ಲಿ ಕೋವಿಡ್ ರೋಗಿಗಳಿಗೆ ಐಸಿಯು ಬೆಡ್ ಕೊರತೆ ನೀಗಿಸಲು ಆದ್ಯತೆ ನೀಡಲಾಗಿದ್ದು, 70 ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ.
ಮೈಸೂರಿನ ಗೋಪಾಲಗೌಡ ಆಸ್ಪತ್ರೆ, ಆಶಾ ಕಿರಣ ಆಸ್ಪತ್ರೆ ವತಿಯಿಂದ ವೈದ್ಯಕೀಯ ಸಿಬ್ಬಂದಿ ನೆರವು ಮತ್ತು ಕಲ್ಯಾಣಿ ಮೆರಿಟೋಸ್ ಸಂಸ್ಥೆಯಿಂದ ಸುಮಾರು 1.5 ಕೋಟಿ ರೂ. ಮೌಲ್ಯದ ಐಸಿಯು ಬೆಡ್ ಉಪಕರಣ ನೀಡಿದೆ.
ಕರೊನಾ ಸೋಂಕಿತರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ದೊರೆಯಲಿದೆ. ವಾರ್ ರೂಂ ಮೂಲಕ ದಾಖಲಾತಿ ಪ್ರಕ್ರಿಯೆ ನಡೆಯಲಿದ್ದು, ವಿಭಿನ್ನ ಪ್ರಯತ್ನದೊಂದಿಗೆ ಇತರೆ ಜಿಲ್ಲೆಗಳಿಗೆ ಮೈಸೂರು ಮಾದರಿಯಾಗಿದೆ.