ಹೈದರಾಬಾದ್ : ಸೂಪರ್ ಸ್ಟಾರ್ ರಜನಿಕಾಂತ್ ರಕ್ತದೊತ್ತಡದಲ್ಲಿ ತೀವ್ರ ಏರುಪೇರು ಕಂಡು ಹೈದರಾಬಾದ್ ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪೋಲೋ ಆಸ್ಪತ್ರೆ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ‘ಇಂದು ಬೆಳಗ್ಗೆ ರಜನಿಕಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 10 ದಿನಗಳಿಂದ ಹೈದರಾಬಾದ್ ನಲ್ಲಿ ಸಿನಿಮಾ ವೊಂದರ ಶೂಟಿಂಗ್ ನಲ್ಲಿದ್ದಾರೆ. ಸೆಟ್ ನಲ್ಲಿದ್ದ ಒಂದೆರಡು ಮಂದಿ ಕೋವಿಡ್-19 ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಡಿಸೆಂಬರ್ 22ರಂದು ಕೋವಿಡ್-19 ಗಾಗಿ ರಜನಿಕಾಂತ್ ಅವರನ್ನು ಪರೀಕ್ಷಿಸಲಾಗಿತ್ತು. ರಜನಿಕಾಂತ್ ಅವರಿಗೆ ಕೊರೋನಾ ನೆಗೆಟಿವ್ ಎಂಬುದಾಗಿ ತಿಳಿಸಿದೆ.
ಕರೋನಾ ನೆಗೆಟಿವ್ ಎಂಬುದಾಗಿ ಪರೀಕ್ಷೆಯ ವರದಿಯಿಂದ ತಿಳಿದು ಬಂದರೂ, ಅಂದಿನಿಂದ ಅವರು ಪ್ರತ್ಯೇಕಗೊಂಡು, ಸೂಕ್ಷ್ಮವಾಗಿ ನಿಗಾ ವಹಿಸುತ್ತಿದ್ದಾರೆ.